Latest Videos

Karnataka Election Result 2023: ಹಿಂದುಗಳ ಹೆಣ ಎತ್ತೋಕು ಯಾರೂ ಬರಬಾರದು, ಮುಸ್ಲಿ ವ್ಯಕ್ತಿಯ ಕಾಮೆಂಟ್‌ ವೈರಲ್‌!

By Santosh NaikFirst Published May 13, 2023, 11:39 PM IST
Highlights

Karnataka Assembly Elections Result 2023: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ಕಾಂಗ್ರೆಸ್‌ ಬೆಂಬಲಿಗರ ಸಂಭ್ರಮ ಮುಗಿಲುಮುಟ್ಟಿದೆ. ಈ ನಡುವೆ ಕಾಂಗ್ರೆಸ್‌ ಗೆಲುವನ್ನು ಸಂಭ್ರಮಿಸುವ ಭರದಲ್ಲಿ ಹಾಕಿರುವ ಕಾಮೆಂಟ್‌ಗಳಿಗೆ ಆಕ್ರೋಶ ವ್ಯಕ್ತವಾಗಿದೆ.
 

ಬೆಂಗಳೂರು (ಮೇ.13): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ದೊಡ್ಡ ಗೆಲುವು ಕಂಡಿದೆ. ಇದರ ಬೆನ್ನಲ್ಲಿಯೇ ರಾಜ್ಯದಲ್ಲಿ ಅಹಿತಕರ ಎನ್ನುವಂಥ ಘಟನೆಗಳು ನಡೆದಿವೆ. ಉತ್ತರ ಕನ್ನಡದ ಭಟ್ಕಳದ ಶಂಶುದ್ದೀನ್‌ ಸರ್ಕಲ್‌ನಲ್ಲಿ ಇಸ್ಲಾಮಿಕ್‌ ಧ್ವಜವನ್ನು ಹಾರಿಸಲಾಗಿದ್ದರೆ, ಬೆಳಗಾವಿಯಲ್ಲಿ ಸಂಭ್ರಮಾಚರಣೆಯ ವೇಳೆ ಪಾಕಿಸ್ತಾನ ಜಿಂದಾಬಾದ್‌ ಎಂದು ಮುಸ್ಲಿಂ ವ್ಯಕ್ತಿಗಳು ಕೂಗಿದ್ದಾರೆ. ಇದರ ನಡುವೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಯೂಟ್ಯೂಬ್‌ ಲೈವ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಮಾಡಿರುವ ಕಾಮೆಂಟ್‌ಗಳು ವೈರಲ್‌ ಆಗಿದೆ. ಮಧ್ಯಾಹ್ 12.51ರ ಸುಮಾರಿಗೆ ಯೂಟ್ಯೂಬ್‌ ಲೈವ್‌ನಲ್ಲಿ ಕಾಮೆಂಟ್‌ ಮಾಡಿರುವ ನಜೀಂ ಎನ್ನುವ ವ್ಯಕ್ತಿ, 'ಹಿಂದುಗಳ ಹೆಣ ಎತ್ತೋಕು ಯಾರೂ ಬರರಬಾರದು. ಕರ್ನಾಟಕದಲ್ಲಿ ಇನ್ನು ಮುಂದೆ ಮುಸ್ಲಿಂ ಹವಾ ಅಲ್ಲಾಹು ಅಕ್ಬರ್‌' ಎಂದು ಬರೆದಿದ್ದಾನೆ. ಆತನ ಕಾಮೆಂಟ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಟ ನಿರ್ದೇಶಕ ಸಿಂಪಲ್‌ ಸುನಿ ಸೇರಿದಂತೆ ಬಹುತೇಕರು ಈ ವಿಚಾರದಲ್ಲಿ ಟೀಕೆ ಮಾಡಿದ್ದು, ಕರ್ನಾಟಕದಲ್ಲಿ ಇಂಥ ದ್ವೇಷ ಕಾಮೆಂಟ್‌ಗಳು ದಾಖಲಾಗಬಾರದು ಎಂದಿದ್ದಾರೆ. ಬಹುತೇಕ ಹೆಚ್ಚಿನವರು ಬೆಳಗಾವಿ, ಭಟ್ಕಳದಲ್ಲಿ ಆಗಿರುವ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

