Karnatkaa Election Result ಮೈಸೂರಿನಲ್ಲಿ ಕಾಂಗ್ರೆಸ್ ಸುನಾಮಿ, ಬಿಜೆಪಿ ಮೌನಿ!

Published : May 13, 2023, 09:13 PM IST
Karnatkaa Election Result ಮೈಸೂರಿನಲ್ಲಿ ಕಾಂಗ್ರೆಸ್ ಸುನಾಮಿ, ಬಿಜೆಪಿ ಮೌನಿ!

ಸಾರಾಂಶ

ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸುನಾಮಿಗೆ ಬಿಜೆಪಿ ಕೊಚ್ಚಿ ಹೋಗಿದೆ. ಆದರೆ ಈ ಸುನಾಮಿ ನಡುವೆ ಜೆಡಿಎಸ್ 1 ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವರುಣಾದಲ್ಲಿ ಠಕ್ಕರ್ ನೀಡಲು ಹೋದ ಬಿಜೆಪಿ ಮಕಾಡೆ ಮಲಗಿದೆ. ಮೈಸೂರಿನಲ್ಲಿ ಗೆದ್ದವರು ಯಾರು? ಸೋತವರು ಯಾರು?

ಮೈಸೂರು(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಕಾಂಗ್ರೆಸ್ 134 ಸ್ಥಾನ ಗೆದ್ದುಕೊಂಡಿದ್ದರೆ, ಇನ್ನೆರಡು ಕ್ಷೇತ್ರದಲ್ಲಿ ಬಹುತೇಕ ಗೆಲುವಿನ ಅಂಚಿನಲ್ಲಿದೆ. ಇತ್ತ ಬಿಜೆಪಿ 65 ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ 19 ಸ್ಥಾನ ಗೆದ್ದುಕೊಂಡಿದೆ. ಮೈಸೂರು ಜಿಲ್ಲೆಯಲ್ಲಿನ 11 ಕ್ಷೇತ್ರಗಳ ಪೈಕಿ 10 ಕಾಂಗ್ರೆಸ್ ಪಾಲಾಗಿದೆ. ಇನ್ನೊಂದು ಕ್ಷೇತ್ರ ಜೆಡಿಎಸ್ ಉಳಿಸಿಕೊಂಡಿದೆ. ಇಲ್ಲಿ ಬಿಜೆಪಿ ಖಾತೆ ತೆರೆದಿಲ್ಲ. ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಮೈಸೂರು ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿತು. ಸಿದ್ದುಗೆ ಠಕ್ಕರ್ ನೀಡಲು ಬಿಜೆಪಿಯಿಂದ ವಿ ಸೋಮಣ್ಣ ಅಖಾಡಕ್ಕೆ ಇಳಿದಿದ್ದರು. ಆದರೆ ಸೋಮಣ್ಣ ಸೋಲಿಗೆ ಶರಣಾಗಿದ್ದಾರೆ. ಇತ್ತ ಚಾಮಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ವರುಣಾ ವಿಧಾನಸಭಾ ಕ್ಷೇತ್ರ
ಗೆಲುವು: ಸಿದ್ದರಾಮಯ್ಯ(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ವಿ ಸೋವಣ್ಣ
ಕಾಂಗ್ರೆಸ್: ಸಿದ್ದರಾಮಯ್ಯ
ಜೆಡಿಎಸ್:ಡಾ. ಎನ್ಎಲ್ ಭಾರತೀಶಂಕರ್

ಕೃಷರಾಜ ವಿಧಾನಸಭಾ ಕ್ಷೇತ್ರ
ಗೆಲುವು:ಎಂಕೆ ಸೋಮಶೇಕರ್(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಟಿಎಸ್ ಶ್ರೀವತ್ಸ
ಕಾಂಗ್ರೆಸ್: ಎಂಕೆ ಸೋಮಶೇಖರ್
ಜೆಡಿಎಸ್:ಕೆವಿ ಮಲ್ಲೇಶ್

Karnataka Election Result 2023 ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!

