
ಉಡುಪಿ (ಮೇ.13): ಕಳೆದೆರಡು ದಶಕಗಳಿಂದ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅರಳಿದ್ದು, ಕಳೆದ ಬಾರಿಯಂತೆ ಈ ಬಾರಿ ಕೂಡ ಜಿಲ್ಲೆಯ ಎಲ್ಲ 5 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರಗಳ ಪೈಕಿ 4ರಲ್ಲಿ ಹಾಲಿ ಶಾಸಕರನ್ನು ಬದಲಾಯಿಸಿ, ಹೊಸ ಮುಖಗಳನ್ನು ಸ್ಪರ್ಧೆಗಿಳಿಸಿತ್ತು. 5 ಕ್ಷೇತ್ರಗಳನ್ನು ಕೂಡ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಒಟ್ಟು ಮತದಾರರು : 1041672
ಪುರುಷ ಮತದಾರರು : 502836
ಮಹಿಳಾ ಮತದಾರರು : 538823
ಇತರ: 13
ಶೇಕಡಾವಾರು ಮತದಾನ : 78.57%
ಉಡುಪಿ ವಿಧಾನಸಭಾ ಕ್ಷೇತ್ರ: ಗೋಕಳ್ಳಸಾಗಣೆ, ಹಿಜಾಬ್ ವಿರುದ್ಧದ ಹೋರಾಟದಿಂದ ಬೆಳಕಿಗೆ ಬಂದ ಹಿಂದೂ ಯುವನಾಯಕ ಯಶಪಾಲ್ ಸುವರ್ಣಗೆ ಬಿಜೆಪಿ ಟಿಕೆಟ್ ನೀಡಿ ಗೆಲ್ಲಿಸಿದೆ. ಈ ಮೂಲಕ ಯುವನಾಯಕ ಯಶಪಾಲ್ ಸುವರ್ಣ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಮೊದಲಬಾರಿಗೆ ಕಾಲಿಡುತ್ತಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 6 ಬಾರಿ ಗೆಲುವು ತಂದು ಕೊಟ್ಟ, ಮೊಗವೀರ ಸಮುದಾಯದ ಮಧ್ವರಾಜ್ ಕುಟುಂಬದ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈಗ ಬಿಜೆಪಿ ಸೇರಿರುವುದರಿಂದ, ಕಾಂಗ್ರೆಸ್ ಅದೇ ಸಮುದಾಯದ ಹೊಸಮುಖ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್‌ಗೆ ಟಿಕೆಟ್ ನೀಡಿತ್ತು. ಆದರೆ ಸೋಲಾಗಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರ: ಕಿರಣ್ ಕೊಡ್ಗಿಗೆ ಕುಂದಾಪುರದ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು, 56 ಸಾವಿರ ಮತಗಳ ಅಂತರದಲ್ಲಿ ಗೆದ್ದ ದಾಖಲೆ ಬರೆದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಸ್ವಯಂ ನಿವೃತ್ತಿ ಘೋಷಿಸಿ, ತಮ್ಮ ಶಿಷ್ಯ ಕಿರಣ್ ಕೊಡ್ಗಿಗೆ ಟಿಕೆಟ್ ಕೊಡಿಸಿದ್ದರು. ಇಲ್ಲಿಯೂ ಕಾಂಗ್ರೆಸ್, ಹೊಸಮುಖ ದಿನೇಶ್ ಹೆಗ್ಡೆ ಮೊಳಹಳ್ಳಿಗೆ ಟಿಕೆಟ್ ನೀಡಿತ್ತು. ಆದರೆ ಗೆಲುವು ಕಂಡಿಲ್ಲ.