'ಡಿಯರ್ #ಕಾಂಗ್ರೆಸ್. ನಿಮ್ಮ ಕೈ ಇಂದ ಕಳೆ ಕೀಳುವ ಕೆಲಸ.. ನಿಮ್ಮ ಪಕ್ಷದಿಂದಲೇ ಶುರುವಾಗಲಿ. ಭಟ್ಕಳದಲ್ಲಿ..ಪಾಕಿಸ್ತಾನ ಜಿಂದಾಬಾದ್ ಅನ್ನುವುದು ಕರ್ನಾಟಕದಲ್ಲೇ ಭಾರತ ಸೋತಂತೆ. ಅದೆಂದಿಗೂ ಆಗಕೂಡದು. ಲಿಮಿಟ್‌ ಮೀರಿದವರನ್ನು ಎಲಿಮಿನೇಟ್‌ ಮಾಡಿಬಿಡಿ' ಎಂದು ಅವರು ಟ್ವೀಟ್‌ ಮಾಡಿದ್ದಾರೆ. 'ಬಿಟ್ಟಿಗೆ ನಾಲಿಗೆ  ಚಾಚಿ ಜೊಲ್ಲು ಸುರಿಸಿ ಇದಕ್ಕೆಲ್ಲಾ ಸಹಕರಿಸಿದ ಕಲಬೆರಕೆ ಹಿಂದೂಗಳಿಗೆ ‌ಸಾಷ್ಟಾಂಗ ನಮಸ್ಕಾರಗಳು' ಎಂದು ವಿಜಯನರಸಿಂಹ ಎನ್ನುವವರು ಟ್ವೀಟ್‌ ಮಾಡಿದ್ದಾರೆ. 'ಅದೆಷ್ಟು ಬೇಗ ಇವನನ್ನು ಬಂಧಿಸಿ ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ ಕಾಂಗ್ರೆಸ್ ಪಕ್ಷದವರೇ...' ಎಂದು ಜಗದೀಶ್‌ ಎಂ ಎನ್ನುವ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

'ಫಲಿತಾಂಶ ಬಂದು ಇನ್ನೂ ಬಹಳ ಸಮಯವೇನೂ ಕಳೆದಿಲ್ಲ. ಬೆಳಗಾವಿಯ ಕಾಂಗ್ರೆಸ್‌ ವಿಜಯೋತ್ಸವದಲ್ಲಿ ವಿಜೃಂಭಣೆಯಿಂದ ಕಾಂಗ್ರೆಸ್‌ ಜಿಂದಾಬಾದ್‌ ಎನ್ನುವ ಘೋಷಣೆ ಮೊಳಗಿದೆ. ಕಾಂಗ್ರೆಸ್‌ಗೆ ಮತ ನೀಡಿದ ಹಿಂದುಗಳೇ ಇದಕ್ಕೆ ಕಾರಣ' ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

'ಕಾಂಗ್ರೆಸ್‌ ಜಿಂದಾಬಾದ್. ಭಜರಂಗದಳವನ್ನು ಬ್ಯಾನ್‌ ಮಾಡಿಸಿ. ಹಿಂದು ಹುಡುಗಿಯರು, ಮುಸ್ಲಿಂ ಹುಡುಗರನ್ನ ಮದುವೆಯಾದರೆ 10 ಲಕ್ಷ ಕೊಡಿ' ಎಂದು ನಜೀಂ ಎನ್ನುವ ವ್ಯಕ್ತಿ ಕಾಮೆಂಟ್‌ ಬರೆದಿದ್ದಾರೆ. 'ಕಾಂಗ್ರೆಸ್ ಹೆಸರಿನಲ್ಲಿ ಕೆಲವು ಮೂರ್ಖರು ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಕಾರಣನಾ' ಎಂದು ಕೆಲವರು ಇದೇ ವಿಚಾರವನ್ನು ಪ್ರಶ್ನೆ ಮಾಡಿದ್ದಾರೆ. 'ಯಾವುದು ಇದು ಟಿವಿ ಚಾನೆಲ್? ಬಾವುಟ ಹಾರಿಸಿದ್ದು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಂದಿರದ ಮೇಲೆ ಅಲ್ಲ' ಎಂದು ಇದೇ ಪೋಸ್ಟ್‌ಗೆ ಕಾಮೆಂಟ್‌ ಕೂಡ ಬಂದಿದೆ.

