Karnataka cabinet list 2023 : ದೆಹಲಿ ತಲುಪಿದ ಸಂಭಾವ್ಯ ಸಚಿವರ ಪಟ್ಟಿ, ನಿಮ್ಮ ಜಿಲ್ಲೆಯಿಂದ ಯಾರು?

By Gowthami KFirst Published May 16, 2023, 2:42 PM IST
Highlights

ಕರ್ನಾಟಕ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲದ ನಡುವೆಯೇ ಇಂದು ನೂತನ ಸಚಿವರ ಆಯ್ಕೆ ಕೂಡ ನಡೆಯಲಿದೆ. 27 ಜಿಲ್ಲೆಗಳಿಂದ ಸಂಭಾವ್ಯರ ಪಟ್ಟಿಯನ್ನು ಆಯ್ಕೆ ಮಾಡಲಾಗಿದ್ದು,  49 ಮಂದಿ ಸಂಭಾವ್ಯರ ಪಟ್ಟಿ ಇಲ್ಲಿದೆ.

ಬೆಂಗಳೂರು (ಮೇ.16): ಕರ್ನಾಟಕ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲದ ನಡುವೆಯೇ ಇಂದು ದೆಹಲಿಯಲ್ಲಿ ಸಿಎಂ ಆಯ್ಕೆ ಮಾತ್ರವಲ್ಲ ನೂತನ ಸಚಿವ ಸಂಪುಟ ರಚನೆ ಕೂಡ ಆಗಲಿದೆ. ದೆಹಲಿಯಲ್ಲಿ  ಹೈವೋಲ್ಟೇಟ್ ಮೀಟಿಂಗ್ ನಡೆಯಲಿದ್ದು, ಸಭೆಯಲ್ಲಿ ಸಿಎಂ ಆಯ್ಕೆ ಮಾತ್ರವಲ್ಲದೇ ನೂತನ ಸಚಿವರ ಆಯ್ಕೆ ಕೂಡ ನಡೆಯಲಿದೆ. ಹೀಗಾಗಿ ಸಂಭಾವ್ಯ ಮಂತ್ರಿಗಳ ಪಟ್ಟಿ ದೆಹಲಿ ತಪುಲಿದೆ. 27 ಜಿಲ್ಲೆಗಳಿಂದ ಸಂಭಾವ್ಯರ ಪಟ್ಟಿಯನ್ನು ಆಯ್ಕೆ ಮಾಡಲಾಗಿದ್ದು, ಈ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ಸುರ್ಜೇವಾಲ ತಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಒಟ್ಟು 49 ಮಂದಿ ಸಂಭಾವ್ಯ ಸಚಿವರ ಪಟ್ಟಿ ತಯಾರಾಗಿದೆ. ಸಿಎಂ‌ ಆಯ್ಕೆ ಜೊತೆಗೆ ನೂತನ ಸಚಿವರ ಪಟ್ಟಿ ಕೂಡ ಫೈನಲ್ ಆಗಲಿದೆ.  

 49 ಮಂದಿ ಸಂಭಾವ್ಯ ಸಚಿವರ ಪಟ್ಟಿ  ಇಂತಿದೆ.
1. ಬೆಳಗಾವಿ ಜಿಲ್ಲೆ
1. ಲಕ್ಷ್ಮಣ್ ಸವದಿ
2. ಲಕ್ಷ್ಮೀ ಹೆಬ್ಬಾಳ್ವರ್
3. ಸತೀಶ್ ಜಾರಕಿಹೊಳಿ

2. ಬಾಗಲಕೋಟೆ ಜಿಲ್ಲೆ
1. ಆರ್.ಬಿ. ತಿಮ್ಮಾಪುರ್.

