ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ತಳಮಳ: ತಲೆಕೆಳಗು ಮಾಡಿದ ಲೆಕ್ಕಾಚಾರ!

By Kannadaprabha NewsFirst Published Apr 9, 2023, 2:32 PM IST
Highlights

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್‌ ಜನ್ಮ ನೀಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣಾ ಟಿಕೆಟ್‌ ಹಂಚಿಕೆ ಕಾಂಗ್ರೆಸ್‌ಗೆ ಕಗ್ಗಂಟಾಗಿ ಪರಿಣಮಿಸಿದೆ.

ಚಿಕ್ಕಮಗಳೂರು (ಏ.9) : ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್‌ ಜನ್ಮ ನೀಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣಾ ಟಿಕೆಟ್‌ ಹಂಚಿಕೆ ಕಾಂಗ್ರೆಸ್‌ಗೆ ಕಗ್ಗಂಟಾಗಿ ಪರಿಣಮಿಸಿದೆ.

ಕಾಂಗ್ರೆಸ್‌ ಟಿಕೆಟ್‌(Congress Ticket) ಹಂಚಿಕೆಯ ಮೊದಲ ಪಟ್ಟಿಪ್ರಕಟಗೊಂಡಾಗ ಆಕಾಂಕ್ಷಿಗಳು ತಲೆ ಕೆಡಿಸಿಕೊಳ್ಳಲಿಲ್ಲ. ಎರಡನೇ ಪಟ್ಟಿಯಲ್ಲಿ ಕಡೂರು ಕ್ಷೇತ್ರ(Kadur assembly constituency) ದ ಟಿಕೆಟ್‌ ಪ್ರಕಟಗೊಂಡ ನಂತರ ಆಕಾಂಕ್ಷಿಗಳ ಲೆಕ್ಕಾಚಾರ ತಲೆ ಕೆಳಗಾಗಿದೆ. ಇದಲ್ಲದೆ ಹಲವು ಮಂದಿ ಟಿಕೆಟ್‌ ಸಿಗುವ ಆಸೆಯನ್ನು ಕೈಬಿಡುವ ಹಂತಕ್ಕೆ ತಲುಪಿದ್ದಾರೆ. ಟಿಕೆಟ್‌ಗೆ ಲಾಭಿ ಮಾಡಲು ಬೆಂಗಳೂರು, ದೆಹಲಿಗೆ ಹಲವು ಬಾರಿ ಹೋಗಿ ಬಂದ ಮುಖಂಡರಲ್ಲಿ ಇತ್ತೀಚಿನ ಬೆಳವಣಿಗೆಯಿಂದಾಗಿ ತಳಮಳ ಉಂಟಾಗಿದೆ.

Latest Videos

ಸೇತುವೆ ಕೆಲ​ಸಕ್ಕೆ ಶರಾ​ವತಿ ನೀರು ಬಳಕೆ: ಹೊಸನಗರದಲ್ಲಿ ಕುಡಿಯುವ ನೀರಿಗೆ ಬರ!

ಚಿಕ್ಕಮಗಳೂರು:

ಕಡೂರಿನಲ್ಲಿ ಕುರುಬ ಸಮುದಾಯ(Kuruba community)ಕ್ಕೆ ಆದ್ಯತೆ ನೀಡಿದ್ದರಿಂದ ಚಿಕ್ಕಮಗಳೂರು (Chikkamagalluru) ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯ(Lingayat community)ಕ್ಕೆ ಟಿಕೆಟ್‌ ಸಿಗುವ ಆಂದಾಜು ಮಾಡಲಾಗಿದೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಮಹಡಿಮನೆ ಸತೀಶ್‌, ಬಿ.ಎಚ್‌. ಹರೀಶ್‌ ಜತೆಗೆ ಬಿಜೆಪಿಗೆ ಗುಡ್‌ ಬೈ ಹೇಳಿರುವ ಎಚ್‌.ಡಿ. ತಮ್ಮಯ್ಯ ಕೂಡ ಫಿಚ್‌ನಲ್ಲಿ ಇದ್ದಾರೆ. ಹಾಗಾಗಿ ಚಿಕ್ಕಮಗಳೂರು ಟಿಕೆಟ್‌ ಯಾರಿಗೆ ಎಂಬುದು ಮತ್ತಷ್ಟುಕುತೂಹಲಕ್ಕೆ ಕಾರಣವಾಗಿದೆ.

ಟಿಕೆಟ್‌ಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಟಿಕೆಟ್‌ ನೀಡಬೇಕೆಂದು ಅರ್ಜಿ ಹಾಕಿರುವ 6 ಮಂದಿ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದರಿಂದ ಚುನಾವಣೆ ಸಂದರ್ಭದಲ್ಲಿ ಈ ಆಂತರಿಕ ಬಿಕ್ಕಟ್ಟಿನಲ್ಲಿ ಇನ್ನಷ್ಟುಬಿರುಕು ಕಾಣಬಾರದೆಂಬ ಉದ್ದೇಶದಿಂದ ಶುಕ್ರವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಪರಿಸ್ಥಿತಿ ಅವಲೋಕನಾ ಸಭೆ ನಡೆದಿದೆ.ಇದೆಲ್ಲದರ ನಡುವೆ ಕೆಲವೆಡೆ ನಾಯಕರ ಬೆಂಬಲಿಗರು ಪ್ರತಿಭಟನೆಗೂ ಮುಂದಾಗಿದ್ದಾರೆ.

