Karnataka election result 2023: ನಾಳೆಯೇ ಮುಖ್ಯಮಂತ್ರಿ ಆಯ್ಕೆ ಅಂತಿಮ: ಅಧ್ಯಕ್ಷರ ಕೈ ಸೇರಿದ ಶಾಸಕಾಂಗ ಸಭೆ ವರದಿ

By Sathish Kumar KHFirst Published May 15, 2023, 11:08 PM IST
Highlights

ಕರ್ನಾಟಕ ಕಾಂಗ್ರೆಸ್‌ ಶಾಸಕಾಂಗ ಸಭೆ ವರದಿ ಎಐಸಿಸಿ ಅಧ್ಯಕ್ಷರ ಕೈ ಸೇರಿದ್ದು, ನಾಳೆ ಮುಖ್ಯಮಂತ್ರಿ ಆಯ್ಕೆ ಅಂತಿಮವಾಗಲಿದೆ.

ಬೆಂಗಳೂರು (ಮೇ 15): ಭಾನುವಾರ ತಡರಾತ್ರಿವರೆಗೆ ಬೆಂಗಳೂರಿನಲ್ಲಿ ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ಎಐಸಿಸಿ ವೀಕ್ಷಕರು ಅಧ್ಯಕ್ಷರಿಗೆ ವರದಿ ಸಲ್ಲಿಸಿದ್ದಾರೆ. ಇಂದು ಸಭೆಯನ್ನು ನಡೆಸಲು ಡಿ.ಕೆ. ಶಿವಕುಮಾರ್‌ ಅವರು ಆಗಮಿಸದ ಹಿನ್ನೆಲೆಯಲ್ಲಿ ನಾಳೆ ಸಭೆ ನಡೆಸಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಅಂತಿಮ ತೀರ್ಮಾಣ ತೆಗೆದುಕೊಳ್ಳಲಾಗುತ್ತದೆ ಎಂದು ಕರ್ನಾಟಕ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಹೇಳಿದರು.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಚರ್ಚೆ ಮಾಡಿದ ನಂತರ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸುರ್ಜೇವಾಲಾ, ಕರ್ನಾಟಕಕ್ಕೆ ತೆರಳಿದ್ದ ವೀಕ್ಷಕರು ದೆಹಲಿಗೆ ಆಗಮಿಸಿದ ತಮ್ಮ ವರದಿಯನ್ನು ನೀಡಿದ್ದಾರೆ. ಈ ವರದಿ ಎಐಸಿಸಿ ಅಧ್ಯಕ್ಷರ ಬಳಿ ಇದೆ. ಅವರನ್ನು ವರದಿಯನ್ನು ಆಧರಿಸಿ ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಿರ್ಧಾರ ಮಾಡಲಿದ್ದಾರೆ. ಕರ್ನಾಟಕದಲ್ಲಿ 3 ಜನ ವೀಕ್ಷಕರನ್ನ ಒಳಗೊಂಡ ಸಮಿತಿ ವರದಿ ಸಿದ್ದಪಡಿಸಿದ್ದು, ಅವರಿಗೆ ಬಿಟ್ಟರೆ ಅಧ್ಯಕ್ಷರಿಗೆ ಮಾತ್ರ ವರದಿಯಲ್ಲೇನಿದೆ ಎಂಬುದು ಗೊತ್ತಿದೆ. ಹೀಗಾಗಿ ಸಿಎಂ ಆಯ್ಕೆ ಬಗ್ಗೆ ನಮ್ಮ ಅಧ್ಯಕ್ಷರು ತೀರ್ಮಾನಿಸುತ್ತಾರೆ ಎಂದರು.

Karnataka election 2023: ಸಿಎಂ ಕುರ್ಚಿಗೆ ಎಲ್ಲರೂ ಆಸೆ ಪಡ್ಲಿ, ನನ್ನೊಂದಿಗೆ 135 ಶಾಸಕರಿದ್ದಾರೆ!

