Karnataka Election Result 2023 ಭ್ರಷ್ಟಾಚಾರ, ಕಮಿಷನ್‌ ರಾಜಕೀಯಕ್ಕೆ ವಿರುದ್ದವಾಗಿ ಸಿಕ್ಕ ಗೆಲುವು: ನವಜೋತ್ ಸಿಂಗ್ ಸಿಧು

By Naveen KodaseFirst Published May 13, 2023, 4:54 PM IST
Highlights

ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್‌
ಕಾಂಗ್ರೆಸ್‌ ಗೆಲುವನ್ನು ಭ್ರಷ್ಟಾಚಾರ ಹಾಗೂ ಕಮಿಷನ್ ರಾಜಕೀಯಕ್ಕೆ ವಿರುದ್ದವಾಗಿ ಸಿಕ್ಕ ಗೆಲುವು

ಕಾಂಗ್ರೆಸ್‌ ಗೆಲುವನ್ನು ಬಣ್ಣಿಸಿದ ಸಿಧು

ನವದೆಹಲಿ(ಮೇ.13): 16ನೇ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದೆ.  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135ಕ್ಕೂ ಅಧಿಕ ಸ್ಥಾನಗಳನ್ನು ಜಯಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರ ಹಾಗೂ ಕಾರ್ಯಕರ್ತ ಸಂತಸ ಮುಗಿಲು ಮುಟ್ಟಿದೆ. ಇದೀಗ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವನ್ನು ಭ್ರಷ್ಟಾಚಾರ ಹಾಗೂ ಕಮಿಷನ್ ರಾಜಕೀಯಕ್ಕೆ ವಿರುದ್ದವಾಗಿ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದಾರೆ.

224 ಸಂಖ್ಯಾಬಲದ ರಾಜ್ಯ ವಿಧಾನಸಭೆಯಲ್ಲಿ ಸರಕಾರ ರಚಿಸಲು 113 ಸ್ಥಾನಗಳನ್ನು ಗಳಿಸಬೇಕು. ಆದರೆ ಇದೀಗ ರಾಜ್ಯದಲ್ಲಿ 135ಕ್ಕೂ ಅಧಿಕ ಸ್ಥಾನಗಳನ್ನು ಜಯಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರವೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ಕರ್ನಾಟಕದಲ್ಲಿ ನಡೆದ ಚುನಾವಣಾ ಫಲಿತಾಂಶವು ಭ್ರಷ್ಟಾಚಾರ ಹಾಗೂ ಕಮಿಷನ್ ರಾಜಕೀಯಕ್ಕೆ ವಿರುದ್ದ ನೀಡಿದ ತೀರ್‍ಮಾನವಾಗಿದೆ. ಈ ಸರಕಾರವು ಕೇಂದ್ರ ಸರ್ಕಾರದ, ನಿರಂಕುಶಾಧಿಕಾರದ ಕಾರ್ಯವೈಖರಿಯನ್ನು ಪ್ರಜಾಪ್ರಭುತ್ವದ ವೇಷದಲ್ಲಿ ಮರೆಮಾಚುತ್ತಾ ಬಂದಿತ್ತು. ರಾಹುಲ್ ಗಾಂಧಿಯವರ ಅನರ್ಹತೆ ಹಾಗೂ 40% ಸರ್ಕಾರದ ವಿರುದ್ದದ ಹೋರಾಟಕ್ಕೆ ಕಾಂಗ್ರೆಸ್‌ಗೆ ಸಿಕ್ಕ ಗೆಲುವು ಇದಾಗಿದೆ.

ಸಂಘಟಿತ ಸಾಮೂಹಿಕ ನಾಯಕತ್ವ, ಶ್ರೀಯುತ ಮಲ್ಲಿಕಾರ್ಜನ್‌ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ನಾಯಕತ್ವದಿಂದ ಈ ಗೆಲುವು ಲಭಿಸಿದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು ಎಂದು ಸಿಧು ಟ್ವೀಟ್ ಮಾಡಿದ್ದಾರೆ.

The Karnataka Polls are a verdict against corruption and commission politics in the state and the autocratic functioning of the central government camouflaged in the garb of democracy…… Rahul Gandhi’s disqualification and the “40% Sarkara” Karntaka are the propelling factors…

— Navjot Singh Sidhu (@sherryontopp)

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೂ, ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. 

Karnataka Election Result 2023: ಸರಳತೆ ಮೆರೆದ ರಾಹುಲ್‌, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ

ದ್ವೇಷದ ಮಾರುಕಟ್ಟೆಯನ್ನು ಮುಚ್ಚಲಾಗಿದೆ ಮತ್ತು ಪ್ರೀತಿಯ ಅಂಗಡಿಗಳನ್ನು ತೆರೆಯಲಾಗಿದೆ  ಎಂದು ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್‌ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಬಡವರ ಶಕ್ತಿ ಗೆದ್ದಿದೆ ಎಂದೂ ರಾಹುಲ್‌ ಗಾಂಧಿ ಹೇಳಿದ್ದಾರೆ.

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಸದಸ್ಯರ ಬಲ ಅಗತ್ಯವಿದೆ. ಈ ಸಂಖ್ಯೆಯನ್ನು ಕಾಂಗ್ರೆಸ್ ಈ ಬಾರಿ ಅನಾಯಾಸವಾಗಿ ತಲುಪಿದೆ.

click me!