ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗಳಿಸಿ ಬಹುಮತವನ್ನು ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ನನಗೆ ಬೇಕೇ ಬೇಕು ಎಂದು ಪಟ್ಟು ಹಿಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.
ಬೆಂಗಳೂರು (ಮೇ 13) : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗಳಿಸಿ ಬಹುಮತವನ್ನು ಪಡೆದ ಬೆನ್ನಲ್ಲೇ ಶಾಸಕಾಂಗ ಪಕ್ಷದ ಸಭೆಗೂ ಮೊದಲೇ ತನಗೆ ಮುಖ್ಯಮಂತ್ರಿ ಹುದ್ದೆ ಬೇಕೇ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರಂತೆ..
ರಾಜ್ಯದಲ್ಲಿ ಫಲಿತಾಂಶಕ್ಕೂ ಮುನ್ನವೇ ನಿನ್ನೆ ರಾತ್ರಿ 120ಕ್ಕಿಂತ ಅಧಿಕ ಸ್ಥಾನ ಬಂದಲ್ಲಿ ತನೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ (ಎಐಸಿಸಿ) ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಬಹಿರಂಗವಾಗಿ ಹೇಳಿದ್ದರು. ಆದರೆ, ಇದಕ್ಕೆ ಒಪ್ಪಿಕೊಳ್ಳದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಅವಧಿಯನ್ನು ಪೂರೈಸಿದ ನಂತರವೇ ಎರಡನೇ ಅವಧಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದಾಗಿ ತಿಳಿಸಿದ್ದರು. ಆದರೆ, ನಿನ್ನೆ ಫಲಿತಾಂಶ ಬರಲೆಂದು ಸಮಾಧಾನ ಮಾಡಿ ಕಳಿಸಿದ್ದ ನಾಯಕರ ಮುಂದೆ ಇಂದು ಪುನಃ ನನಗೇ ಸಿಎಂ ಸ್ಥಾನ ಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆಯಿದೆ.
KARNATAKA ELECTION RESULTS 2023: ಜನರಿಗೆ ನಿಮ್ಮನ್ನುನೋಡಿ ನೋಡಿ ವಾಂತಿ ಬರೋಂಗಾಗಿದೆ: ಖರ್ಗೆ
ಮೊದಲ ಅವಧಿ ಮುಗಿದ್ಮೇಲೆ ಕೊಡ್ತೀನೆಂದ ಸಿದ್ದು: ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿ.ಕೆ ಶಿವಕುಮಾರ್ ಅವರು ತನಗೇ ಸಿಎಂ ಸ್ಥಾನ ಕೊಡಬೇಕೆಂದು ಹೇಳಿದ್ದಾರೆ. ರಾಜಯದಲ್ಲಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಹೊತ್ತು ಶ್ರಮವಹಿಸಿ ಸಂಘಟಿಸಿದ್ದೇನೆ. ಆದ್ದರಿಂದ ತನಗೇ ಸಿಎಂ ಹುದ್ಎ ಬೇಕೆಂದಿದ್ದಾರೆ. ನಿನ್ನೆ ರಾತ್ರಿ ನಡೆದ ಸಭೆಯಲ್ಲೂ ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಮಾತಿಗೆ ಬೆದರಿದ ಸಿದರಾಮಯ್ಯ ಡಿಕೆಶಿ ಮಾತಿಗೊಪ್ಪದೇ ಮೊದಲ ಅವಧಿ ಪೂರೈಸಿದ ನಂತರ ಬಿಟ್ಟು ನಿಮಗೆ ಸಿಎಂ ಸ್ಥಾನ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ.
