
ಹಾವೇರಿ (ಮಾ.13) : ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಮುಂದಿನ ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೆ ಸತ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದರು.
ಹಾವೇರಿ(Haveri)ಯಲ್ಲಿ ನಡೆದ ಪ್ರಜಾಧ್ವನಿಯಾತ್ರೆ(Prajadhwani yatre) ಮಾತನಾಡಿದ ಅವರು, ಬಿಜೆಪಿಯವರು ವಚನ ಭ್ರಷ್ಟರಾಗಿದ್ದಾರೆ. ನಾವು ಕೊಟ್ಟ ಭರವಸೆ ಈಡೇರಿಸಲು ಆಗದಿದ್ರೆ ಒಂದು ಸೆಕೆಂಡ್ ಇರಲ್ಲ, ಅಧಿಕಾರ ಬಿಟ್ಟು ಹೋಗ್ತಿವಿ ಎಂದು ಹೇಳಿದ್ದ ಬಿಜೆಪಿಯವ್ರು ಒಂದು ಭರವಸೆಯೂ ಈಡೇರಿಸಿಲ್ಲ. ಇವರ ಮನೆ ಹಾಳಾಗ ಭರವಸೆ ಈಡೇರಿಸಿದಿದ್ರೆ ಯಾಕೆ ಇರಬೇಕು ಅಧಿಕಾರದಲ್ಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರದ ತೆರಿಗೆ ನೀತಿಯಿಂದ ಜನರ ಬದುಕು ದುಸ್ತರ : ಮಧು ಬಂಗಾರಪ್ಪ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಮತ ನೀಡಿ. ನೀವು ಕೊಡುವ ವೋಟು ನಮಗೆ ಕೊಟ್ಟಹಾಗೆ. ನಾನು ಅಧಿಕಾರದಲ್ಲಿದ್ದಾಗ ಬಡವರಿಗೆ 15 ಲಕ್ಷ ಮನೆ ಕೊಟ್ಟೆ. ಆದರೆ ಇವರು ಒಂದೇ ಒಂದು ಮನೆ ಕೊಡಲಿಲ್ಲ. ಬಡವರಿಗೆ ಸುರು ಕೊಡಲು ಆಗದಿದ್ರೆ ಕೊಟ್ಟ ಮಾತಿನಂತೆ ಒಂದು ಸೆಕೆಂಡ್ ಅಧಿಕಾರದಲ್ಲಿ ಇರಬಾರದು. ಇದು ಬಡವರ ಪರ ಸರ್ಕಾರ ಅಲ್ಲ. ಇಂಥ ಭ್ರಷ್ಟ ಸರ್ಕಾರದಲ್ಲಿ ಬಡವರು ಬದುಕು ದುಸ್ತರ ಎಂದರು.
ಬಿಜೆಪಿಯವ್ರು ನಾವು ಅಡುಗೆ ಮಾಡಿಟ್ಟಮೇಲೆ ಬಡಿಸಲು ಬರುವ ಗಿರಾಕಿಗಳು ಇದ್ದಹಾಗೆ. ಮಂಡ್ಯ ಹೆದ್ದಾರಿ ಮಂಜೂರು ಮಾಡಿದ್ದು ನಾನು ಸಿಎಂ ಆಗಿದ್ದಾಗ. ಆದರೆ ನಾವು ಮಾಡಿದ್ದನ್ನೇ ಇವತ್ತು ಉದ್ಘಾಟನೆ ಮಾಡ್ತಿದ್ದಾರೆ. ಅದಕ್ಕಾಗಿ ಮಂಡ್ಯಕ್ಕೆ ಮೋದಿ(Narendra Modi)ಯವರನ್ನ ಕರೆಕೊಂಡು ಬರುತ್ತಾರೆ, ಇವರಿಗೆ ಯಾರಿಗೂ ಮುಖವಿಲ್ಲ, ಇವರು 40% ಗಿರಾಕಿಗಳು. ಕಂದಾಯ ಗ್ರಾಮ ಮಾಡಲು ಕಾನೂನು ತಿದ್ದುಪಡಿ ಮಾಡಿದ್ದು ನಮ್ಮ ಸರಕಾರ. ಅದರ ಹಕ್ಕು ಪತ್ರ ಹಂಚಲು ಮೋದಿ ಯವರು ಸೇಡಂಗೆ ಹೋಗಿದ್ರು. ಅದಕ್ಕೆ ನಾನು ಹೇಳೋದು ಈ ಬಿಜೆಪಿಯವರು ಅಡುಗೆ ಮಾಡಿ ಇಟ್ಟ ಮೇಲೆ ಬಡಿಸಲು ಬರುವ ಗಿರಾಕಿಗಳು. ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮತಾಂಧ ಟಿಪ್ಪುವನ್ನು ಕೊಂದ ದೊಡ್ಡ ನಂಜೇಗೌಡ, ಉರಿಗೌಡರ ಹೆಸರು ತೆರವುಗೊಳಿಸಿದ್ದು ತಪ್ಪು: ಸಿ.ಟಿ.ರವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.