ಗೋ ಹತ್ಯೆ ಜಾರಿ ಮಾಡ್ತಿವಿ ಅನ್ನೋ ಪಕ್ಷ ಅಧಿಕಾರಕ್ಕೆ ಬರಬೇಕಾ?: ಈಶ್ವರಪ್ಪ

By Kannadaprabha NewsFirst Published Apr 27, 2023, 1:39 PM IST
Highlights

ಗೋವನ್ನು ನಾವೆಲ್ಲ ರೈತರು ತಾಯಿ ಗೋಮಾತೆ ಎಂದು ಪೂಜೆ ಮಾಡ್ತಿವಿ. ಆದ್ರೆ ಅದೇ ಗೋವನ್ನು ಕದ್ದು ಕತ್ತರಿಸುತ್ತಾರೆ. ಅದನ್ನು ಖಂಡಿಸಿ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಮಾಡಿದೆ. ಬಿಜೆಪಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವುದನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರದ್ದು ಮಾಡುತ್ತೇವೆ ಎನ್ನುತ್ತಿದ್ದಾರೆ. ಇಂತಹ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕಾ?: ಕೆ.ಎಸ್‌.ಈಶ್ವರಪ್ಪ 

ಬೀಳಗಿ(ಏ.27): ಕಳೆದ ಚುನಾವಣೆಯಲ್ಲಿ ಬೀಳಗಿ ಕ್ಷೇತ್ರದಲ್ಲಿ ನಿರಾಣಿ ಅವರು ಸುಮಾರು ಮೂರುವರೆ ಸಾವಿರ ಮತಗಳಿಂದ ಗೆದ್ದಿದ್ದಾರೆ. ಆದರೆ ಈ ಬಾರಿ ಸುಮಾರು 35 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಸುನಗ ಗ್ರಾಮದಲ್ಲಿ ಬಿಜೆಪಿ ಬೀಳಗಿ ಮಂಡಲ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗೋವನ್ನು ನಾವೆಲ್ಲ ರೈತರು ತಾಯಿ ಗೋಮಾತೆ ಎಂದು ಪೂಜೆ ಮಾಡ್ತಿವಿ. ಆದ್ರೆ ಅದೇ ಗೋವನ್ನು ಕದ್ದು ಕತ್ತರಿಸುತ್ತಾರೆ. ಅದನ್ನು ಖಂಡಿಸಿ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಮಾಡಿದೆ. ಬಿಜೆಪಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವುದನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರದ್ದು ಮಾಡುತ್ತೇವೆ ಎನ್ನುತ್ತಿದ್ದಾರೆ. ಇಂತಹ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕಾ? ಎಂದ ಅವರು ಅದಕ್ಕೆ ಇಂತಹ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು ಅಂದರೆ ತಾವೆಲ್ಲ ಮುರುಗೇಶ ನಿರಾಣಿಯವರಿಗೆ ಮತ ಹಾಕಬೇಕು, ಹಾಕಿಸಬೇಕು. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

Latest Videos

ರಾಹುಲ್‌ ಕುಚೇಷ್ಟೆಗಳೇ ಬಿಜೆಪಿಗೆ ಪ್ಲಸ್‌ ಪಾಯಿಂಟ್‌: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌

ದೇಶದಲ್ಲಿ ನರೇಂದ್ರ ಮೋದಿಜಿ ಅವರು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟುಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕೆ ಜಗತ್ತು ಭಾರತದತ್ತ ಮುಖಮಾಡಿ ನಿಂತಿದೆ. ಅಲ್ಲದೇ ಭಾರತ ದೇಶ ವಿಶ್ವ ಗುರುವಾಗಿ ಹೊರ ಹೊಮ್ಮುತ್ತಿದೆ. ಅದಕ್ಕಾಗಿ ರಾಜ್ಯದ ಉನ್ನತ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಸವರಾಜ ಕೊಣ್ಣೂರ, ವಿಪ ಸದಸ್ಯ ಪಿ.ಎಚ್‌. ಪೂಜಾರ, ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ವಿಪ ಸದಸ್ಯ ಹೆಚ್‌.ಆರ್‌.ನಿರಾಣಿ, ಮಂಡಲ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ವಿಠಲ ಬಾಗೇವಾಡಿ, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಜಂಗನಿ, ಮಲ್ಲಪ್ಪ ಶಂಭೋಜಿ, ಮಲ್ಲಿಕಾರ್ಜುನ ಅಂಗಡಿ, ಸುವರ್ಣಾ ನಾಗರಾಳ, ಕೆಂಪಯ್ಯ ವಿರಕ್ತಿಮಠ, ದ್ರಾಕ್ಷಾಯಿಣಿ ಜಂಬಗಿ ಮತ್ತಿತರರು ಇದ್ದರು.

click me!