Karnataka Election Results 2023: ಬಿಜೆಪಿಗೆ 39 ಸೀಟ್‌ ಕಟ್‌, ಕಾಂಗ್ರೆಸ್‌ ಫುಲ್‌ ಫಿಟ್‌, ಜೆಡಿಎಸ್‌ ಹಿಟ್‌ವಿಕೆಟ್‌!

Published : May 13, 2023, 11:43 PM IST
Karnataka Election Results 2023: ಬಿಜೆಪಿಗೆ 39 ಸೀಟ್‌ ಕಟ್‌, ಕಾಂಗ್ರೆಸ್‌ ಫುಲ್‌ ಫಿಟ್‌, ಜೆಡಿಎಸ್‌ ಹಿಟ್‌ವಿಕೆಟ್‌!

ಸಾರಾಂಶ

Karnataka Assembly Election Results 2023: ಕರ್ನಾಟಕದ 16ನೇ ವಿಧಾನಸಭೆಯ ಮತದಾನ ಕಣ ಅಂತ್ಯಗೊಂಡಿದೆ. ಕಾಂಗ್ರೆಸ್‌ ತನ್ನ ಬಹುದೊಡ್ಡ ಗೆಲುವನ್ನು ಸಂಪಾದನೆ ಮಾಡುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ. 2018ರ ಚುನಾವಣೆಯಲ್ಲಿ 104 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಅಕ್ಷರಶಃ 39 ಸೀಟ್‌ ಅನ್ನು ಮತದಾರ ಕಟ್‌ ಮಾಡಿ ಕೊಟ್ಟಿರುವುದು ಈ ಬಾರಿಯ ವಿಪರ್ಯಾಸ.  

