
ಬೆಂಗಳೂರು (ಮೇ.16): ಸರ್ಕಾರ ಬಂದ ನಂತರ ಶಾಸಕಾಂಗ ಸಭೆಯಲ್ಲಿ ನಾವೆಲ್ಲಾ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಅವುಗಳನ್ನು ಪರಿಶೀಲಿಸಿ ಸಿಎಂ ಯಾರು ಅನ್ನೋದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತೆ. ಕೆಪಿಸಿಸಿ ಅಧ್ಯಕ್ಷ ರೇ ಸಿಎಂ ಆಗಬೇಕು ಅನ್ನೋ ನಿಯಮವೇನೂ ಇಲ್ಲ. ಕೆಲವು ಸಂದರ್ಭದಲ್ಲಿ ಸಿಎಲ್‌ಪಿ ಲೀಡರ್ ಆಗಿದ್ದವರೂ ಸಿಎಂ ಆಗಿದ್ದಾರೆ. ಇನ್ನೂ ಕೆಲವು ಸಂಧರ್ಭದಲ್ಲಿ ಈ ಇಬ್ಬರನ್ನೂ ಬಿಟ್ಟು ಬೇರೆ ನಾಯಕರೂ ಮುಖ್ಯಮಂತ್ರಿ ಆಗಿದ್ದಾರೆ. ( ಪರೋಕ್ಷವಾಗಿ ಡಿಕೆ ಸಿಎಂ ಸ್ಥಾನ ಬಿಟ್ಟು ಕೊಡಲಿ ಎಂಬ ಸೂಚನೆ) ಮುಂದೆ ಸಂಪುಟದಲ್ಲಿ ಯಾರು ಇರಬೇಕು ಅಂತ ಆಯ್ಕೆ ಮಾಡೋದು ಸಿಎಂ ಪರಮಾಧಿಕಾರ. ಅದನ್ನು ಅವರೇ ನೋಡಿಕೊಳ್ತಾರೆ ಎಂದು ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಈ ಸಲ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳೆಲ್ಲವೂ ಒಟ್ಟಾಗಿ ನಮಗೆ ಲಾಭ ಆಗಿದೆ. ಅಹಿಂದ ಮತಗಳೆಲ್ಲವೂ ಕಾಂಗ್ರೆಸ್ ಗೆ ಬಂದಿವೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಖಂಡಿತಾ ಈಡೇರಿಸುತ್ತೆ. ಕಾಂಗ್ರೆಸ್ ಯಾವತ್ತೂ ಕೊಟ್ಟ ಮಾತು ತಪ್ಪಿಲ್ಲ. ಡಬಲ್ ಇಂಜಿನ್ ಅಂತಾ ಹೇಳಿಕೊಂಡು ಅವರು ಕೊಟ್ಟ ಆಡಳಿತ ವೈಖರಿಗೆ ಜನ ಬೇಸತ್ತಿದ್ದರು. ನಮಗೆ ಅಧಿಕಾರ ನಡೆಸಿ ಅನುಭವ ಇದೆ. ಅರವತ್ತು ವರ್ಷಗಳಲ್ಲಿ ನಾವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಬಿಜೆಪಿಯವರು ಈಗ ಬಂದು ಏನು ಮಾಡಿದ್ದಾರೆ.? ಜನರ ವಿಶ್ವಾಸವನ್ನು ಕಾಂಗ್ರೆಸ್ ಖಂಡಿತಾ ಉಳಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
Karnataka cabinet list 2023 : ದೆಹಲಿ ತಲುಪಿದ ಸಂಭಾವ್ಯ ಸಚಿವರ ಪಟ್ಟಿ, ನಿಮ್ಮ ಜಿಲ್ಲೆಯಿಂದ ಯಾರು?
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನದ ತಿಕ್ಕಾಟದ ನಡುವೆ ಡಿಸಿಎಂ ಸ್ಥಾನಕ್ಕೆ ಪಟ್ಟು:
ಬಿಟಿಎಂ ಲೇಔಟ್ ಶಾಸಕ ರಾಮಲಿಂಗರೆಡ್ಡಿಗೆ ಡಿಸಿಎಂ ಸ್ಥಾನ ಕೊಡಲೇಬೇಕು ಎಂದು ರಾಮಲಿಂಗ ರೆಡ್ಡಿ ಪರ ರೆಡ್ಡಿ ಸಮುದಾಯ ಪಟ್ಟು ಹಿಡಿದಿದೆ. ಮಾಜಿ ಶಾಸಕ ಕರ್ನಾಟಕ ರಾಜ್ಯ ರೆಡ್ಡಿ ಸಮುದಾಯದ ಅಧ್ಯಕ್ಷ ರಾಮಚಂದ್ರ ರೆಡ್ಡಿ ಹೇಳಿಕೆ ನೀಡಿದ್ದಾರೆ. ಈಗ ಸಚಿವ ಸಂಪುಟ ರಚನೆ ಆಗ್ತಾ ಇದೆ. ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಆಗಿದ್ರು. ನಂತರ ರಾಮಲಿಂಗಾರೆಡ್ಡಿ ಅವರನ್ನು ಬೆಳೆಸಿಕೊಂಡು ಬಂದ್ವಿ. ರಾಮಲಿಂಗಾರೆಡ್ಡಿ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗಿಂತಲೂ ಹೆಚ್ಚು ಬಾರಿ ರಾಮಲಿಂಗಾರೆಡ್ಡಿ ಶಾಸಕರಾಗಿದ್ದಾರೆ.
Karnataka Govt Formation: ಮೇ.18 ಕ್ಕೆ ಸಿಎಂ ಪ್ರಮಾಣ ವಚನ ಕಾರ್ಯಕ್ರಮ
ಯಡಿಯೂರಪ್ಪ ಇದ್ದಾಗ ಮೂರು ಜನ ರೆಡ್ಡಿ ಸಮುದಾಯದ ಸಚಿವರನ್ನು ಮಾಡ್ತಾ ಇದ್ರು. ಆದ್ರೆ ಕಳೆದ ಬಾರಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಕೊಟ್ಟರು. ಅದರ ಫಲವನ್ನು ಈಗ ಬಿಜೆಪಿ ಅನುಭವಿಸಿದೆ. ಈ ಸಾರಿ ರಾಮಲಿಂಗಾರೆಡ್ಡಿ ಅವರನ್ನು ಡಿಸಿಎಂ ಮಾಡಲೇಬೇಕು. ಇಬ್ಬರಿಗೆ ಸಚಿವ ಸ್ಥಾನ ಕೊಡಲೇಬೇಕು. ಈ ಬಗ್ಗೆ ಈಗಾಗಲೇ ಎಐಸಿಸಿ ಗೆ ಪತ್ರ ಬರೆದಿದ್ದೇವೆ. ಒಂದೊಮ್ಮೆ ನಮ್ಮ ಬೇಡಿಕೆಗೆ ಕಾಂಗ್ರೇಸ್ ಹೈ ಕಮಾಂಡ್ ಒಪ್ಪದೆ ಇದ್ದರೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ರೆಡ್ಡಿ ಸಮುದಾಯ ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.