Karnataka election results 2023 : ಕಾಂಗ್ರೆಸ್ ವಶವಾಯ್ತು ಕಲ್ಯಾಣ ಕರ್ನಾಟಕ!

By Kannadaprabha News  |  First Published May 14, 2023, 12:36 AM IST

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದೆ. ಆ ಮೂಲಕ ಪರಂಪರಾಗತ ಭದ್ರಕೋಟೆಯಾಗಿದ್ದ ಕಲ್ಯಾಣ ಕರ್ನಾಟಕವನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಹೆಚ್ಚು ಕಮ್ಮಿ ಯಶ ಕಂಡಿದೆ.


ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.14) : ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದೆ. ಆ ಮೂಲಕ ಪರಂಪರಾಗತ ಭದ್ರಕೋಟೆಯಾಗಿದ್ದ ಕಲ್ಯಾಣ ಕರ್ನಾಟಕವನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಹೆಚ್ಚು ಕಮ್ಮಿ ಯಶ ಕಂಡಿದೆ.

Tap to resize

Latest Videos

undefined

ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳನ್ನೊಳಗೊಂಡ ಈ ಭೂಭಾಗ ಮೊದಲಿನಿಂದಲೂ ಕಾಂಗ್ರೆಸ್‌ ಪರವಾಗಿತ್ತು. ಆದರೆ, 2018ರ ಚುನಾವಣೆಯಲ್ಲಿ 41 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಬಿಜೆಪಿ 19ರಲ್ಲಿ, ಕಾಂಗ್ರೆಸ್‌ 18ರಲ್ಲಿ, ಜೆಡಿಎಸ್‌ 4ರಲ್ಲಿ ಗೆಲುವು ಸಾಧಿಸಿತ್ತು.

Karnataka Election Results 2023: ಡಿಕೆಶಿ ಬರ್ತಡೇಗೆ ಸೋನಿಯಾ ಗಾಂಧಿ ಬಂಪರ್ ಗಿಫ್ಟ್, ಸಿಗುತ್ತಾ ಸಿಎಂ ಕುರ್ಚಿ!

2023ರಲ್ಲಿ ಇಲ್ಲಿನ 41 ಸ್ಥಾನಗಳ ಪೈಕಿ, ಕಾಂಗ್ರೆಸ್‌ 26 ಸ್ಥಾನ ಕೈವಶ ಮಾಡಿಕೊಂಡು ಬೀಗಿದರೆ, ಬಿಜೆಪಿ 10 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಮೂಲಕ ಕಳಪೆ ಸಾಧನೆ ಮಾಡಿದೆ. ಜೆಡಿಎಸ್‌, 1 ಸ್ಥಾನದ ಹಾನಿಯೊಂದಿಗೆ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಬೀದರ್‌ ಹೊರತುಪಡಿಸಿದರೆ ಬಿಜೆಪಿಯ ಸಾಧನೆ ಉಳಿದ 6 ಜಿಲ್ಲೆಗಳಲ್ಲಿ ಅಷ್ಟಕ್ಕಷ್ಟೆಎನ್ನಬಹುದು. ಬೀದರ್‌ನಲ್ಲಿ ಮಾತ್ರ 6 ಸ್ಥಾನಗಳ ಪೈಕಿ ನಾಲ್ಕರಲ್ಲಿ ಕಮಲ ಅರಳಿದೆ. ಕಾಂಗ್ರೆಸ್‌ನ ಹೈಕಮಾಂಡ್‌ ಖರ್ಗೆ ತವರೂರು ಕಲಬುರಗಿಯಲ್ಲಿ 9ರಲ್ಲಿ 7 ಹಾಗೂ ಬಳ್ಳಾರಿಯ ಐದೂ ಸ್ಥಾನಗಳನ್ನು ‘ಕೈ’ ವಶಪಡಿಸಿಕೊಂಡು ಬೀಗುತ್ತಿದೆ. ಅಲ್ಲದೆ, ಎಲ್ಲಾ 7 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ತನ್ನ ಓಟ್‌ ಬ್ಯಾಂಕ್‌ ವಿಸ್ತರಿಸಿಕೊಂಡಿದೆ. ಇಲ್ಲಿನ ಟಿಕೆಟ್‌ ಹಂಚಿಕೆಯಿಂದ ಹಿಡಿದು ಪಕ್ಷದ ಪರ ಮತ ಬೇಟೆವರೆಗೂ ಖರ್ಗೆ ತುಂಬಾ ಲೆಕ್ಕಾಚಾರದಲ್ಲೇ ಕೆಲಸ ಮಾಡಿದ್ದಾರೆ. ಅವರ ಈ ರಣತಂತ್ರವೇ ಕಲ್ಯಾಣದಲ್ಲಿ ಕೈ ಗೆದ್ದು ಬೀಗುವಂತಾಗಿದೆ ಎನ್ನಲಾಗುತ್ತಿದೆ.

ಮುಳುಗುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ‘ಕೈ’ ಹಿಡಿದ ಕರ್ನಾಟಕ ಮತದಾರ: ಲೋಕಸಭೆ ಚುನಾವಣೆಗೂ ಬೂಸ್ಟರ್ ಡೋಸ್‌!

ಕೊಪ್ಪಳದಲ್ಲಿ ಜನಾರ್ದನ ರೆಡ್ಡಿಯವರ ಕೆಆರ್‌ಪಿಪಿ ಹೆಚ್ಚಿನ ಪ್ರಭಾವ ಬೀರುವ ಅಂದಾಜಿದ್ದರೂ ಅದು ಗಂಗಾವತಿಗೆ ಮಾತ್ರ ಸೀಮಿತವಾಯಿತು. ಪ್ರಧಾನಿ ಮೋದಿಯವರ ರೋಡ್‌ ಶæೂೕ, ಬಿಜೆಪಿಯ ಅಬ್ಬರದ ಪ್ರಚಾರದ ನಡುವೆಯೂ ಈ ಭಾಗದಲ್ಲಿ ಜನ ಕಾಂಗ್ರೆಸ್‌ನ ಕೈ ಹಿಡಿದಿರುವುದು ನಿಚ್ಚಳವಾಗಿದೆ.

ಕಲ್ಯಾಣ ಕರ್ನಾಟಕ - 2018ರ ಬಲಾಬಲ:

ಆಟ್ಟು ಜಿಲ್ಲೆಗಳು- 7

ಒಟ್ಟು ಅಸೆಂಬ್ಲಿ ಸ್ಥಾನಗಳು- 41

ಬಿಜೆಪಿ- 19

ಕಾಂಗ್ರೆಸ್‌- 18

ಜೆಡಿಎಸ್‌- 4

2023ರ ಬಲಾಬಲ:

ಕಾಂಗ್ರೆಸ್‌- 26

ಬಿಜೆಪಿ- 10

ಜೆಡಿಎಸ್‌- 3

ಕೆಆರ್‌ಪಿಪಿ- 1

ಪಕ್ಷೇತರ- 1

click me!