ದಿಂಗಾಲೇಶ್ವರ ಶ್ರೀಗಳು ಚುನಾವಣೆಗೆ ಸ್ಪರ್ಧಿಸುವ ದುಸ್ಸಾಹಸಕ್ಕೆ ಮುಂದಾಗಬಾರದು: ಬಿಎಸ್‌ವೈ

By Kannadaprabha News  |  First Published Apr 16, 2024, 9:50 AM IST

ಧಾರವಾಡ ಜಿಲ್ಲೆಯ ಜನರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರವಾಗಿದ್ದಾರೆ. ಫಕೀರ ದಿಂಗಾಲೇಶ್ವರ ಶ್ರೀಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.


ಹುಬ್ಬಳ್ಳಿ (ಏ.16) : ಧಾರವಾಡ ಜಿಲ್ಲೆಯ ಜನರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರವಾಗಿದ್ದಾರೆ. ಫಕೀರ ದಿಂಗಾಲೇಶ್ವರ ಶ್ರೀಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿ, ನಾನು ಮತ್ತೊಮ್ಮೆ ಶ್ರೀಗಳನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುವೆ. ನಿಮ್ಮ ಮೂಲಕವೂ ನಾನು ಮತ್ತೊಮ್ಮೆ ವಿನಂತಿ ಮಾಡುತ್ತೇನೆ. ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದರು.

Latest Videos

undefined

ಪಕ್ಷದ ವರಿಷ್ಠರಿಂದ ದಿಂಗಾಲೇಶ್ವರ ಶ್ರೀಗಳ ಮನವೊಲಿಕೆ: ಮಾಜಿ ಸಚಿವ ಮುರುಗೇಶ ನಿರಾಣಿ

ಪ್ರಹ್ಲಾದ ಜೋಶಿ ಪ್ರಬುದ್ಧ ರಾಜಕಾರಣಿ. ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಶ್ರೀರಕ್ಷೆಯಾಗಿವೆ. ರಾಜ್ಯಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆಯಿದ್ದು, ಈ ಬಾರಿಯೂ ಜೋಶಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಏ.18ರಂದು ದಿಂಗಾಲೇಶ್ವರ ನಾಮಪತ್ರ ಸಲ್ಲಿಕೆ:

ಏ.೧೮ರಂದು ನಾನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು, ನೀವು ಮತ ಮಾರುವ ಬದಲು ದಾನವಾಗಿ ನಂಗೆ ನೀಡಬೇಕು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಂಗನ ಬಸವ ಮಂಗಲ ಭವನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಒಬ್ಬ ಸ್ವಾಮಿ ರಾಜಕಾರಣಕ್ಕೆ ಬಂದ್ರೆ ಯಾವ ರೀತಿ ಕೆಲಸ ಮಾಡಬಹುದು ಎಂದು ದೇಶ ನಿಮ್ಮ ಕಡೆ ತಿರುಗಿ ನೋಡುವ ರೀತಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.

ಮಠದ ಉದ್ಧಾರಕ್ಕೆ ಸ್ವಾಮಿಗಳಿರುತ್ತಾರೆ..ಅವರೇ ರಾಜಕೀಯಕ್ಕೆ ಬಂದ್ರೆ ಹೇಗೆ ?: ದಿಂಗಾಲೇಶ್ವರ ಶ್ರೀ ವಿರುದ್ಧ ಭಕ್ತರ ಕಿಡಿ

ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಒಂದು ಕೆಲಸದ ಬಗ್ಗೆ ನಾನು ಫೋನ್ ಮಾಡಿದೆ, ನಿಮ್ಮ ಲಿ೦ಗಾಯತ ನಾಯಕರು ಯಾರು ಇಲ್ಲವೇ ಅವರಿಗೆ ಹೇಳಿ ಎಂದರು. ಅವರ ಆ ಮಾತು ಬಹಳ ಬೇಸರ ತಂದಿದೆ. ಈಗ ಅನಿವಾರ್ಯವಾಗಿ ನಾನು ಸ್ಪರ್ಧೆ ಮಾಡುವ ನಿರ್ಣಯ ಕೈಗೊಳ್ಳಬೇಕಾಯಿತು ಎಂದರು.

ಈ ಸಂದರ್ಭದಲ್ಲಿ ಮಹೇಶ ವಾಲ್ಮೀಕಿ, ನವೀನ ಕಲ್ಲೊಳ್ಳಿಮಠ, ಚನ್ನಬಸನಗೌಡ ಪಾಟೀಲ, ರೈತ ಮುಖಂಡ ಬಸಲಿಂಗಪ್ಪ ನರಗುಂದ, ಕಿವಡನವರ, ಎಸ್.ವಿ. ಕಲ್ಲೋಳ್ಳಿಮಠ ಸೇರಿದಂತೆ ಹಲವರು ಮಾತನಾಡಿದರು. ಹಿರಿಯ ಮುಖಂಡ ಸಿ.ವಿ. ಮತ್ತಿಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

click me!