ಪ್ರತಿಭಟನೆ:

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ(Chikkamagaluru assembly constituency)ದಲ್ಲಿ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್‌ ನೀಡಿದರೆ ತರೀಕೆರೆ ಕ್ಷೇತ್ರದಲ್ಲಿ ಇದೇ ಸಮುದಾಯಕ್ಕೆ ಮತ್ತೆ ಟಿಕೆಟ್‌ ನೀಡುವುದು ಅನುಮಾನ.

ಈ ಕಾರಣಕ್ಕಾಗಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ದೋರನಾಳು ಪರಮೇಶ್‌ ಅವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇರುವುದರಿಂದ ಅವರ ಬೆಂಬಲಿಗರು ತರೀಕೆರೆಯ ಕಾಂಗ್ರೆಸ್‌ ಕಚೇರಿ ಎದುರು ರಸ್ತೆಯಲ್ಲಿ ಟಯರ್‌ ಇಟ್ಟು ಬೆಂಕಿ ಹಚ್ಚಿ ಶನಿವಾರ ಪ್ರತಿಭಟನೆ ನಡೆಸಿದರು.

ಕಡೂರು ಕ್ಷೇತ್ರದ ಟಿಕೆಟ್‌ ಕುರುಬ ಸಮುದಾಯಕ್ಕೆ ನೀಡಲಾಗಿದೆ. ಚಿಕ್ಕಮಗಳೂರು ಟಿಕೆಟ್‌ ಲಿಂಗಾಯಿತ ಸಮುದಾಯಕ್ಕೆ ನೀಡಿದರೆ, ತರೀಕೆರೆ ಯಾವ ಸಮುದಾಯಕ್ಕೆ ಎಂಬ ಪ್ರಶ್ನೆ ಮತದಾರರ ಮುಂದಿದೆ. ತರೀಕೆರೆ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಸೇರಿರುವ ಮಾಜಿ ಶಾಸಕ ಜಿ.ಎಚ್‌. ಶ್ರೀನಿವಾಸ್‌ ಹಾಗೂ ಮಡಿವಾಳ ಸಮುದಾಯಕ್ಕೆ ಸೇರಿರುವ ಗೋಪಿಕೃಷ್ಣ ಟಿಕೆಟ್‌ ಆಕಾಂಕ್ಷಿಗಳಲ್ಲಿ ಪ್ರಬಲರಾಗಿರುವುದರಿಂದ ಯಾವ ಸಮುದಾಯಕ್ಕೆ ಟಿಕೆಟ್‌ ಸಿಗಬಹುದು ಎಂಬ ಕುತೂಹಲ ಸಾರ್ವಜನಿಕರ ಮುಂದಿದೆ.

ಜಾತಿ ಲೆಕ್ಕಾಚಾರ:

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಟಿ. ರಾಜೇಗೌಡ(DT Rajegowda) ಅವರಿಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್‌ ಘೋಷಣೆ ಮಾಡಲಾಗಿದೆ. ಮೂಡಿಗೆರೆ ಮೀಸಲು ಕ್ಷೇತ್ರ ಇಲ್ಲಿ ಜಾತಿ ಲೆಕ್ಕಾಚಾರ ನಡೆಯುವುದಿಲ್ಲ, ಇನ್ನುಳಿದ ಮೂರು ಕ್ಷೇತ್ರಗಳ ಪೈಕಿ, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ವೈಎಸ್‌ವಿ ದತ್ತ ಅವರಿಗೆ ಟಿಕೆಟ್‌ ಸಿಗುತ್ತದೆ. ಇನ್ನುಳಿದ ತರೀಕೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಕುರುಬ ಹಾಗೂ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್‌ ಸಿಗಲಿದೆ. ಹಾಗಾದರೆ ಯಾವ ಜಾತಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್‌ ಎಂಬ ಕುತೂಹಲ ಇತ್ತು.

ಗಣಪತಿ ಕೆರೆ ಮೇಲೆ ಧ್ವಜ ಹಾರಿಸಿದ್ದೇ ಸಾಧನೆ: ಹರತಾಳು ಹಾಲಪ್ಪ ವಿರುದ್ಧ ಕಾಗೋಡು ತಿಮ್ಮಪ್ಪ ಕಿಡಿ

ಆದರೆ, ಕಡೂರು ಕ್ಷೇತ್ರದಲ್ಲಿ ವೈಎಸ್‌ವಿ ದತ್ತಾ ಅವರ ಬದಲಿಗೆ ಕೆ.ಎಸ್‌.ಆನಂದ್‌ ಅವರಿಗೆ ಟಿಕೆಟ್‌ ನೀಡಿದ್ದರಿಂದ ಹಿಂದಿದ್ದ ಲೆಕ್ಕಾಚಾರದಲ್ಲಿ ಸಂಪೂಂರ್‍ ವ್ಯತ್ಯಾಸವಾಗಿದೆ. ಕಡೂರು ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್‌ ನೀಡಿದ್ದರಿಂದ ಇನ್ನುಳಿದ ತರೀಕೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಯಾವುದೋ ಒಂದು ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಆದ್ಯತೆ ಸಿಗುವುದು ಅನುಮಾನ.

click me!