Karnataka election results 2023: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

By Kannadaprabha News  |  First Published May 14, 2023, 1:01 AM IST
  • ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ
  • 25ರ ಪೈಕಿ ಕಾಂಗ್ರೆಸ್‌ಗೆ 19, ಬಿಜೆಪಿಗೆ 5, ಜೆಡಿಎಸ್‌ಗೆ 1 ಸ್ಥಾನ
  • ಕಳೆದ ಬಾರಿ ಫಲಿತಾಂಶ ಉಲ್ಟಾ
  • ಕಮಲ ಬಾಡಿಸುವಲ್ಲಿ ಯಶ ಕಂಡ ಕಾಂಗ್ರೆಸ್‌
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ವೈಟ್‌ವಾ

ಚಿಕ್ಕಪ್ಪನಹಳ್ಳಿ ಷಣ್ಮುಖ

, ಚಿತ್ರದುರ್ಗ (ಮೇ.14) : ಈ ಬಾರಿಯ ಚುನಾವಣಾ ಫಲಿತಾಂಶ ಮಧ್ಯ ಕರ್ನಾಟಕದ ತುಂಗಭದ್ರೆಯರ ಕಲರವದಲ್ಲಿ ಸೊಗಸಾಗಿ ಅರಳಿದ್ದ ಕಮಲವನ್ನು ಬಾಡಿಸುವಲ್ಲಿ ಕಾಂಗ್ರೆಸ್‌ ಯಶ ಕಂಡಿದೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ 25 ಕ್ಷೇತ್ರಗಳಲ್ಲಿ ಬಿಜೆಪಿಗೆ ಕೇವಲ 5 ಸ್ಥಾನ ಸಿಕ್ಕಿದ್ದರೆ ಕಾಂಗ್ರೆಸ್‌ 19, 1 ಕಡೆ ಜೆಡಿಎಸ್‌ ಗೆದ್ದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಪೂರ್ಣ ನೆಲ ಕಚ್ಚಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಹೆಂಚಿನ ಮೇಲಿನ ರೊಟ್ಟಿತಿರುವಿ ಹಾಕಿದಂತಿದೆ ಫಲಿತಾಂಶ. ಕಳೆದ ಬಾರಿ 20 ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಿದ್ದರೆ ಕಾಂಗ್ರೆಸ್‌ 5 ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶÜ ಉಲ್ಟಾ.

Tap to resize

Latest Videos

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿ.ಟಿ ರವಿ(CT Ravi) ಸೋಲು ಬಿಜೆಪಿಗೆ ಆಘಾತ ತಂದಿದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಪಡೆದಿದ್ದರೆ, ಬಿಜೆಪಿ 4ರಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಒಂದೂ ಸ್ಥಾನ ಪಡೆಯಲು ಶಕ್ತವಾಗದಷ್ಟರ ಮಟ್ಟಿಗೆ ಬಿಜೆಪಿ ಬಸವಳಿದಿದೆ. ಐದಕ್ಕೆ ಐದೂ ಕಾಂಗ್ರೆಸ್‌ ಪಾಲಾಗಿವೆ.

Karnataka election results 2023 : ಕಾಂಗ್ರೆಸ್ ವಶವಾಯ್ತು ಕಲ್ಯಾಣ ಕರ್ನಾಟಕ!

ದಾವಣಗೆರೆ ಜಿಲ್ಲೆಯಲ್ಲಿಯೂ ಭದ್ರ ನೆಲೆ ಕಂಡುಕೊಂಡಿದ್ದ ಬಿಜೆಪಿ, ಈ ಸಾರಿ ಉಸಿರಾಡಲೆಂದೇ ಒಂದು ಕ್ಷೇತ್ರ ಇಟ್ಟುಕೊಂಡಂತೆ ಕಾಣಿಸುತ್ತದೆ. ಏಳು ಕ್ಷೇತ್ರಗಳ ಪೈಕಿ ಕಳೆದ ಬಾರಿ ಐದು ಬಿಜೆಪಿ, ಇಬ್ಬರು ಕಾಂಗ್ರೆಸ್‌ ಶಾಸಕರಿದ್ದರು. ಈ ಸಲ ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಾಂಗ್ರೆಸ್‌ ಆರರಲ್ಲಿ ಜಯ ಸಾಧಿಸಿದೆ. ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್‌.ಎಸ್‌ ಮಲ್ಲಿಕಾರ್ಜುನ ಕ್ರಮವಾಗಿ ನಗರ ಹಾಗೂ ಗ್ರಾಮೀಣದಲ್ಲಿ ಜಯ ಸಾಧಿಸಿರುವುದು ವಿಶೇಷ. ರೇಣುಕಾಚಾರ್ಯ ಸೋತಿರುವುದು ಬಿಜೆಪಿ ಪರವಾಗಿ ಬೆಣ್ಣೆ ನಗರಿಯಲ್ಲಿ ಕೂಗುವವರು ಇಲ್ಲದಂತಾಗಿದೆ.

