
ಆಲಮಟ್ಟಿ (ಮಾ.13) : ಟಿಪ್ಪುವನ್ನು ಕೊಂದಿದ್ದು ದೊಡ್ಡ ನಂಜೇಗೌಡ ಹಾಗೂ ಉರಿಗೌಡ. ಹೀಗಾಗಿ, ಮಂಡ್ಯದಲ್ಲಿ ನಡೆದ ಮೋದಿ ಕಾರ್ಯಕ್ರಮದಲ್ಲಿ ದ್ವಾರಕ್ಕೆ ಅವರ ಹೆಸರು ಇಡಲಾಗಿತ್ತು. ಆದರೆ, ಏಕಾಏಕಿ ಅವರ ಹೆಸರನ್ನು ತೆರವುಗೊಳಿಸಿದ್ದು ತಪ್ಪು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿದರು.
ವಿಜಯಪುರ(Vijayapur) ಜಿಲ್ಲೆಯ ಆಲಮಟ್ಟಿ(Alamatti)ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೌಡಿಶೀಟರ್ ಫೈಟರ್ ರವಿ(Rowdy sheetar fighter ravi) ಹಾಗೂ ಮೋದಿ ಭೇಟಿ ಮತ್ತು ಶಾಸಕ ಕುಮಟಳ್ಳಿಗೆ ಟಿಕೆಟ್ ಕೊಡುವ ಬಗ್ಗೆ ರಮೇಶ ಜಾರಕಿಹೊಳಿ ಹೇಳಿಕೆ ಕುರಿತು ಸಿ.ಟಿ.ರವಿ ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.. ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ನೀಡಿದ್ದರು. ಅವರನ್ನು ಸ್ವಾಗತಿಸಲು ನಂಜೇಗೌಡ, ಉರಿಗೌಡರ ಫೋಟೊ ಬಳಸಿ ಧ್ವಾರಕ್ಕೆ ಹಾಕಲಾಗಿತ್ತು. ಅವರಿಬ್ಬರೂ ಮತಾಂಧ ಟಿಪ್ಪು ವಿರುದ್ಧ ಹೋರಾಡಿದವರು ಅಷ್ಟೇ ಅಲ್ಲ, ಟಿಪ್ಪುವನ್ನು ಕೊಂದವರು. ಇಂಥ ವೀರರ ಫೋಟೊ ತೆರವುಗೊಳಿಸಿದ್ದು ಸರಿಯೆಲ್ಲ ಎಂದರು.
ಉರಿಗೌಡ, ನಂಜೇಗೌಡ ಕಾಲ್ಪನಿಕ ಸೃಷ್ಟಿ : ಬಿಜೆಪಿಯಿಂದ ಒಕ್ಕಲಿಗರಿಗೆ ಅವಮಾನ
ಶೀಘ್ರ ಗೆಜೆಟ್:
ಕೃಷ್ಣಾ ನ್ಯಾಯಾಧಿಕರಣ ಪ್ರಾಧಿಕಾರ-2ರ ತೀರ್ಪಿನ ಗೆಜೆಟ್ ಶೀಘ್ರ ಪ್ರಕಟಗೊಳ್ಳಲಿದೆ. ಈ ಬಗ್ಗೆ ಸುಪ್ರಿಂಕೋರ್ಚ್‌ನಲ್ಲಿ ಮೊಕದ್ದಮೆ ಇದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ವಾದ ಪೂರ್ಣಗೊಂಡಿವೆ. ಇನ್ನೂ ಸೀಮಾಂಧ್ರದ ವಾದ ಬಾಕಿ ಇದೆ. ಅದು ಪೂರ್ಣಗೊಂಡ ನಂತರ ಗೆಜೆಟ್ ಹೊರಡಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.