ಬೆಂಗಳೂರು (ಮೇ.13): ರಾಜ್ಯ ವಿಧಾನಸಭೆಯ ಚುನಾವಣಾ ರಣಕಣ ಯಶಸ್ವಿಯಾಗಿ ಮುಕ್ತಾಯವಾಗಿದೆ. 224 ಕ್ಷೇತ್ರಗಳಲ್ಲಿ ಬರೋಬ್ಬರಿ 136 ಸೀಟ್‌ಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್‌ ಅತ್ಯಂತ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ಅಣಿಯಾಗಿದೆ. ಇನ್ನೊಂದೆಡೆ ನರೇಂದ್ರ ಮೋದಿ ಅವರ ಮೂಲಕ ರಾಜ್ಯದಲ್ಲಿ ಒಂಭತ್ತೂವರೆ ಸಾವಿರಕ್ಕೂ ಅಧಿಕ ಸಮಾವೇಶಗಳು, ರೋಡ್‌ ಶೋಗಳನ್ನು ಮಾಡಿದ್ದ ಬಿಜೆಪಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ 104 ಸೀಟ್‌ಗಳ ಪೈಕಿ 39 ಸೀಟ್‌ಗಳನ್ನು ಕಟ್‌ ಮಾಡಿ ಈ ಬಾರಿ ಮತದಾರ ಪ್ರಭು ಆದೇಶ ನೀಡಿದ್ದಾನೆ. ಭಾರೀ ಗೊಂದಲಕ್ಕೆ ಕಾರಣವಾಗಿದ್ದ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕೆಸಿ ರಾಮಮೂರ್ತಿ ಗೆಲುವನ್ನು ಘೋಷಣೆ ಮಾಡುವುದರೊಂದಿಗೆ ಎಲ್ಲಾ 224 ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಬಿಜೆಪಿ ವಿರುದ್ಧ 40 % ಕಮೀಷನ್‌ನ ಆರೋಪ ಮಾಡಿದ್ದ ಕಾಂಗ್ರೆಸ್‌ ಪಕ್ಷದ ಅಭಿಯಾನ ಎಷ್ಟು ಜೋರಾಗಿತ್ತೆಂದರೆ, ಚುನಾವಣೆಯಲ್ಲಿ ಮತದಾರ ಹೆಚ್ಚೂ ಕಡಿಮೆ ಬಿಜೆಪಿಗೆ 40 ಸೀಟ್‌ಅನ್ನು ಕಟ್‌ ಮಾಡಿ ಕೊಟ್ಟಿರುವುದು ಮಾತ್ರ ವಿಪರ್ಯಾಸವಾಗಿದೆ. ಇನ್ನೊಂದೆಡೆ ಕಿಂಗ್‌ ಮೇಕರ್‌ ಆಗುವ ನಿರೀಕ್ಷೆಯಲ್ಲಿದ್ದ ಜೆಡಿಎಸ್‌ ಕೇವಲ 19 ಸ್ಥಾನ ಗೆದ್ದು ಹಿಟ್‌ ವಿಕೆಟ್‌ ಆಗಿದ್ದರೆ, ಇತರರು ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಬಿಜೆಪಿಯ 61 ಶಾಸಕರುಗಳಿಗೆ ಸೋಲು: ಬಿಜೆಪಿ ಪಕ್ಷದ ಘಟಾನುಘಟಿ ನಾಯಕರುಗಳಿಗೆ ಯಾರಿಗೂ ಈ ಬಾರಿ ವಿಧಾನ ಸೌಧಕ್ಕೆ ಏರುವ ಅವಕಾಶವನ್ನು ರಾಜ್ಯದ ಮತದಾರ ನೀಡಿಲ್ಲ. ಅದರಲ್ಲಿಯೂ ಪ್ರಮುಖವಾಗಿ ಸಿಟಿ ರವಿ, ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌, ವರುಣಾ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ವಿ.ಸೋಮಣ್ಣ, ಮುರುಗೇಶ್‌ ನಿರಾಣಿ, ಮಾಧುಸ್ವಾಮಿ, ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದ ಬಿಸಿ ನಾಗೇಶ್‌ ಎಲ್ಲರೂ ಸೋಲು ಕಂಡಿದ್ದಾರೆ. ಒಟ್ಟಾರೆಯಾಗಿ ಬಿಜೆಪಿಯ 61 ಹಾಲಿ ಶಾಸಕರುಗಳು ವಿಧಾನಸಭೆಯ ಕಣದಲ್ಲಿ ಸೋಲು ಕಂಡಿರುವುದು ಪಕ್ಷದ ಕೆಟ್ಟ ನಿರ್ವಹಣೆಗೆ ಸಾಕ್ಷಿಯಾಗಿದೆ.

ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಕ್ಲೀನ್‌ಸ್ವೀಪ್‌: ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಐದಕ್ಕೆ ಐದೂ ಸೀಟುಗಳಲ್ಲಿ ಗೆಲುವು ಕಂಡಿದ್ದರೆ, ಚಿಕ್ಕಬಳ್ಳಾಪುರದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋಲು ಕಂಡಿದೆ. ಅದಲ್ಲದೆ, ಚಿತ್ರದುರ್ಗದಲ್ಲಿ ಬಿಜೆಪಿ ಕೇವಲ ಒಂದು ಸೀಟ್‌ನಲ್ಲಿ ಮಾತ್ರವೇ ಗೆಲುವು ಕಂಡಿದ್ದರೆ, ದಾವಣಗರೆಯಲ್ಲೂ ಪಕ್ಷ ಕೇವಲ ಒಂದೇ ಸೀಟ್‌ ಗೆದ್ದಿದೆ. ಉತ್ತರ ಕನ್ನಡ ಒಂದೇ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ. ಮಧ್ಯ ಕರ್ನಾಟಕ ಕಾಂಗ್ರೆಸ್‌ ಪಾಲಿಗೆ ಗಟ್ಟಿಯಾಗಿ ನಿಂತುಕೊಂಡಿರುವುದು ಪಕ್ಷದ ಪ್ರಚಂಡ ಗೆಲುವಿಗೆ ಕಾರಣವಾಗಿದೆ.

