ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ: 4 ಶಾಸಕರ ಪೈಕಿ ಯಾರಿಗೆ ಸಿಗಲಿದೆ ಪಟ್ಟ, ಚರ್ಚೆ ಜೋರು !

Published : May 19, 2023, 04:33 AM IST
ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ: 4 ಶಾಸಕರ ಪೈಕಿ ಯಾರಿಗೆ  ಸಿಗಲಿದೆ ಪಟ್ಟ, ಚರ್ಚೆ ಜೋರು !

ಸಾರಾಂಶ

ರಾಜ್ಯ​ದಲ್ಲಿ ರಚನೆಗೊಂಡಿ​ರುವ ಕಾಂಗ್ರೆಸ್‌ ಸರ್ಕಾ​ರದ ಸಚಿವ ಸಂಪು​ಟ​ದಲ್ಲಿ ಈ ಬಾರಿ​ಯಾ​ದರು ರಾಯ​ಚೂರು ಜಿಲ್ಲೆಗೆ ದೊರೆ​ಯ​ಲಿ​ದೆಯೇ ಸ್ಥಾನ? ಇದೀಗ ಜಿಲ್ಲೆ​ಯಾ​ದ್ಯಂತ ಬಹು ಚರ್ಚಿತ ವಿಷಯ ಇದು.

ರಾಮ​ಕೃಷ್ಣ ದಾಸರಿ

ರಾಯ​ಚೂ​ರು (ಮೇ.19) ರಾಜ್ಯ​ದಲ್ಲಿ ರಚನೆಗೊಂಡಿ​ರುವ ಕಾಂಗ್ರೆಸ್‌ ಸರ್ಕಾ​ರದ ಸಚಿವ ಸಂಪು​ಟ​ದಲ್ಲಿ ಈ ಬಾರಿ​ಯಾ​ದರು ರಾಯ​ಚೂರು ಜಿಲ್ಲೆಗೆ ದೊರೆ​ಯ​ಲಿ​ದೆಯೇ ಸ್ಥಾನ? ಇದೀಗ ಜಿಲ್ಲೆ​ಯಾ​ದ್ಯಂತ ಬಹು ಚರ್ಚಿತ ವಿಷಯ ಇದು.

ವಿಧಾ​ನ​ಸಭೆ ಸಾರ್ವ​ತ್ರಿಕ ಚುನಾ​ವ​ಣೆಯಲ್ಲಿ ಜಿಲ್ಲೆ ಏಳು ಕ್ಷೇತ್ರ​ಗಳ ಪೈಕಿ 4ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹೊಸ ಸರ್ಕಾ​ರದಲ್ಲಿ ​ಕಾಂಗ್ರೆ​ಸ್‌ನ ನಾಲ್ಕು ಜನ ಶಾಸ​ಕರಲ್ಲಿ ಯಾರು ಸಚಿವ ಸ್ಥಾನ​ವನ್ನು ಅಲಂಕ​ರಿ​ಸು​ತ್ತಾ​ರೆ ಎನ್ನು​ವ ಸಂಗ​ತಿ ತೀವ್ರ ಕುತೂ​ಹ​ಲಕ್ಕೆ ಕಾರ​ಣ​ವಾ​ಗಿ​ದೆ.

Raichur Election Result 2023: 'ಕೈ' ಹಿಡಿದ ಬಿಸಿಲ ನಾಡ ಜನತೆ!

ಅನು​ಭವ, ಜಾತಿ ಹಾಗೂ ವರಿ​ಷ್ಠರ ಪ್ರೀತಿ​ಪಾ​ತ್ರ​ರಾ​ದ​ವ​ರಿಗೆ ಸಚಿವ ಸ್ಥಾನ ದೊರೆ​ಯ​ಲಿದೆ ಎನ್ನುವ ಲೆಕ್ಕಾ​ಚಾ​ರವು ಜೋರಾಗಿ ಸಾಗಿದೆ. ರಾಯ​ಚೂರು ಗ್ರಾಮೀಣ ಶಾಸಕ ಬಸ​ನ​ಗೌಡ ದದ್ದಲ್‌(Basangowda daddal MLA), ಮಾನ್ವಿ ಜಿ.ಹಂಪಯ್ಯ ನಾಯಕ(G Hampaiah nayak MLA), ಸಿಂಧ​ನೂ​ರಿನ ಹಂಪ​ನ​ಗೌಡ ಬಾದರ್ಲಿ(Hampanagowda badarli MLA) ಹಾಗೂ ಮಸ್ಕಿಯ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ(R Basangowda turvihal) ಅವರು ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ.