3. ಬಿಜಾಪುರ ಜಿಲ್ಲೆ
1. ಎಂ.ಬಿ. ಪಾಟೀಲ್
2. ಶಿವಾನಂದ ಪಾಟೀಲ್‌
3. ಯಶವಂತ ರಾಯಗೌಡ ಪಾಟೀಲ್‌

4. ಗುಲ್ಬರ್ಗ ಜಿಲ್ಲೆ
1. ಪ್ರಿಯಾಂಕ್ ಖರ್ಗೆ
2. ಅಜಯ್ ಸಿಂಗ್
3. ಶರಣ ಪ್ರಕಾಶ್ ಪಾಟೀಲ್

5. ರಾಯಚೂರು ಜಿಲ್ಲೆ
1. ಬಸನಗೌಡ ತುರುವಿಹಾಳ

6. ಯಾದಗಿರಿ  ಜಿಲ್ಲೆ
1. ಶರಣಪ್ಪ ದರ್ಶನಾಪೂರ್

7. ಬೀದರ್ ಜಿಲ್ಲೆ
1. ರಹೀಮ್ ಖಾನ್
2. ಈಶ್ವರ್ ಖಂಡ್ರೆ

8. ಕೊಪ್ಪಳ ಜಿಲ್ಲೆ
1. ರಾಘವೇಂದ್ರ ಹಿಟ್ನಾಳ್
2. ಬಸವರಾಜ್ ರಾಯರೆಡ್ಡಿ

9. ಗದಗ ಜಿಲ್ಲೆ
1. ಹೆಚ್‌.ಕೆ. ಪಾಟೀಲ್

10. ಧಾರವಾಡ ಜಿಲ್ಲೆ
1. ವಿನಯ್ ಕುಲಕರ್ಣಿ
2. ಪ್ರಸಾದ್ ಅಬ್ಬಯ್ಯ

11. ಉತ್ತರ ಕನ್ನಡ ಜಿಲ್ಲೆ
1. ಬೀಮಣ್ಣ ನಾಯಕ

12. ಹಾವೇರಿ ಜಿಲ್ಲೆ
1. ರುದ್ರಪ್ಪ ಲಮಾಣಿ

13. ಬಳ್ಳಾರಿ ಜಿಲ್ಲೆ
1. ತುಕಾರಾಮ್
2. ನಾಗೇಂದ್ರ

14. ಚಿತ್ರದುರ್ಗ ಜಿಲ್ಲೆ
1. ರಘುಮೂರ್ತಿ

15. ದಾವಣಗೆರೆ ಜಿಲ್ಲೆ
1. ಶಾಮನೂರು ಶಿವಶಂಕರಪ್ಪ
2. ಎಸ್.ಎಸ್ ಮಲ್ಲಿಕಾರ್ಜುನ್

16. ಶಿವಮೊಗ್ಗ ಜಿಲ್ಲೆ
1. ಮಧುಬಂಗಾರಪ್ಪ 
2. ಬಿ.ಕೆ. ಸಂಗಮೇಶ್

17. ಚಿಕ್ಕಮಗಳೂರು ಜಿಲ್ಲೆ
1. ಟಿ.ಡಿ. ರಾಜೇಗೌಡ

18. ತುಮಕೂರು ಜಿಲ್ಲೆ
1. ಡಾ. ಪರಮೇಶ್ವರ್
2. ಎಸ್.ಆರ್. ಶ್ರೀನಿವಾಸ್
3. ಕೆ.ಎನ್. ರಾಜಣ್ಣ

19. ಚಿಕ್ಕಬಳ್ಳಾಪುರ ಜಿಲ್ಲೆ
1. ಸುಬ್ಬಾರಡ್ಡಿ.

20. ಕೋಲಾರ ಜಿಲ್ಲೆ
1. ರೂಪ ಶಶಿಧರ್
2. ನಾರಾಯಣಸ್ವಾಮಿ

Karnataka Govt Formation: ದೆಹಲಿ ತಲುಪಿದ ಡಿಕೆಶಿ, ಸೋನಿಯಾಗಾಂಧಿ ಭೇಟಿ ಡೌಟು

21. ಬೆಂಗಳೂರು ಜಿಲ್ಲೆ
1. ಕೆ.ಜೆ. ಜಾರ್ಜ್
2. ರಾಮಲಿಂಗಾರೆಡ್ಡಿ
3. ಹ್ಯಾರಿಸ್
4. ಎಂ.ಕೃಷ್ಣಪ್ಪ
5. ದಿನೇಶ್ ಗುಂಡೂರಾವ್
6. ಜಮೀರ್
7. ಬಿ. ಶಿವಣ್ಣ

22. ಮಂಡ್ಯ ಜಿಲ್ಲೆ
1. ಎನ್. ಚೆಲುವರಾಯಸ್ವಾಮಿ

23. ದಕ್ಷಿಣ ಕನ್ನಡ ಜಿಲ್ಲೆ
1. ಯು.ಟಿ. ಖಾದರ್

24.ಮೈಸೂರು ಜಿಲ್ಲೆ
1. ಎಚ್‌.ಸಿ. ಮಹದೇವಪ್ಪ 
2. ತನ್ವಿರ್ ಸೇ‌ಠ್

25. ಚಾಮರಾಜನಗರ ಜಿಲ್ಲೆ
1. ಪುಟ್ಟರಂಗಶೆಟ್ಟಿ

26. ಕೊಡಗು ಜಿಲ್ಲೆ
1. ಎ.ಎಸ್ ಪೊನ್ನಣ್ಣ

27. ಬೆಂಗಳೂರು ಗ್ರಾಮಾಂತರ  ಜಿಲ್ಲೆ
1. ಕೆ.ಎಚ್‌. ಮುನಿಯಪ್ಪ.

Karnataka Govt Formation: ಮೇ.18 ಕ್ಕೆ ಸಿಎಂ ಪ್ರಮಾಣ ವಚನ ಕಾರ್ಯಕ್ರಮ 

ವಿಧಾನ ಪರಿಷತ್‌ನಿಂದಲೂ ಸಚಿವರಾಗುವವರ ಸಂಭಾವ್ಯ ಪಟ್ಟಿಯೂ ಸಿದ್ದವಾಗಿದೆ. ಆರು ಮಂದಿ ಪರಿಷತ್ ‌ಸದಸ್ಯರ‌ ಪಟ್ಟಿ ದೆಹಲಿ ತಲುಪಿದೆ. ಸಿಎಂ ಆಯ್ಕೆ ಜೊತೆಗೆ ನೂತನ ಸಚಿವರ ಆಯ್ಕೆ ಕೂಡ ಇಂದೇ ನಡೆಯಲಿದೆ.

ವಿಧಾನ ಪರಿಷತ್ತಿನಿಂದ ಸಂಪುಟ ಸೇರಲಿರುವ ಸಂಭಾವ್ಯ ಅಭ್ಯರ್ಥಿಗಳು:

1. ಬಿ.ಕೆ. ಹರಿಪ್ರಸಾದ್
2. ಸಲೀಂಮ್ ಅಹಮದ್‌
3. ನಜೀರ್ ಅಹಮದ್‌
4. ಮಂಜುನಾಥ್ ಬಂಡಾರಿ
5. ದಿನೇಶ್ ಗೂಳಿಗೌಡ
6. ಎಸ್. ರವಿ

click me!