
ಶಿಕಾರಿಪುರ (ಮೇ.16) : ಈ ಬಾರಿಯ ಚುನಾವಣೆಯಲ್ಲಿ ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಸೋಲಿಗೆ ವಾಮಾಚಾರ ಮಾಡಿಸಲಾಗಿತ್ತು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಜೀವಕ್ಕೆ ಹಾನಿ ಉಂಟು ಮಾಡಿ, ಅವರಿಗೆ ಕೇಡು ಉಂಟು ಮಾಡುವ ಉದ್ದೇಶದಿಂದ ವಾಮಾಚಾರ ನಡೆಸಲಾಗಿತ್ತು. ಆಂಧ್ರ, ಕೊಳ್ಳೆಗಾಲ ಮತ್ತಿತರ ಕಡೆಗಳಲ್ಲಿ ಮಾತ್ರ ಗೋಚರಿಸುವ ಪುನುಗು ಬೆಕ್ಕನ್ನು ತಂದು, ಪೂಜೆ ಮಾಡಿ, ವಾಮಾಚಾರ ನಡೆಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.
ಸೋಮವಾರ ಪಟ್ಟಣದ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ, ಗೆಲುವಿಗಾಗಿ ಮಾಟ-ಮಂತ್ರದ ಮೂಲಕ ವಾಮಾಚಾರದಿಂದ ಅಭ್ಯರ್ಥಿ ಹಾಗೂ ನಾಯಕರ ಜೀವಕ್ಕೆ ಹಾನಿ ಮಾಡುವ ಅತ್ಯಂತ ಕೀಳುಮಟ್ಟದ ವ್ಯವಸ್ಥಿತ ರಾಜಕಾರಣಕ್ಕೆ ವಿರೋಧಿಗಳು ಸಂಚು ರೂಪಿಸಿದ್ದರು. ಆದರೆ, ಕ್ಷೇತ್ರದ ಜನ ಬಿಜೆಪಿ ಹಾಗೂ ವಿಜಯೇಂದ್ರ ಅವರ ಕೈಬಿಡಲಿಲ್ಲ ಎಂದು ಆರೋಪಿಸಿದರು.
Karnataka Election result 2023: ರಾಜ್ಯದ ಸಿಎಂ ಯಾರಾಗಬೇಕು? ಬಿ ವೈ ವಿಜಯೇಂದ್ರ ಏನಂದ್ರು?
ವಾಮಾಚಾರದಿಂದ ಪುನುಗು ಬೆಕ್ಕು ಹತ್ಯೆ:
ವಾಮಾಚಾರಕ್ಕೆ ಬಲಿಯಾದ ಪುನುಗು ಬೆಕ್ಕಿನ ಭಾವಚಿತ್ರವನ್ನು ಪ್ರದರ್ಶಿಸಿದ ರಾಘವೇಂದ್ರ(BY Raghavendra MP), ವಾಮಾಚಾರದ ಮೂಲಕ ಪುನುಗು ಬೆಕ್ಕನ್ನು ಹತ್ಯೆಗೈದು, ಹುಲ್ಲಿನಕಟ್ಟೆಸಮೀಪದ ತೋಟದ ಮನೆಯ ಕಾಂಪೌಂಡ್ ಬಳಿ ಚುನಾವಣಾ ಫಲಿತಾಂಶದ(Karnataka election results) ಮುನ್ನಾ ದಿನ ಗುಂಡಿಯಲ್ಲಿ ಹೂತಿಟ್ಟಿದ್ದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಕೇಡು ಉಂಟು ಮಾಡುವ ದುರುದ್ದೇಶ ಇದರಲ್ಲಿತ್ತು. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.
ವಾಮಾಚಾರದ ಪ್ರಭಾವದಿಂದ ಯಡಿಯೂರಪ್ಪ(BS Yadiyurappa) ಅವರು ಬಹುದೊಡ್ಡ ಅವಘಡಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಅದರಿಂದ ಪಾರಾಗಿದ್ದಾರೆ. ಕುಟುಂಬದಲ್ಲಿ ನಡೆದ ಕೆಲ ಅಹಿತಕರ ಘಟನೆಗಳಿಗೆ ವಾಮಾಚಾರ ಮೂಲ ಕಾರಣವಾಗಿದೆ. ಪ್ರಾಮಾಣಿಕವಾಗಿ 4 ದಶಕಗಳಿಂದ ಕ್ಷೇತ್ರದ ಜನತೆಗೆ ಸಲ್ಲಿಸಿದ ಸೇವೆಯಿಂದಾಗಿ ಎಲ್ಲ ದುರ್ಘಟನೆಯಿಂದ ಪಾರಾಗಿದ್ದಾರೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ವಾಮಾಚಾರ: ಪುನುಗುಬೆಕ್ಕು ಕೊಂದು ಹೂತಿಟ್ಟ ಕೊಳ್ಳೇಗಾಲ ಮಾಂತ್ರಿಕರು
ನಿತ್ಯ ಕಚೇರಿಗೆ ಧಾವಿಸಿ, ಹಾಲು ಕುಡಿದು, ಹಾಲಾಹಲ ಉಗುಳುವ ವಿರೋಧಿಗಳಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಅವರು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.