Karnataka Election Result 2023 ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!

'ಮುಸ್ಲಿಮ್ ಎಂಬ ಒಂದು ದೊಡ್ಡ ಸಮುದಾಯದಲ್ಲಿ ಸ್ವಲ್ಪ ದೇಶದ್ರೋಹಿ ಹಿಂದೂ ವಿರೋಧಿ ಕೆಟ್ಟ ಹುಳುಗಳು ಇದ್ದಾರೆ ಎಂದು ಹೇಳಿದಾಗ, ನಮ್ಮನ್ನೆಲ್ಲ ಮುಸ್ಲಿಮರ ವಿರುದ್ಧ ಎಂದು ಹೇಳುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ಒಂದು ಪಂಗಡ ಮುಂದೆ ಬರುತ್ತದೆ. ತಿಳಿದುಕೊಳ್ಳಿ ನಮ್ಮ ಹೋರಾಟ ಮುಸ್ಲಿಮರ ವಿರುದ್ಧವಲ್ಲ ಇಂತಹ ಕೆಟ್ಟ ಹುಳುವಿನ ವಿರುದ್ಧ' ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. 'ಗೋದಿ ಮೀಡಿಯಾ ಗಳಿಗೆ ಹೊಟ್ಟೆ ಉರಿ ಹೆಚ್ಚಾಗಿತ್ತು ಅದಕ್ಕೆ ಕಂಡದ್ದು ಮುಸ್ಲಿಂ ಬಾವುಟ ಅದಕ್ಕೊಂದು ಕಾಮೆಂಟ್ ರೇಡಿ ಮಾಡಿ ಅಪಪ್ರಚಾರ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗೋದಿ ಮೀಡಿಯಾಗಳಿಗೆ ಮೂಗು ದಾರ ಹಾಕಬೇಕಾಗಿದೆ' ಎಂದು ಇದೆಲ್ಲದಕ್ಕೂ ಮೀಡಿಯಾವೇ ಕಾರಣ ಎಂದು ಇನ್ನೊಬ್ಬರು ಬರೆದಿದ್ದಾರೆ. 

Karnataka Election Results 2023: ಗಂಭೀರ್‌ ರೀತಿ ಶಟ್‌ಅಪ್‌ ಎಂದ ರಾಹುಲ್‌, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

'ಈ ಗೋದಿ ಮೀಡಿಯಾ ಗಳಿಗೆ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಪಾ ಹಪಿ! ಕೇಸರಿ ಧ್ವಜದ ಜೊತೆ ಪಾಕಿಸ್ತಾನದ ಧ್ವಜ ಅಂದರೆ ಇದು ಸಾಂಘಿ ಗಳ ಕೃತ್ಯವೆ ಇರಬೇಕು! ಮೊನ್ನೆ ಒಬ್ಬ  ಆರ್‌ಎಸ್‌ಎಸ್‌ ಸಂಘಿ ವಿಜ್ಞಾನಿ ಭಾರತದ ಕ್ಸಿಪಣಿ ತಂತ್ರಜ್ಞಾನ ಪಾಕಿಸ್ತಾನಕ್ಕೆ ಸಾಗಿಸುವಾಗ ಸಿಕ್ಕಿಬಿದ್ದ! ಇವರಿಗೆ ಜನರ ನೆಮ್ಮದಿ ಬೇಕಾಗಿಲ್ಲ!' ಎಂದು ಒನ್ನೊಬ್ಬರು ಬರೆದಿದ್ದಾರೆ.

click me!