ಗಣಪತಿಕೆರೆಯ ಒಂದು ದಂಡೆಗೆ ಬಣ್ಣ ಬಳಿದು, ಧ್ವಜ ಹಾರಿಸಿರುವುದೇ ಅಭಿವೃದ್ಧಿ ಎನ್ನುವ ಭ್ರಮೆ ಸೃಷ್ಟಿಸಿರುವ ಶಾಸಕರು, ಐದು ವರ್ಷಗಳ ಅವಧಿಯಲ್ಲಿ ಜನಪರವಾದ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಟೀಕಿಸಿದರು.
ಸಾಗರ (ಏ.9) : ಚುನಾವಣೆಯಲ್ಲಿ ಗೆಲ್ಲುವುದು ಕೇವಲ ಅಧಿಕಾರ ಹಿಡಿಯುವುದಕ್ಕಲ್ಲ. ಗೆದ್ದ ನಂತರ ಜನರ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನಗರ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕರು ಗೆದ್ದ ನಂತರ ಜನರ ಕೆಲಸ ಮಾಡುವುದನ್ನು ಬಿಟ್ಟು ತಮ್ಮ ಮೂಗಿನ ನೇರಕ್ಕೆ ಬೇಕಾದ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
undefined
ಬ್ರಾಹ್ಮಣರ ಮೇಲೆ ಹರತಾಳು ಹಾಲಪ್ಪನ ದಬ್ಬಾಳಿಕೆ ಇನ್ಮುಂದೆ ಸಹಿಸಲ್ಲ: ಬ್ರಾಹ್ಮಣ ಮಹಾಸಭಾ
ಗಣಪತಿಕೆರೆ(Ganapati kere)ಯ ಒಂದು ದಂಡೆಗೆ ಬಣ್ಣ ಬಳಿದು, ಧ್ವಜ ಹಾರಿಸಿರುವುದೇ ಅಭಿವೃದ್ಧಿ ಎನ್ನುವ ಭ್ರಮೆ ಸೃಷ್ಟಿಸಿರುವ ಶಾಸಕರು, ಐದು ವರ್ಷಗಳ ಅವಧಿಯಲ್ಲಿ ಜನಪರವಾದ ಯಾವ ಕೆಲಸವನ್ನೂ ಮಾಡಿಲ್ಲ. ನಾನು ಅಧಿಕಾರದಲ್ಲಿ ಇದ್ದಾಗ ರಾಮನಗರದಲ್ಲಿ 19 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಪ್ರದೇಶವನ್ನು ನಿರ್ಮಿಸಲಾಗಿತ್ತು. ಹಾಲಿ ಶಾಸಕರಿಗೆ ಒಂದು ಕಾರ್ಖಾನೆಯನ್ನು ತಂದು ದುಡಿಯುವ ಕೈಗೆ ಕೆಲಸ ಕೊಡಲು ಸಾಧ್ಯವಾಗಿಲ್ಲ. ನಾನು ತಂದ ತಹಸೀಲ್ದಾರ್ ಕಚೇರಿಯನ್ನು ಉದ್ಘಾಟಿಸಿಲ್ಲ. ಸೇತುವೆ ಕಟ್ಟಿದ್ದೇವೆ, ಅದಕ್ಕೆ ಸುಣ್ಣಬಣ್ಣ ಹೊಡೆಯಲು ಸಹ ಆಗಿಲ್ಲ. ಮುಂದೆ ಅಂತಹ ತಪ್ಪು ಆಗದಂತೆ ಮತದಾರರು ಜಾಗೃತಿ ವಹಿಸಬೇಕು. ಚುನಾವಣೆಯನ್ನು ಯಾರೂ ಲಘುವಾಗಿ ನೋಡಬೇಡಿ. ಜನರ ಪರವಾಗಿ ಇದ್ದೂ ನನಗೆ ಸೋಲಾಗಿತ್ತು. ಈ ಬಾರಿ ಬೇಳೂರು ಸೋಲದಂತೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು(Gopalakrishna belur) ಮಾತನಾಡಿ, ಐದು ವರ್ಷ ಅಧಿಕಾರ ನಡೆಸಿದವರು ಈ ಕ್ಷೇತ್ರವನ್ನು ಕುಡುಕರ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಹೊರತು, ಬೇರಾರಯವುದೇ ಅಭಿವೃದ್ಧಿಯಾಗಿಲ್ಲ. ಶಾಸಕರ ಅಭಿವೃದ್ಧಿಯ ಮಾನದಂಡ ಯಾವುದೆಂದರೆ ಜನಸಾಮಾನ್ಯರು ನೀರು ಕೇಳಿದ್ರೆ ಬೀರು ಕೊಡ್ತೀವಿ ಎನ್ನುವಂತೆ ಎಂದು ಲೇವಡಿ ಮಾಡಿದರಲ್ಲದೆ, ಬಿಜೆಪಿಗೆ ಮತ ಕೇಳುವುದಕ್ಕೆ ಯಾವುದೇ ನೈತಿಕತೆ ಇಲ್ಲ. ನಗರ ವ್ಯಾಪ್ತಿಯಲ್ಲಂತೂ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ನಮಗೆ ಮತ ಕೇಳುವುದಕ್ಕೆ ಗ್ಯಾರಂಟಿ ಕಾರ್ಡ್ ಬಲವಿದೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಕಲಗೊಡು ರತ್ನಾಕರ್ ಮಾತನಾಡಿ, ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಪಕ್ಷದ ತಿರ್ಮಾನ ಮುಖ್ಯ. ಅದನ್ನು ಮೀರಿ ಎಂದೂ ಚಿಂತನೆ ಮಾಡಿಲ್ಲ. ಈಗಲೂ ಒಗ್ಗಟ್ಟಾಗಿ ಹೋದರೆ ಮಾತ್ರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿದೆ ಎನ್ನುವ ಕಾರಣಕ್ಕೆ ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.
Food Poisoning: ಕಲುಷಿತ ಆಹಾರ ಸೇವಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಶಾಸಕ ಹರತಾಳು ಹಾಲಪ್ಪ ಭೇಟಿ
ಪಕ್ಷದ ನಗರ ಘಟಕದ ಅಧ್ಯಕ್ಷ ಐ.ಎನ್.ಸುರೇಶಬಾಬು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಮಧುಮಾಲತಿ, ಗಣಪತಿ ಮಂಡಗಳಲೆ, ಚಂದ್ರಪ್ಪ, ಅಜೀಮ್, ಮಹಾಬಲ ಕೌತಿ, ಡಿ.ದಿನೇಶ ಮತ್ತಿತರರು ಇದ್ದರು.