ನಾಯಕತ್ವ ಬದಲಾವಣೆ, ಸಂಪುಟ ಸರ್ಜರಿ ಆಗೋದಿಲ್ಲ; 5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ

Published : Jul 10, 2025, 01:28 PM IST
Siddaramaiah

ಸಾರಾಂಶ

ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಊಹಾಪೋಹಗಳಿಗೆ ದೆಹಲಿಯಿಂದಲೇ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, 5 ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ. ಸಂಪುಟ ಪುನರ್ ರಚನೆಯೂ ಇಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿ/ಬೆಂಗಳೂರು (ಜು.10): ಕರ್ನಾಟಕ ರಾಜಕೀಯ ವಲಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ದೆಹಲಿಯಿಂದಲೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ನಾನು 5 ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಹೈಕಮಾಂಡ್‌ನ ಅನುಮೋದನೆ ಹೊಂದಿದ ನಿರ್ಧಾರ' ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಾಯಕತ್ವ ಬದಲಾವಣೆಯ ವಿಷಯವೇ ಇಲ್ಲ ಅಂತಾ ಅವರು ಹೇಳಿದ ಮೇಲೆ ಇನ್ನೇನು ಊಹೆ? ಮಾಧ್ಯಮಗಳೇ ಇದನ್ನೆಲ್ಲ ಗಾಳಿ ಸುದ್ದಿ ಮಾಡ್ತಿವೆ. ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ಸ್ಪಷ್ಟ ನಿಲುವು ತಾಳಿದೆ. ಯಾವುದೇ ಶಾಸಕರು ಅಥವಾ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸುವುದು ನೈಸರ್ಗಿಕ ಎಂದು ತಿಳಿಸಿದ್ದಾರೆ. 'ಪಕ್ಷದೊಳಗೆ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದನ್ನೇ ನಾವು ಎಲ್ಲರೂ ಬದ್ಧವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಸೆಪ್ಟೆಂಬರ್ ಕ್ರಾಂತಿ ಅಂದ್ರೆ ಬದಲಾವಣೆನಾ?

ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಒಳಗಾದ 'ಸೆಪ್ಟೆಂಬರ್ ಕ್ರಾಂತಿ' ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಕ್ರಾಂತಿ ಅಂದ್ರೆ ಬದಲಾವಣೆ ಅಂತಾನಾ? ಬದಲಾವಣೆ ಬಗ್ಗೆ ಮಾತನಾಡೋ ಅಧಿಕಾರ ಖರ್ಗೆ, ರಾಹುಲ್ ಗಾಂಧಿ, ವೆಣುಗೋಪಾಲ್ ಅವರಿಗೆ ಮಾತ್ರ ಇದೆ. ಬೇರೆ ಯಾರೂ ಊಹಿಸುವ ಅಗತ್ಯವಿಲ್ಲ. ನಾಯಕತ್ವ ಬದಲಾವಣೆ ಎಂಬುದು ಒಂದಿಷ್ಟು ಶಾಸಕರ ಅಭಿಮಾನದ ಮಾತಾಗಬಹುದು. ಇಲ್ಲಿ ಯಾವುದೇ ನಾಯಕತ್ವ ಬದಲಾವಣೆಯೂ ನಡೆಯುತ್ತಿಲ್ಲ. ಆದರೆ, ಎರಡೂವರೆ ವರ್ಷಗಳ ಬಳಿಕ ಚರ್ಚೆ ಆಗುವುದು ಸಹಜ. ಆದ್ದರಿಂದ ನಾನು ಮೊದಲಿನಿಂದಲೂ 5 ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳುತ್ತಿದ್ದೇನೆ' ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

ಸಚಿವ ಸಂಪುಟ ಪುನರ್ ರಚನೆಯಿಲ್ಲ:

ರಾಜ್ಯದಲ್ಲಿ 'ಸದ್ಯಕ್ಕೆ ಸಂಪುಟ ಪುನರ್ ರಚನೆ ಸಾಧ್ಯವಿಲ್ಲ. ಹೈಕಮಾಂಡ್ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ನಾಯಕತ್ವ ಬದಲಾವಣೆಯೂ ಇಲ್ಲ. 2028ರ ವಿಧಾನಸಭಾ ಚುನಾವಣೆ ನನ್ನದೇ ನಾಯಕತ್ವ ಹೋಗಲಿದ್ದೇವೆ. ದೆಹಲಿಯಲ್ಲಿ ನಾವು ರಾಹುಲ್‌ಗಾಂಧಿ ಭೇಟಿಯಾಗಲ್ಲ, ಅವರು ಚರ್ಚೆಗೆ ಕರೆದಿಲ್ಲ. ರಾಜ್ಯ ಉಸ್ತುವಾರಿ ಸುರ್ಜೆವಾಲ ಭೇಟಿಗೆ ಕರೆದಿದ್ದಾರೆ. ಆದರೆ, ರಾಹುಲ್ ಗಾಂಧಿ ಮತ್ತು ಖರ್ಗೆ ಅವರನ್ನು ಭೇಟಿ ಮಾಡಲು ಪ್ರಯತ್ನ ಮಾಡಿದೆ, ಇದ್ದರೆ ಭೇಟಿ ಮಾಡೊಣ ಅಂತಾ, ಆದರೆ ಖರ್ಗೆಯವರು ಬ್ಯುಸಿ ಇದ್ದಾರೆ. ಸಚಿವ ಸಂಪುಟ ಪುನರ್ ರಚನೆ ಇಲ್ಲ ಎಂದು ಹೇಳಿದರು.

ಗ್ಯಾರಂಟಿ ನೀಡಿದರೆ ಜನ ಸೋಮಾರಿಯಾಗೋದಿಲ್ಲ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಲವರ ಟೀಕೆಗಳ ಹಿನ್ನೆಲೆಯಲ್ಲೂ ಮಾತನಾಡಿದ ಸಿಎಂ, 'ಸ್ವಾಮೀಜಿಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಗ್ಯಾರಂಟಿ ಯೋಜನೆಗಳಿಂದ ಜನ ಸೋಮಾರಿಯಾಗೋದಿಲ್ಲ, ಇದು ಅವರಿಗೆ ಜೀವೋಪಾಯದ ಸಹಾಯ' ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