ಎಲ್ಲ ಗ್ಯಾರಂಟಿ ಈಡೇರಿಸುತ್ತೇವೆ: ದೆಹಲಿಗೆ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರೂ ಅವರೊಂದಿಗೆ ಯಾವುದೇ ಸಭೆಯನ್ನು ಮಾಡಲು ಸಾಧ್ಯವಾಗಿಲ್ಲ. ನಾಳೆ‌ ಕರ್ನಾಟಕ ಹಾಗೂ ಹೈಕಮಾಂಡ್ ನಾಯಕರು ಒಳಗೊಂಡಂತೆ ಸಭೆ ನಡೆಯಲಿದೆ. ಸಭೆ ಬಳಿಕ ಮುಖ್ಯಮಂತ್ರಿ ಯಾರು ಎಂದು ತೀರ್ಮಾನವಾಗಲಿದೆ. ರಾಜ್ಯದ ಜನರು ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದಾರೆ. ಯಾವುದೇ ಗೊಂದಲವಿಲ್ಲದೆ ನಾವು ಅಧಿಕಾರ ಮಾಡಲಿದ್ದೇವೆ. ನಾವು ನೀಡಿದ ಭರವಸೆಗಳನ್ನು ಸಹ ಫುಲ್ಫಿಲ್ ಮಾಡಲಿದ್ದೇವೆ. ರಾಜ್ಯದ ಜನರಿಗೆ ಉತ್ತಮ ಆಡಳಿತ ಕೊಡ್ತೇವೆ ಎಂದು ಹೇಳಿದರು.

ಕೇವಲ ಸಾಮಾನ್ಯ ಮಾತುಕತೆ ಮಾತ್ರ: ಕರ್ನಾಟಕದ ಮುಂದಿನ ಕಾಂಗ್ರೆಸ್‌ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಯಾವುದೇ ಗೊಂದಲ ಬೇಡ. ಇವತ್ತು ಯಾವುದೇ ರೀತಿಯ ಸಭೆ ನಡೆಯಲಿಲ್ಲ. ಆದ್ದರಿಂದ ನಾಳೆ ಸಭೆಯನ್ನು ನಡೆಸಿ ನಂತರ ಎಲ್ಲವನ್ನು ನಿರ್ಧಾರ ಮಾಡಲಿದ್ದೇವೆ. ಸಂಜೆ ವೇಳೆಗೆ ಇಬ್ಬರೂ ನಾಯಕರೊಂದಿಗೆ ಚರ್ಚೆಯನ್ನು ಮಾಡಿ ನಂತರ ಅಂತಿಮ ತೀರ್ಮಾನವನ್ನು ಮಾಡುತ್ತೇವೆ. ಇಂದು ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಕೇವಲ ರಾಜಕೀಯ ಸಂಬಂಧಿತ ಇರೆ ಚರ್ಚೆಗಳು ಮಾತ್ರ ನಡೆದಿದ್ದು, ಸಿಎಂ ಆಯ್ಕೆ ಕುರಿತ ಯಾವುದೇ ಚರ್ಚೆ ನಡೆದಿಲ್ಲ. ಆತುರ ಬೇಡ, ನಾಳೆ ಸಿಎಂ ಆಯ್ಕೆ ಫೈನಲ್‌ ಆಗಲಿದೆ.

Karnataka election result 2023: ಕಾಂಗ್ರೆಸ್ಸಿನ 5 ಗ್ಯಾರಂಟಿಗಳಿಗೆ ಷರತ್ತು ಅನ್ವಯ, 6ನೇ ಗ್ಯಾರಂಟಿ ರಿಲೀಸ್‌ಗೆ ಸಿದ್ಧತೆ!

ನಾಳೆ ಅಂತಿಮ ತೀರ್ಮಾನ ಮಾಡ್ತಾರೆ: ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ನಡೆಸಲಾದ ಚರ್ಚೆಯಲ್ಲಿ ಭಾಗವಹಿಸಿ ಹೊರಬಂದ ಡಿ.ಕೆ. ಸುರೇಶ್‌ ಅವರು, ಈಗ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಜನರಲ್ ಮಾತುಕತೆ ಅಷ್ಟೇ. ನಾಳೆ ನಮ್ಮ ಸಹೋದರ ಡಿ.ಕೆ. ಶಿವಕುಮಾರ್ ಬರುತ್ತಾರೆ. ನಾಳೆ ಸಂಜೆ ಇಬ್ಬರ ಜೊತೆಗೂ (ಶಿವಕುಮಾರ್‌ ಮತ್ತು ಸಿದ್ದರಾಮಯ್ಯ) ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಾಡ್ತಾರೆ. ನಂತರ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು.

click me!