ಚಾಮರಾಜ ವಿಧಾನಸಭಾ ಕ್ಷೇತ್ರ
ಗೆಲುವು: ಹರೀಶ್ ಗೌಡ(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಎಲ್ ನಾಗೇಂದ್ರ
ಕಾಂಗ್ರೆಸ್: ಕೆ ಹರೀಶ್ ಗೌಡ 
ಜೆಡಿಎಸ್: ಹೆಚ್ ಕೆ ರಮೇಶ್

ನರಸಿಂಹರಾಜ ವಿಧಾನಸಭಾ ಕ್ಷೇತ್ರ
ಗೆಲುವು: ತನ್ವೀರ್ ಸೇಠ್ (ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಸಂದೇಶ್ ಸ್ವಾಮಿ
ಕಾಂಗ್ರೆಸ್: ತನ್ವೀರ್ ಸೇಠ್
ಜೆಡಿಎಸ್: ಅಬ್ದುಲ್ ಖಾದೀರ್
ಎಸ್‌ಡಿಪಿಐ: ಅಬ್ದುಲ್ ಮಜೀದ್

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
ಗೆಲುವು: ಜಿಟಿ ದೇವೇಗೌಡ (ಜೆಡಿಎಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ವಿ ಕವೀಶ್ ಗೌಡ
ಕಾಂಗ್ರೆಸ್:ಎಸ್ ಸಿದ್ದೇಗೌಡ
ಜೆಡಿಎಸ್:ಜಿಟಿ ದೇವೇಗೌಡ

ನಂಜನಗೂಡು ವಿಧಾನಸಭಾ ಕ್ಷೇತ್ರ
ಗೆಲುವು: ದರ್ಶನ್ ಧ್ರುವನಾರಾಯಣ್(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಬಿ ಹರ್ಷವರ್ಧನ್
ಕಾಂಗ್ರೆಸ್: ದರ್ಶನ್ ಧ್ರುವನಾರಾಯಣ್
ಜೆಡಿಎಸ್: ಕಾಂಗ್ರೆಸ್‌ಗೆ ಬೆಂಬಲ

Karnataka Election Result 2023 ಪ್ರಮುಖ 10 ಸಮೀಕ್ಷೆಯಲ್ಲಿ ಒಬ್ಬರ ಭವಿಷ್ಯ ಪಕ್ಕಾ, ಉಳಿದವರ ಲೆಕ್ಕ ಉಲ್ಟಾ!

ಟಿ ನರಸೀಪುರ ವಿಧಾನಸಭಾ ಕ್ಷೇತ್ರ
ಗೆಲುವು: ಡಾ.ಹೆಚ್‌ಸಿ ಮಹದೇವಪ್ಪ(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಡಾ.ರೇವಣ್ಣ
ಕಾಂಗ್ರೆಸ್:ಡಾ.ಹೆಚ್‌ಸಿ ಮಹದೇವಪ್ಪ
ಜೆಡಿಎಸ್: ಎಂ.ಅಶ್ವಿನ್ ಕುಮಾರ್

ಎಚ್‌ಡಿ ಕೋಟೆ ವಿಧಾನಸಭಾ ಕ್ಷೇತ್ರ
ಗೆಲುವು: ಅನಿಲ್ ಚಿಕ್ಕಮಾದು(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಕೆಎಂ ಕೃಷ್ಣನಾಯಕ 
ಕಾಂಗ್ರೆಸ್: ಅನಿಲ್ ಚಿಕ್ಕಮಾದು
ಜೆಡಿಎಸ್: ಸಿ ಜಯಪ್ರಕಾಶ್

ಹುಣಸೂರು ವಿಧಾನಸಭಾ ಕ್ಷೇತ್ರ
ಗೆಲುವು:ಎಚ್‌ಪಿ ಮಂಜುನಾಥ್(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ದೇವರಹಳ್ಳಿ ಸೋಮಶೇಖರ್ 
ಕಾಂಗ್ರೆಸ್: ಎಚ್‌ಪಿ ಮಂಜುನಾಥ್
ಜೆಡಿಎಸ್:ಜಿಡಿ ಹರೀಶ್ ಗೌಡ

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ
ಗೆಲುವು: ಕೆ ವೆಂಕಟೇಶ್(ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಸಿಎಚ್ ವಿಜಯಶಂಕರ್
ಕಾಂಗ್ರೆಸ್: ಕೆ ವೆಂಕಟೇಶ್
ಜೆಡಿಎಸ್: ಕೆ ಮಹದೇವ್

ಕೆಆರ್ ನಗರ ವಿಧಾನಸಭಾ ಕ್ಷೇತ್ರ
ಗೆಲುವು:ಡಿ ರವಿಶಂಕರ್ (ಕಾಂಗ್ರೆಸ್)

ಸ್ಪರ್ಧಿಸಿದ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ: ಹೊಸಹಳ್ಳಿ ವೆಂಕಟೇಶ್
ಕಾಂಗ್ರೆಸ್:ಡಿ ರವಿಶಂಕರ್
ಜೆಡಿಎಸ್: ಸಾರಾ ಮಹೇಶ್

ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಶೇಕಡಾ 75.04ರಷ್ಟು ಮತದಾನವಾಗಿದೆ. 2018ರ ಚುನಾವಣೆಯಲ್ಲಿ ಶೇಕಡಾ 74.16ರಷ್ಟು ಮತದಾನವಾಗಿತ್ತು. ಮೈಸೂರು ಜಿಲ್ಲೆಯಲ್ಲಿ ಒಟ್ಟು 28,38,487 ಮತದಾರರಿದ್ದಾರೆ. ಇದರಲ್ಲಿ 13,08,771 ಪುರುಷ ಮತದಾರರು ಹಾಗೂ 13,29,493 ಮಹಿಳಾ ಮತದಾರರಿದ್ದಾರೆ. ಇನ್ನು 223 ಇತರ ಮತದಾರರಿದ್ದಾರೆ. 

2018ರ ವಿಧಾನಸಭಾ ಚುನಾವಣಾ ಫಲಿತಾಂಶ
2018ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 5 ಜೆಡಿಎಸ್ ಪಾಲಿಗದ್ದರೆ, 3 ಬಿಜೆಪಿ ಹಾಗೂ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ 96,435 ಮತಗಳನ್ನು ಪಡೆದು ಗೆಲುವು ಸಾದಿಸಿದ್ದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ಗೆ ಆಘಾತ ನೀಡಿದ್ದ ಕ್ಷೇತ್ರವಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖಭಂಗ ಅನುಭವಿಸಿದ್ದರು. ಜೆಡಿಎಸ್ ನಾಯಕ ಜಿಟಿ ದೇವೇಗೌಡ 1,21,325 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಪಿರಿಯಾಪಟ್ಟಣದಲ್ಲಿ ಜೆಡಿಎಸ್ ನಾಯಕ ಕೆ ಮಹಾದೇವ 77,770 ಮತಗಳನ್ನು ಪಡೆದಿದ್ದರು. ಕೃಷ್ಣರಾಜನಗರದಲ್ಲಿ ಜೆಡಿಎಎಸ್ ನಾಯಕ ಸಾರಾ ಮಹೇಶ್ 85,011 ಮತಗಳನ್ನುಪಡೆದು ಗೆಲುವು ಸಾಧಿಸಿದ್ದರು. ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹೆಚ್ ವಿಶ್ವನಾಥ್ 91,667 ಮತಗಳಿಂದ ಗೆಲುವು ಸಾಧಿಸಿದ್ದರು. ಬಳಿಕ ಆಪರೇಶನ್ ಕಮಲ ಮೂಲಕ ಬಿಜೆಪಿ ಸೇರಿ ಸೋಲು ಕಂಡಿದ್ದರು. ಹೆಚ್‌ಡಿ ಕೋಟೆಯಲ್ಲಿ ಕಾಂಗ್ರೆಸ್ ನಾಯಕ ಅನಿಲ್ ಕುಮಾರ್ ಸಿ  76,652 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ನಂಜನಗೂಡಿನಲ್ಲಿ ಬಿ ಹರ್ಷವರ್ಧನ 78,030 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕೃಷ್ಣರಾಜಕ್ಷೇತ್ರದಲ್ಲಿ ಬಿಜೆಪಿ ನಾಯಕ ಎಸ್‌ಎ ರಾಮದಾಸ 78,573 ಮತಗಳ ಮೂಲಕ ಗೆಲುವು ಸಾಧಿಸಿದ್ದರು. ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಎಲ್ ನಾಗೇಂದ್ರ 51,683 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ನರಸಿಂಹರಾಜದಲ್ಲಿ ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ 62,268 ಮತಗಳ ಮೂಲಕ ಗೆಲುವು ಕಂಡಿದ್ದರು. ಟಿ ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಅಶ್ವಿನ್ ಕುಮಾರ್ ಎಂ 83,929 ಮತಗಳನ್ನು ಪಡೆದು ಗೆದ್ದಿದ್ದರು.  ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರ ರಾಜೀನಾಮೆಯಿಂದ ಹುಣಸೂರಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಹೀಗಾಗಿ ಕ್ಷೇತ್ರದಲ್ಲಿ ಪ್ರಸ್ತುತ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತಲಾ 4, ಬಿಜೆಪಿ 3 ಸ್ಥಾನಗಳನ್ನು ಹೊಂದಿವೆ.

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!