ಬಿಜೆಪಿ: ಕಿರಣ್ ಕೊಡ್ಗಿ (ಹೊಸ ಮುಖ) - 101102 ಮತಗಳು (ಗೆಲುವಿನ ಅಂತರ 40930)
ಕಾಂಗ್ರೆಸ್: ದಿನೇಶ್ ಹೆಗ್ಡೆ - 60172 ಮತಗಳು
ಬೈಂದೂರು ವಿಧಾನಸಭಾ ಕ್ಷೇತ್ರ: ಆರ್‌ಎಸ್‌ಎಸ್‌ನಲ್ಲಿ ಪಳಗಿದ, ಬರಿಗಾಲಲ್ಲಿ ಓಡಾಡುವ ಸರಳ ವ್ಯಕ್ತಿತ್ವದ ಗುರುರಾಜ್ ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ರಾಜಕೀಯ ಜೀವನದಲ್ಲಿ 4 ಬಾರಿಗೆ ಗೆದ್ದಿದ್ದ ಹೋಟೆಲ್ ಉದ್ಯಮಿ ಗೋಪಾಲ ಪೂಜಾರಿ ಈ ಬಾರಿಯೂ ಸೋತಿದ್ದು, ಜಿಲ್ಲೆಯಲ್ಲಿ 2 ಬಾರಿ ಸೋಲು ಕಂಡತಾಗಿದೆ.
ಬಿಜೆಪಿ: ಗುರುರಾಜ ಶೆಟ್ಟಿಗಂಟಿಹೊಳೆ (ಹೊಸ ಮುಖ) - 97447ಮತಗಳು (ಗೆಲುವಿನ ಅಂತರ 15,929)
ಕಾಂಗ್ರೆಸ್: ಗೋಪಾಲ ಪೂಜಾರಿ - 81518 ಮತಗಳು
KODAGU ELECTION RESULT 2023: ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್
ಕಾಪು ವಿಧಾನ ಸಭಾ ಕ್ಷೇತ್ರ: ಬಿಜೆಪಿ ಹೊಸಮುಖ ಬಂಟ ಸಮುದಾಯದ ಸುರೇಶ್ ಶೆಟ್ಟಿಗುರ್ಮೆ ಗೆಲುವು ಸಾಧಿಸಿದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಕಾಂಗ್ರೆಸ್ ನ ಬಿಲ್ಲವ ಸಮುದಾಯದ ಮಾಜಿ ಸಚಿವ ವಿನಯಕುಮಾರ್ ಸೊರಕೆಗೆ ಇಲ್ಲಿ ಸೋಲಾಗಿದೆ. ಇಲ್ಲಿ ಮೊಗವೀರರೇ ಅಧಿಕ ಸಂಖ್ಯೆಯಲ್ಲಿರುವುದು.
ಬಿಜೆಪಿ: ಸುರೇಶ್ ಶೆಟ್ಟಿಗುರ್ಮೆ (ಹೊಸ ಮುಖ) - 75118 ಮತಗಳು (ಗೆಲುವಿನ ಅಂತರ 11261)
ಕಾಂಗ್ರೆಸ್: ವಿನಯಕುಮಾರ್ ಸೊರಕೆ - 63857 ಮತಗಳು
Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!
ಕಾರ್ಕಳ ವಿಧಾನಸಭಾ ಕ್ಷೇತ್ರ: ಹಿಂದುತ್ವದ ಫೈರ್ ಬ್ರ್ಯಾಂಡ್, 3 ಬಾರಿ ಗೆದ್ದು ಸಚಿವರಾಗಿರುವ ಸುನಿಲ್ ಕುಮಾರ್ ಈಗ 4ನೇ ಬಾರಿಗೆ ಗೆಲುವು ಕಂಡಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟಿ ತೀವ್ರ ಪೈಪೋಟಿ ನೀಡಿ ಸೋಲು ಕಂಡಿದ್ದಾರೆ. ಪ್ರಖರ ಹಿಂದುತ್ವವಾದಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸೋಲು ಕಂಡಿದ್ದಾರೆ.
ಬಿಜೆಪಿ: ಸುನಿಲ್ ಕುಮಾರ್ - 76019 ಮತಗಳು (ಗೆಲುವಿನ ಅಂತರ 4404)
ಕಾಂಗ್ರೆಸ್: ಮುನಿಯಾಲು ಉದಯಕುಮಾರ್ ಶೆಟ್ಟಿ - 71615
ಪಕ್ಷೇತರ: ಪ್ರಮೋದ್ ಮುತಾಲಿಕ್ - 4432
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.