Karnataka election 2023: ಕೂಡ್ಲಿಗಿ ಕಣದಲ್ಲಿ ‘ಮೀಸೆ’ ಇಲ್ಲದ ಗಂಡಸರು ಸ್ಪರ್ಧೆ!

By Kannadaprabha News  |  First Published May 5, 2023, 11:31 AM IST

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಣಕ್ಕಿಳಿದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ್ಯಾರೂ ಮೀಸೆ ಬಿಟ್ಟಿಲ್ಲ!


ಕೂಡ್ಲಿಗಿ (ಮೇ.5) : ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಣಕ್ಕಿಳಿದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ್ಯಾರೂ ಮೀಸೆ ಬಿಟ್ಟಿಲ್ಲ! ಮೀಸೆ ಹೊತ್ತ ಗಂಡಸರಿಗೇ ಡಿಮ್ಯಾಂಡ್‌ ಎಂದು ಹೇಳುವಂತಿಲ್ಲ, ಇಲ್ಲಿ ಮೀಸೆ ಇಲ್ಲದ ಗಂಡಸರಿಗೇ ಬೇಡಿಕೆ!

ಕೂಡ್ಲಿಗಿ ಕ್ಷೇತ್ರದ (Kudligi assembly constituency) ಕಾಂಗ್ರೆಸ್‌ ಅಭ್ಯರ್ಥಿ ಡಾ. ಎನ್‌.ಟಿ. ಶ್ರೀನಿವಾಸ, ಬಿಜೆಪಿ ಅಭ್ಯರ್ಥಿ ಲೋಕೇಶ ವಿ. ನಾಯಕ, ಜೆಡಿಎಸ್‌ ಅಭ್ಯರ್ಥಿ ಕೋಡಿಹಳ್ಳಿ ಭೀಮಪ್ಪ, ಆಮ… ಆದ್ಮಿ ಪಕ್ಷದ ಅಭ್ಯರ್ಥಿ ನಾರಿ ಶ್ರೀನಿವಾಸ ಅವರು ಈ ಬಾರಿಯ ಕೂಡ್ಲಿಗಿ ಕ್ಷೇತ್ರದ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳಾಗಿದ್ದು, ಅವರು ಯಾರೂ ಮೀಸೆ ಬಿಟ್ಟಿಲ್ಲ!

Latest Videos

undefined

ಕ್ಷೇತ್ರದಲ್ಲಿ ಅವರು ಜನತೆಯ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಬಹಳಷ್ಟುಆಕಾಂಕ್ಷಿಗಳು ಮೀಸೆ ತೆಗೆಸಿದರೂ ಅಚ್ಚರಿಪಡಬೇಕಾಗಿಲ್ಲ. ಏಕೆಂದರೆ ಈ ಬಾರಿಯ ಪ್ರಮುಖ ಪಕ್ಷಗಳು ಮೀಸೆ ಇಲ್ಲದವರಿಗೇ ಟಿಕೆಟ್‌ ನೀಡಿವೆ.

ಸೀತಾಮಾತೆಯ ರಕ್ಷಿಸಿದ ಬಜರಂಗಿ ಬೇಕು; ಬಜರಂಗದಳವಲ್ಲ- ನೀತಾ ಡಿಸೋಜಾ

ಕೂಡ್ಲಿಗಿಯಲ್ಲಿ ಡಾ. ಶ್ರೀನಿವಾಸ ಪತ್ನಿ ಪ್ರಚಾರ

ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ನೇತ್ರತಜ್ಞ ಡಾ. ಎನ್‌.ಟಿ. ಶ್ರೀನಿವಾಸ ಅವರ ಪರವಾಗಿ ಪತ್ನಿ ಡಾ. ಪುಷ್ಪಾ ಅವರು ಬುಧವಾರ ಮತ್ತು ಗುರುವಾರ ತಾಲೂಕಿನ ಯರ್ರಗುಂಡ್ಲಹಟ್ಟಿ, ತಿಮ್ಮನಹಳ್ಳಿ ಸೇರಿದಂತೆ ಗುಡೇಕೋಟೆ ಹೋಬಳಿಯಲ್ಲಿ ಪ್ರಚಾರ ನಡೆಸಿದರು.