ಅ​ನು​ಭವ, ಹಿರಿತನ, ಜಾತಿ ಲೆಕ್ಕಾ​ಚಾರ, ಲಿಂಗಾ​ಯತ ಸಮು​ದಾ​ಯಕ್ಕೆ ಸೇರಿದ, ಐದು ಸಲ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ರುವ ಸಿಂಧ​ನೂ​ರಿನ ಹಂಪ​ನ​ಗೌಡ ಬಾದರ್ಲಿ ಅವರು ರೇಸಿನಲ್ಲಿ ಮೊದಲ ಸ್ಥಾನ​ದ​ಲ್ಲಿ​ದ್ದಾರೆ. ಇನ್ನು ಮಾನ್ವಿ ಜಿ.ಹಂಪಯ್ಯ ನಾಯಕ ಅವರು ಮೂರು ಬಾರಿ ಶಾಸ​ಕ​ರಾ​ಗಿದ್ದು, ಪರಿ​ಶಿಷ್ಟಪಂಗ​ಡದ ಕೋಠಾ​ದಡಿ ಸಚಿವ ಸ್ಥಾನ ಪಡೆ​ಯುವ ಸಾಧ್ಯ​ತೆ​ಗ​ಳಿವೆ. ಇನ್ನು ಅದೇ ಎಸ್ಟಿಸಮು​ದಾ​ಯಕ್ಕೆ ಸೇರಿ​ರುವ ಬಸ​ನ​ಗೌಡ ದದ್ದಲ್‌ ಮತ್ತು ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಅವರು ಎರಡು ಸಲ ಶಾಸ​ಕ​ರಾಗಿ ಆಯ್ಕೆ​ಯಾ​ಗಿದ್ದು ಅವರು ಸಚಿವರಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಯಾವುದೇ ಪಕ್ಷ​ಗಳ ಸರ್ಕಾ​ರದ ರಚ​ನೆ​ಗೊಂಡರೂ ಜಿಲ್ಲೆಗೆ ಸಚಿವ ಸ್ಥಾನ ನೀಡದೇ ನಿರಂತರ ಅನ್ಯಾಯ ಮಾಡುತ್ತಾ ಬಂದಿ​ರು​ವು​ದರ ವಿರುದ್ಧ ಜನ​ಸಾ​ಮಾ​ನ್ಯರು ತೀವ್ರ ಬೇಸ​ರ​ಗೊಂಡಿ​ದ್ದಾ​ರೆ. 2010ರ ಬಿಜೆಪಿ ಸರ್ಕಾ​ರದ ಅವ​ಧಿ​ಯಲ್ಲಿ ಜಿಲ್ಲೆ ಕೆ.ಶಿ​ವ​ನ​ಗೌಡ ನಾಯಕ ಮತ್ತು 2018ರ ಆರಂಭದ ಅವ​ಧಿ​ಯಲ್ಲಿ ಕಾಂಗ್ರೆ​ಸ್‌-ಜೆಡಿ​ಎಸ್‌ ಸಮ್ಮಿಶ್ರ ಸರ್ಕಾ​ರ​ದ​ಲ್ಲಿ ಸಿಂಧ​ನೂ​ರಿನ ವೆಂಕ​ಟ​ರಾವ್‌ ನಾಡ​ಗೌ​ಡರು ಅಲ್ಪಾ​ವ​ಧಿಗೆ ಸಚಿ​ವ​ರಾ​ಗಿದ್ದು ಬಿಟ್ಟರೆ ಕಳೆದ 15 ವರ್ಷ​ಗ​ಳಿಂದ ರಾಯ​ಚೂರು ಜಿಲ್ಲೆ ಸಚಿವ ಸ್ಥಾನ​ದಿಂದ ವಂಚಿ​ತ​ಗೊ​ಳ್ಳು​ತ್ತಲೇ ಬಂದಿದೆ. ಉಸ್ತು​ವಾರಿ ಸಚಿ​ವರೂ ಸಹ ಬೇರೆ ಜಿಲ್ಲೆ​ಯ​ವ​ರಾ​ಗಿ​ದ್ದರಿಂದ ಅಭಿ​ವೃ​ದ್ಧಿಗೆ ತೀವ್ರ ಹಿನ್ನಡೆ ಉಂಟಾ​ಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ; ಮುದ​ಗ​ಲ್‌​ನಲ್ಲಿ ಮತದಾನಕ್ಕಾಗಿ ವೃದ್ಧರ ಪರದಾಟ!

2013ರ ಸಿದ್ದ​ರಾ​ಮಯ್ಯ ಅವರ ಸರ್ಕಾ​ರ​ದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ದೊರೆ​ಯು​ತ್ತದೆ ಎನ್ನುವ ನಿರೀಕ್ಷೆ ಹುಸಿ​ಯಾ​ಗಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾ​ರದ ಅಲ್ಪಾ​ವ​ಧಿಗೆ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕರೂ ಸಹ ಅದು ಹೆಸ​ರಿ​ಗಷ್ಟೇ ಎನ್ನು​ವಂತಾ​ಗಿತ್ತು. ನಂತರ ಅಧಿ​ಕಾರ ವಹಿ​ಸಿ​ಕೊಂಡ ಬಿಜೆಪಿ ಎರ​ಡ್ಮೂರು ಸಲ ಸಚಿವ ಸಂಪು​ಟದ ವಿಸ್ತ​ರ​ಣೆ​ಯನ್ನು ಮಾಡಿ​ದರೂ ಮಲ​ತಾಯಿ ಧೋರಣೆ ಪರಿ​ಣಾಮ ಜಿಲ್ಲೆಯು ಸಚಿವ ಸ್ಥಾನ​ದಿಂದ ವಂಚಿ​ತ​ಗೊ​ಳ್ಳು​ತ್ತಲೇ ಬಂದಿತು. ಇದೀಗ ಸಿದ್ದ​ರಾ​ಮಯ್ಯ ಸಚಿವ ಸಂಪು​ಟ​ದ​ಲ್ಲಿ​ಯಾ​ದರು ಜಿಲ್ಲೆಗೆ ಸಚಿವ ಸ್ಥಾನ​ ಸಿಗಲಿದೆಯೇ ಎಂದು ಜನತೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