ಇನ್ನು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಿಜಯೋತ್ಸವ ಸಭೆಯಲ್ಲಿ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಚುನಾವಣೆ ಭಾರತವನ್ನು ಜೋಡೋ ಮಾಡುವ ಚುನಾವಣೆ ಆಗಿದೆ. ಇದು ನಮ್ಮ ಗೆಲವಲ್ಲ ಕರ್ನಾಟಕ ಜನತೆಯ ಗೆಲವು. ಜನರಿಗೆ ಹಿಡಿದ ಗ್ರಹಣ ಇವತ್ತು ಬಿಟ್ಟಿದೆ. ಮೂರುವರೆ ವರ್ಷದಿಂದ ಗ್ರಹಣ ಹಿಡಿದಿತ್ತು. ಬೆಲೆ ಏರಿಕೆ, ರೈತರಿಗೆ ಕೊಟ್ಟ ಕಷ್ಟ, ಗೃಹಣಿಯರಿಗೆ ಕೊಟ್ಟ ಕಷ್ಟದ ಗೆಲವು ಇದಾಗಿದೆ. ಸರ್ಕಾರ ಬಂದ ಮೊದಲ ದಿನವೇ ಗೃಹಲಕ್ಷ್ಮಿ ತುಂಬಲಿದ್ದಾರೆ ಎಮದು ಹೇಳಿದರು.
ನಾಳೆ ಸಭೆಯಲ್ಲಿ ಎಲ್ಲ ತೀರ್ಮಾನ ಆಗಿತ್ತೆಂದ ಡಿಕೆಶಿ: ರಾಜ್ಯದಲ್ಲಿ ನಾವು ಐದು ಗ್ಯಾರಂಟಿ ನಾವು ಘೋಷಣೆ ಮಾಡಿದ್ದೇವೆ. ನಾನು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ತಾಯಿ ಮುಂದೆ ಗ್ಯಾರಂಟಿ ಬಗ್ಗೆ ಪೂಜೆ ಮಾಡಿದ್ದೇವೆ. ಅವುಗಳನ್ನು ಜಾರಿ ಮಾಡೆ ಮಾಡ್ತೇವೆ. ಕರ್ನಾಟಕ ಗೆಲ್ಲುತ್ತೇವೆ ಎಂದು ನಾನು ಸೋನಿಯಾ ಗಾಂಧಿಗೆ ಮಾತು ಕೊಟ್ಟಿದ್ದೆ. ಜನರು ಆ ನಂಬಿಕೆ ಉಳಿಸಿದ್ದಾರೆ. ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ, ಸಭೆಯಲ್ಲಿ ಎಲ್ಲ ತೀರ್ಮಾನ ಆಗುತ್ತದೆ ಎಂದು ತಾನೇ ಸಿಎಂ ಆಗುವ ಮಾತನ್ನು ಬಹಿರಂಗ ಪಡಿಸದೇ ಡಿ.ಕೆ. ಶಿವಕುಮಾರ್ ಹೈಕಮಾಂಡ್‌ಗೆ ಮುನ್ನೆಚ್ಚರಿಕೆ ನೀಡಿದರು.
ಅಣ್ಣ ಸಿಎಂ ಆದ್ರೆ, ನಾನು ತುಂಬಾ ಸಂತೋಷಪಡುತ್ತೇನೆ: ಡಿಕೆ ಸುರೇಶ್
ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ನಾಳೆ ಮಧ್ಯಾಹ್ನದ ವೇಳೆ ಮಲ್ಲಿಕಾರ್ಜುನ ಖರ್ಗೆ ಮನೆಯೊಳಗೆ ಮಹತ್ವದ ಮೀಟಿಂಗ್ ನಡೆಸಲಾಗುತ್ತದೆ. ಸುರ್ಜೆವಾಲ, ಖರ್ಗೆ ನೇತೃತ್ವದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಹತ್ವದ ಮಾತುಕತೆ ಮಾಡುತ್ತಿದ್ದಾರೆ. ಸಿಎಲ್ ಪಿ ಸಭೆ ಎಐಸಿಸಿ ಅಧ್ಯಕ್ಷರು ಕರಿತಾರೆ. ಅಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡ್ತಾರೆ. ಸಿಎಲ್ ಪಿ ಸಭೆ ಬಳಿಕ ಎಲ್ಲವೂ ನಿರ್ಧಾರವಾಗಲಿದೆ. ನಾನು ಡಿಕೆಶಿ ಸಹೋದರ ಅನ್ನೋದನ್ನು ಬಿಟ್ಟು ಅವರು ಸಿಎಂ ಆಗ್ಬೇಕು ಅನ್ನೋದ್ರಲ್ಲಿ ನಾನು ಮೊದಲಿಗನಾಗಿದ್ದೇವೆ ಎಂದು ಹೇಳಿದರು.