ತಾಲೂಕಿನ ಯರ್ರಗುಂಡ್ಲಹಟ್ಟಿಗ್ರಾಮದಲ್ಲಿ ಡಾ. ಪುಷ್ಪಾ ಮಾತನಾಡಿ, ನನ್ನ ಪತಿ ಡಾ. ಎನ್‌.ಟಿ. ಶ್ರೀನಿವಾಸ್‌ ಅವರು ನಿಮ್ಮೆಲ್ಲರ ಮನೆ ಮಗನಾಗಿದ್ದಾರೆ. ಈ ನೆಲದ ಋುಣ ತೀರಿಸಲು ಅವರಿಗೆ ಅವಕಾಶ ಮಾಡಿಕೊಡಿ, ನಿಮ್ಮನ್ನು ನಾವು ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದರು.

ಕ್ಷೇತ್ರದ ಮಹಿಳೆಯರು, ಮಕ್ಕಳು ಸೇರಿ ಬಹುತೇಕರಲ್ಲಿ ಪೌಷ್ಟಿಕಾಂಶದ ಕೊರತೆ ಕಾಡುತ್ತಿದೆ. ಅಲ್ಲದೆ ರೈತರಿಗೆ ನೀರಾವರಿ ಸೌಲಭ್ಯವಿಲ್ಲ, ಮೆಡಿಕಲ…, ಎಂಜಿನಿಯರಿಂಗ್‌ ಕಾಲೇಜುಗಳಿಲ್ಲದೆ ಉನ್ನತ ಶಿಕ್ಷಣ ಸಿಗುತ್ತಿಲ್ಲ. ಜನರಿಗೆ ಉದ್ಯೋಗ ಕಲ್ಪಿಸುವಂಥ ಕೈಗಾರಿಕೆಗಳಿಲ್ಲ. ಹೀಗಾಗಿ ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಜನರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ದೊರಕಿಸುವಂಥ ಮಹದಾಸೆಯನ್ನು ಡಾ. ಎನ್‌.ಟಿ. ಶ್ರೀನಿವಾಸ್‌ ಅವರು ಹೊತ್ತಿದ್ದಾರೆ. ಆದ್ದರಿಂದ ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿಸುವ ಮೂಲಕ ಡಾ. ಎನ್‌.ಟಿ. ಶ್ರೀನಿವಾಸ್‌ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ: ಡಿ.ಕೆ.ಶಿವಕುಮಾರ್‌

ಇದಕ್ಕೂ ಮುಂಚೆ ತಾಲೂಕಿನ ನರಸಿಂಹನಗಿರಿ, ಚಿಕ್ಕಕುಂಬಳಗುಂಟೆ, ಜುಮ್ಮೋಬನಹಳ್ಳಿ, ಗೆದ್ದಲಗಟ್ಟೆಸೇರಿ ಹಲವಾರು ಹಳ್ಳಿಗಳಲ್ಲಿ ಮಹಿಳೆಯರನ್ನು ಭೇಟಿ ಮಾಡಿ ಅವರ ಆರೋಗ್ಯ ಇತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಡಾ. ಎನ್‌.ಟಿ. ಶ್ರೀನಿವಾಸ್‌ ಅವರ ಸಹೋದರಿ ಸುಜಾತಾ ಸೇರಿ ನಾನಾ ಹಳ್ಳಿಗಳಿಂದ ಆಗಮಿಸಿದ್ದ ಮಹಿಳೆಯರು ಇದ್ದರು.

4ಕೆಡಿಜಿ1- ಕೂಡ್ಲಿಗಿ ತಾಲೂಕಿನ ಯರ್ರಗುಂಡ್ಲಹಟ್ಟಿಗ್ರಾಮದಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಡಾ. ಎನ್‌.ಟಿ. ಶ್ರೀನಿವಾಸ ಅವರ ಪರವಾಗಿ ಡಾ. ಪುಷ್ಪಾ ಅವರು ಮತಯಾಚನೆ ಮಾಡಿದರು.

click me!