ಕಾಂಗ್ರೆಸ್‌ನಲ್ಲಿ ಶುರುವಾಯ್ತು ಸಿಎಂ ಫೈಟ್‌: ಪ್ರಚಂಡ ಬಹುಮತ ಬಂದ ಬೆನ್ನಲ್ಲಿಯೇ ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಫೈಟ್‌ ಜೋರಾಗಿದೆ. ಡಿಕೆ ಶಿವಕುಮಾರ್ ಬೆಂಬಲಿಗರು ಈಗಾಗಲೇ ಡಿಕೆ ಶಿವಕುಮಾರ್‌ ಅವರೇ ಮುಂದಿನ ಸಿಎಂ ಆಗಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಇನ್ನೊಂದೆಡೆ, ಡಿಕೆ ಶಿವಕುಮಾರ್‌ ಕೂಡ ಆಪ್ತ ವಲಯದಲ್ಲಿ ನಾನೇ ಸಿಎಂ ಆಗ್ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ನ ಪ್ರಬಲ ನಾಯಕರಾಗಿ ಈಗಾಗಲೇ ಸಿಎಂ ರೇಸ್‌ನಲ್ಲಿರುವ ಸಿದ್ಧರಾಮಯ್ಯ ಕೂಡ ಸೈಲೆಂಟ್‌ ಆಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

Karnataka Election Results 2023: ಬಿಜೆಪಿಯ 61 ಹಾಲಿ ಶಾಸಕರಿಗೆ ಸೋಲಿನ ಏಟು

ಕಾಂಗ್ರೆಸ್‌ ವಿಜಯಕ್ಕೆ ಕಾರಣಗಳು: ಡಬಲ್‌ ಎಂಜಿನ್‌ ಸರ್ಕಾರ ಸಂಪೂರ್ಣ ವಿಫಲ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿದ್ದು, ಸಿದ್ಧರಾಮಯ್ಯ ಅವಧಿಯಲ್ಲಿ ಮಾಡಿದ್ದ ಜನಪರ ಯೋಜನೆಗಳನ್ನು ಮತದಾರರಿಗೆ ಮುಟ್ಟುವಂತೆ ಕಾಂಗ್ರೆಸ್‌ ನೋಡಿಕೊಂಡಿತು. ಅದರೊಂದಿಗೆ ಬಿಜೆಪಿಯ 40% ಕಮೀಷನ್‌ ಸರ್ಕಾರ ಎನ್ನುವ ಆರೋಪ, ನಂದಿನಿ-ಅಮೂಲ್‌, ಭಜರಂಗಬಲಿ ವಿವಾದ, ಧರ್ಮದಂಗಲ್‌ನ ಅಂಶಗಳು ಇವೆಲ್ಲವೂ ಕಾಂಗ್ರೆಸ್‌ ಪಾಲಿಗೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಪ್ಲಸ್‌ ಪಾಯಿಂಟ್‌ ಆಯಿತು. ಅದರೊಂದಿಗೆ ಗ್ಯಾರಂಟಿ ಘೋಷಣೆಗಳೂ ಕಾಂಗ್ರೆಸ್‌ನ ಕೆಳವರ್ಗದವರ ಮತಗಳನ್ನು ಪಡೆಯಲು ಸಹಾಯ ಮಾಡಿತು.

Karnataka Election Results 2023: ಗಂಭೀರ್‌ ರೀತಿ ಶಟ್‌ಅಪ್‌ ಎಂದ ರಾಹುಲ್‌, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

(ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇನ್ನೂ ಬಾಕಿ ಇದೆ)

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ನಾನೀಗ ಮನೆಯನ್ನು ಕಂಟ್ರೋಲ್‌ ಮಾಡಲಾಗ್ತಿಲ್ಲ, ವಿಲನ್‌ ಬಂದ್ರು ಎಂದು ನಡುಗಿದ Bigg Boss