ಹೌದು, ಗೊಂದಲದ ಗೂಡಾಗಿದ್ದ ಹಾಗೂ ಭಾರಿ ಕುತೂಹಲ ಕೆರಳಿಸಿದ್ದ ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶ ಕೊನೆಗೂ ಘೋಷಣೆ ಆಗಿದೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಿದ್ದಾರೆ.
ಬೆಂಗಳೂರು (ಮೇ 14, 2023): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಗೆಲುವು ಸಾಧಿಸಿದ್ದರೂ ರಾಜ್ಯ ರಾಜಧಾನಿಯ ಜಯನಗರ ಕ್ಷೇತ್ರ ಕಾಂಗ್ರೆಸ್‌ನ ತಲೆನೋವಿಗೆ ಕಾರಣವಾಗಿತ್ತು. ಏಕೆಂದರೆ ಫಲಿತಾಂಶದಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ಹಾವು - ಏಣಿ ಆಟ ನಡೆದಿದೆ. ಮೊದಲಿಗೆ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಗೆಲುವು ಎಂದಿದ್ದರೂ, ಇಲ್ಲಿ ಕೆಲ ಗೊಂದಲಗಳ ಕಾರಣದಿಂದ ಮರು ಮತ ಎಣಿಕೆ ನಡೆದಿದ್ದು, ಕೊನೆಗೂ ಬಿಜೆಪಿ 16 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ಹೌದು, ಗೊಂದಲದ ಗೂಡಾಗಿದ್ದ ಹಾಗೂ ಭಾರಿ ಕುತೂಹಲ ಕೆರಳಿಸಿದ್ದ ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶ ಕೊನೆಗೂ ಘೋಷಣೆ ಆಗಿದೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಿದ್ದಾರೆ. 6ನೇ ಬಾರಿ ನಡೆದ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೊನೆಗೂ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ರಾಮಮೂರ್ತಿ 57,797 ಮತ ಗಳಿಸಿದ್ರೆ, ಕಾಂಗ್ರೆಸ್‌ನ ಸೌಮ್ಯಾರೆಡ್ಡಿ 57781 ಮತ ಪಡೆದಿದ್ದು, ಒಟ್ಟಾರೆ ಬಿಜೆಪಿ 16 ಮತಗಳ ಅಂತರದ ಗೆಲುವು ಸಾಧಿಸಿದೆ.
ಇದನ್ನು ಓದಿ: ಬಿಜೆಪಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಕರ್ನಾಟಕದ ಜನತೆಗೆ ಪ್ರಾಮಾಣಿಕ ಕೃತಜ್ಞತೆಗಳು: ಅಮಿತ್ ಶಾ
ಇನ್ನೊಂದೆಡೆ, ಈ ಫಲಿತಾಂಶದಿಂದ ಬೇಸರಗೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾಧಿಕಾರಿಗಳ ಘೋಷಣೆಗೆ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಹರ್ಷ ವ್ಯಕ್ತಪಡಿಸಿದ್ದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಕಣ್ಣೀರು ಹಾಕಿಕೊಂಡೇ ಸೌಮ್ಯಾರೆಡ್ಡಿ ತೆರಳಿದ್ದರೆ, ಅವರ ಕಾರ್ಯಕರ್ತರು ಸೌಮ್ಯಾ ರೆಡ್ಡಿ ಅವರ ಕಾರನ್ನೇ ತಡೆದಿದ್ದಾರೆ. ಅಲ್ಲದೆ, ನ್ಯಾಯ ಬೇಕು ಎಂದು ಕೂಗಾಡಿದ್ದಾರೆ. ಹಾಗೆ, ಮೋಸ ಮೋಸ ಎಂದು ಮಾಧ್ಯಮಗಳ ಕ್ಯಾಂಎರಾ ಮುಂದೆಯೂ ಕೂಗಾಟ ನಡೆಸಿದ್ದಾರೆ.
ಇದನ್ನೂ ಓದಿ: ‘ಮೋದಿ ಹೈ ತೋ ಮುಮ್ಕಿನ್ ಹೈ’ಗೆ ನಿರಾಸೆ; ಲೋಕಸಭೆ ಎಲೆಕ್ಷನ್‌ಗೆ ಇದು ದೊಡ್ಡ ಸಂದೇಶ: ಶರದ್ ಪವಾರ್
ಆಗಿದ್ದೇನು..?
ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭಾರಿ ಗೊಂದಲ ಉಂಟಾಗಿತ್ತು. ಸುಮಾರು 150 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಎಂದು ಹೇಳಲಾಗಿತ್ತು. ಆದರೆ, ಬಿಜೆಪಿಯವರು ಮರು ಮತ ಎಣಿಕೆಗೆ ಆಗ್ರಹಿಸಿದ ಹಿನ್ನೆಲೆ ಎರಡನೇ ಬಾರಿ ನಡೆದ ಮತ ಎಣಿಕೆ ವೇಳೆ ಬಿಜೆಪಿ 17 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ರು, ನಂತರ 3ನೇ ಮತ ಎಣಿಕೆ ವೇಳೆಯೂ ಇದೇ ರೀತಿ ಆಯ್ತು.
ಆದರೆ, ಪಟ್ಟು ಬಿಡದ ಕಾಂಗ್ರೆಸ್ ನಾಲ್ಕನೇ ಬಾರಿ ಮರು ಎಣಿಕೆಗೆ ಆಗ್ರಹಿಸಿತ್ತು. ನಂತರ ಸೌಮ್ಯಾರೆಡ್ಡಿ ಮುನ್ನಡೆ ಎಂದು ಬಂತು. ಆದರೆ, ಐದನೇ ಬಾರಿ ಮರು ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತು. ಗೊಂದಲ ಸೃಷ್ಟಿಸಿದ್ದ ಅಧಿಕಾರಿಗಳ ಕಾರಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾ ರೆಡ್ಡಿ ಆಕ್ಷೇಪಣಾ ದೂರು ಸಲ್ಲಿಕೆ ಮಾಡಿದ್ರು.
ಇದನ್ನೂ ಓದಿ: ಕಾಂಗ್ರೆಸ್ ದಿಗ್ವಿಜಯ: ಕಮಲಕ್ಕೆ ನಾಳೆಯ ಪಾಠ, ಟ್ರಬಲ್ ಎಂಜಿನ್‌ಗೆ ಸೋಲು ಎಂದ ಮಮತಾ ಬ್ಯಾನರ್ಜಿ
ಈ ಹಿನ್ನೆಲೆ ಚುನಾವಣಾ ಅಧಿಕಾರಿಗಳು ಮತ್ತೊಮ್ಮೆ ರೀ ಕೌಂಟಿಂಗ್ ಮಾಡಿದ್ರು. ನಂತರ 6ನೇ ಹಾಗೂ ಕೊನೆಯ ಬಾರಿ ನಡೆ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ 16 ಮತಗಳ ಅಂತರದಿಂದ ಗೆಲುವು ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.
ಇದನ್ನೂ ಓದಿ: Karnataka Assembly Election 2023: ಜನರ ಆಶೋತ್ತರಗಳನ್ನು ಕಾಂಗ್ರೆಸ್ ಈಡೇರಿಸಲಿಎಂದ ಮೋದಿ