ಮೋದಿ ಸರ್ಕಾರದ ತೆರಿಗೆ ನೀತಿ​ಯಿಂದ ಜನರ ಬದುಕು ದುಸ್ತರ : ಮಧು ಬಂಗಾರಪ್ಪ

By Kannadaprabha News  |  First Published Mar 13, 2023, 10:42 PM IST

ಬಿಜೆಪಿಯ ತೆರಿಗೆ ಭಾರ ಜನಸಾಮಾನ್ಯರು ಹೊರಲಾರದಷ್ಟುಭಾರವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮವರ್ಗದವರ ಬದುಕು ಇನ್ನಷ್ಟುಬಿಗಡಾಯಿಸುತ್ತದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.


ಸೊರಬ (ಮಾ.13) : ಬಿಜೆಪಿಯ ತೆರಿಗೆ ಭಾರ ಜನಸಾಮಾನ್ಯರು ಹೊರಲಾರದಷ್ಟುಭಾರವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮವರ್ಗದವರ ಬದುಕು ಇನ್ನಷ್ಟುಬಿಗಡಾಯಿಸುತ್ತದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ(Madhu bangarappa) ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ತಾಲೂಕಿನ ಸ್ವಗ್ರಾಮವಾದ ಕುಬಟೂರು ಗ್ರಾಮದಲ್ಲಿ ಕಾಂಗ್ರೆಸ್‌(Congress) ವತಿಯಿಂದ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ ವಿತರಣಾ ಕಾರ್ಯಕ್ರಮ(Congress Guarantee Card Distribution Programme)ಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರ ಅಡುಗೆ ಅನಿಲ, ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಸತತವಾಗಿ ಹೆಚ್ಚಿಸುತ್ತಿರುವುದರಿಂದ ಜನಸಾಮಾನ್ಯರ ಬದುಕನ್ನು ಅತ್ಯಂತ ದುಸ್ಥಿತಿಗೆ ತಂದು ನಿಲ್ಲಿಸಿದೆ ಎಂದರು.

Tap to resize

Latest Videos

ಮೋದಿಯವರ ಆಡ​ಳಿತ ಮೆಚ್ಚಿ ವಿಶ್ವವೇ ಕೊಂಡಾಡುತ್ತಿದೆ: ಕುಮಾರ ಬಂಗಾರಪ್ಪ

ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ತಮ್ಮ ಅಧಿಕಾರವಧಿಯಲ್ಲಿ ಕೃಷಿಕರು ಮತ್ತು ಜನಸಾಮಾನ್ಯರ ನಾಡಿಮಿಡಿತ ಅರಿತು, ಕೃಷಿ ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಿ ರೈತರಿಗೆ ನೆರವಾಗಿದ್ದರು. ಇನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳನ್ನು ಚುನಾವಣೆಗೂ ಮೊದಲೇ ಹಂತ ಹಂತವಾಗಿ ಗ್ಯಾರಂಟಿ ಕಾರ್ಡ್‌ ವಿತರಿಸುತ್ತಿರುವುದರಿಂದ ಜನತೆ ಕಾಂಗ್ರೆಸ್‌ ಮೇಲೆ ನಂಬಿಕೆ ಮತ್ತು ವಿಶ್ವಾಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸಂಪೂರ್ಣ ಬಲದೊಂದಿಗೆ ಅಧಿಕಾರಿಕ್ಕೆ ಬರುತ್ತದೆ ಎಂದರು.

ಜನರ ಹಣ ಜನರಿಗೇ ತಲುಪಬೇಕೆನ್ನುವುದು ಕಾಂಗ್ರೆಸ್‌ನ ಸಿದ್ಧಾಂತವಾಗಿದ್ದು, ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ನೇರವಾಗಿ ಬ್ಯಾಂಕ್‌ ಖಾತೆಗೆ ಮತ್ತು ರಾಜ್ಯದ 4 ಕೋಟಿ ಜನರಿಗೆ ಪ್ರತಿಯೊಬ್ಬರಿಗೂ 10 ಕೆ.ಜಿ. ಉಚಿತ ಅಕ್ಕಿ ನೀಡಿವುದು ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಕಾರ್ಡ್‌ನಲ್ಲಿದೆ ಎಂದ ಅವರು, ಗ್ಯಾರಂಟಿ ಕಾಡ್‌ ಯೋಜನೆ ಇತಿಹಾಸ ಸೃಷ್ಟಿಸುತ್ತೆ. ಆದ್ದರಿಂದ ಭ್ರಷ್ಟಬಿಜೆಪಿ ತೊಲಗಿಸಿ, ಕರ್ನಾಟಕ ಉಳಿಸಿ. ಜನತೆಗೆ ಭರವಸೆಯ ಬೆಳಕೆಂದರೆ ಅದು ಕಾಂಗ್ರೆಸ್‌ ಮಾತ್ರ ಎಂದರು.

ಜಮ್ಮು ಕಾಶ್ಮೀರದಲ್ಲಿ ಉಗ್ರರು ತೆಪ್ಪಗಾಗಿ ಶಾಂತಿ ನೆಲೆಸಿರುವುದಕ್ಕೆ ಕಾರಣ ಮೋದಿ ಆಡಳಿತ:

ಈ ಸಂದರ್ಭದಲ್ಲಿ ಮುಖಂಡರಾದ ಪಿ.ಎಸ್‌. ಮಂಜುನಾಥ, ಹೊಳೆಲಿಂಗಪ್ಪ, ರವಿಕಿರಣ್‌, ಉದಯಕುಮಾರ್‌, ಉಮೇಶ್‌, ನಿಂಗಪ್ಪ, ಸಂಜೀವ್‌, ಹಬೀಬುಲ್ಲಾ ಹವಾಲ್ದಾರ್‌ ಮೊದಲಾದವರು ಹಾಜರಿದ್ದರು.

click me!