ಶಿವಮೊಗ್ಗ ಜಿಲ್ಲೆಯ ಏಳು ಸ್ಥಾನಗಳ ಪೈಕಿ ಬಿಜೆಪಿ ತುಸು ಸಮಾಧಾನವೆಂಬಷ್ಟರ ಮಟ್ಟಿಗೆ ಮೂರು ಸ್ಥಾನದಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್‌ ಕೂಡಾ ಅಷ್ಟೇ ಸಂಖ್ಯೆ ಶಾಸಕರ ಗೆಲ್ಲಿಸಿ ಕೊಂಡಿದೆ. ಜೆಡಿಎಸ್‌ ಒಂದು ಸ್ಥಾನಕ್ಕೆ ತೃಪ್ಪಿ ಪಟ್ಟುಕೊಂಡಿದೆ. ಯಡಿಯೂರಪ್ಪ, ಈಶ್ವರಪ್ಪ ಸ್ಪರ್ಧೆ ಮಾಡದೇ ಇದ್ದ ಚುನಾವಣೆ ಇದಾಗಿದ್ದು, ಶಿಕಾರಿಪುರದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಶಿವಮೊಗ್ಗದಲ್ಲಿ ಈಶ್ವರಪ್ಪ ಪ್ರತಿಚಹರೆ ಚನ್ನಬಸಪ್ಪ ಗೆದ್ದಿದ್ದಾರೆ. ಆರಗ ಜ್ಞಾನೇಂದ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮೀಣದಲ್ಲಿ ಶಾರದಾ ಪೂರ್ಯನಾಯ್ಕ ಜೆಡಿಎಸ್‌ನಿಂದ ಗೆದ್ದಿದ್ದಾರೆ. ಕಳೆದ ಬಾರಿ ಆರು ಬಿಜೆಪಿ ಹಾಗೂ ಒಂದರಲ್ಲಿ ಕಾಂಗ್ರೆಸ್‌ ಶಾಸಕರಿದ್ದರು.

Karnataka Election Results 2023: ಡಿಕೆಶಿ ಬರ್ತಡೇಗೆ ಸೋನಿಯಾ ಗಾಂಧಿ ಬಂಪರ್ ಗಿಫ್ಟ್, ಸಿಗುತ್ತಾ ಸಿಎಂ ಕುರ್ಚಿ!

ಕೋಟೆನಾಡು ಚಿತ್ರದುರ್ಗ ಮತ್ತೆ ಕಾಂಗ್ರೆಸ್‌ ವಶವಾಗಿದೆ. ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಹಾಗೂ ಒಂದರಲ್ಲಿ ಬಿಜೆಪಿ ಜಯ ಸಾಧಿಸಿದೆ. ಹೊಳಲ್ಕೆರೆ, ಚಳ್ಳಕೆರೆ ಕ್ಷೇತ್ರಗಳು ಯಥಾಸ್ಥಿತಿಯಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿರುವುದು ವಿಶೇಷ. ಕಳೆದ ಚುನಾವಣೆಯಲ್ಲಿ ಚಳ್ಳಕೆರೆ ಹೊರತು ಪಡಿಸಿದರೆ ಉಳಿದ ಕಡೆ ಬಿಜೆಪಿ ಶಾಸಕರಿದ್ದರು. ಈ ಬಾರಿ ಹೊಳಲ್ಕೆರೆ ಹೊರತು ಪಡಿಸಿ ಉಳಿದ ಕಡೆ ಕಾಂಗ್ರೆಸ್‌ ಶಾಸಕರಿದ್ದಾರೆ. ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಆಂಜನೇಯ ಸತತವಾಗಿ ಎರಡನೇ ಬಾರಿ ಸೋಲುಂಡಿದ್ದಾರೆ. ಚಿತ್ರದುರ್ಗದ ಅನಭಿಶಕ್ತ ದೊರೆಯೆಂದೇ ಖ್ಯಾತಿಯಾಗಿದ್ದ ತಿಪ್ಪಾರೆಡ್ಡಿ ಹೀನಾಯವಾಗಿ ಸೋಲು ಕಂಡಿರುವುದು ಈ ಬಾರಿಯ ಚುನಾವಣೆ ಅಚ್ಚರಿ.

click me!