ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು ಮತಗಟ್ಟೆಯ ಬಳಿ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ, ಎಡವಟ್ಟು ಮಾಡಿಕೊಂಡಿದ್ದಾರೆ.
ಬೆಂಗಳೂರು (ಮೇ 10): ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು ಮತಗಟ್ಟೆಯ ಬಳಿ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ, ಎಡವಟ್ಟು ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ 1000 ಕೋಟಿ ರೂ.ಗಿಂತ ಅಧಿಕ ಆಸ್ತಿಯನ್ನು ಹೊಂದಿದ ಕೆಲವೇ ಚುನಾವಣಾ ಅಭ್ಯರ್ಥಿಗಳ ಪೈಕಿ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಅಭ್ಯರ್ಥಿ ಕೆಜಿಎಫ್ ಬಾಬು ಕೂಡ ಒಬ್ಬರು. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಟಾಂಗ್ ಕೊಡಲು ಸಿದ್ಧವಾಗಿದ್ದರು. ಆದರೆ, ಈಗ ಚುನಾವಣಾ ಅಧಿಕಾರಿಗಳು ಮತಗಟ್ಟೆಯ ಹೊರಭಾಗದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ, ಹೆಸರು, ಚಿಹ್ನೆಯನ್ನು ಗೋಡೆಯ ಮೇಲೆ ಅಂಟಿಸಲಾಗಿರುತ್ತದೆ. ಆದರೆ, ಬ್ಯಾಲೆಟ್ ಪೇಪರ್‌ನಲ್ಲಿ ಇರುವ ಕ್ರಮಸಂಖ್ಯೆಗೂ ಹಾಗೂ ಗೋಡೆಯ ಮೇಲೆ ಅಂಟಿಸಲಾದ ಕ್ರಮಸಖ್ಯೆಯಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ.
Karnataka Elections 2023 LIVE: ಮತದಾನ ಮುಕ್ತಾಯ. ಸರ್ಕಾರ ಯಾರದ್ದು, ಕಾಯಬೇಕು 13ರ ತನಕ...
ಚುನಾವಣಾ ಆಯೋಗದ ಎಡವಟ್ಟು: ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯದ ವಿವಿಧೆಡೆ ಹಲವು ಎಡವಟ್ಟುಗಳು ಆಗಿವೆ. ಆದರೆ, ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಚುನಾವಣಾ ಆಯೋಗ ಯಡವಟ್ಟು..? ಮಾಡಿಕೊಂಡಿದೆ. ಇದರಿಂದಾಗಿ ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗವು ಸ್ಪಷ್ಟನೆ ಕೊಡಲಾಗದೇ ತಪ್ಪು ಒಪ್ಪಿಕೊಂಡಿದೆ.
ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆ 12 ಎಮದು ಬ್ಯಾಲೆಟ್ ಪೇಪರ್‌ನಲ್ಲಿದೆ. ಆದರೆ, ಗೋಡೆಯ ಮೇಲೆ ಇರುವ ಮಾಹಿತಿ ಫಲಕದಲ್ಲಿ ಕೆಜಿಎಫ್ ಬಾಬು ಕ್ರಮಸರ್ಖಯೆ 13 ಎಂದು ತಪ್ಪಾಗಿ ದಾಖಲು ಮಾಡಲಾಗಿದೆ. ಆದರೆ, ಚುನಾವಣಾ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಕ್ರಮಸಂಖ್ಯೆ 12 ಗ್ಯಾಸ್ ಸಿಲಿಂಡರ್ ಗುರುತಿಗೆ ಮತಹಾಕಿ ಎಂದು ಪ್ರಚಾರ ಮಾಡಿಕೊಂಡು ಬರಲಾಗಿದೆ. ಆದರೆ, ಈಗ ಚುನಾವಣಾ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗ ಮತಗಳು ಬೇರಿಬ್ಬರಿಗೆ ಹಾಕುತ್ತಿದ್ದಾರೆ ಎಂದು ಕೆಜಿಎಫ್ ಬಾಬು ಬೆಂಬಲಿಗರು ಚುನಾವಣಾ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದ್ಮನಾಭನಗರ ಓಟಿಂಗ್ ಬೂತ್ ಎದುರಲ್ಲಿ ಮಾರಾಮಾರಿ: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪಾಪಯ್ಯ ಗಾರ್ಡನ್ 28 ಹಾಗೂ 29 ಮತಗಟ್ಟೆ (Polling Booth) ಬಳಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಮತಗಟ್ಟೆಯ ಬಳಿ ಬೀಡುಬಿಟ್ಟಿದ್ದ ಕೆಲವು ದುಷ್ಕರ್ಮಿಗಳು ಗಾಂಜಾ ಸೇವನೆಯ ಮತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮತದಾನ ಮಾಡಲು ಬಂದವರು, ಮತಗಟ್ಟೆಯಲ್ಲೇ ಸಾವು! ಇದೆಂಥಾ ದುರ್ಘಟನೆ
ಸ್ಥಳೀಯ ನಾಗರೀಕರಿಂದ ಪೊಲೀಸ್ ಠಾಣೆಗೆ ದೂರು: ಈ ವೇಳೆ ಮಹಿಳೆಯರ ಮೇಲೂ ಪುಂಡರ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕಬ್ಬಾಳ್ ಉಮೇಶ್ ಬಿಜೆಪಿಯವರು ಹುಡುಗರನ್ನ ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮೀನಮ್ಮ ಮತ್ತು ಚನ್ನಪ್ಪ ಎಂಬುವವರಿಂದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರಿಂದ ದೂರುಗಳನ್ನು ಪಡೆದು FIR ದಾಖಲಿಸಿದ ಪೊಲೀಸರು, ವಿಡಿಯೋ ಫೋಟೇಜ್ ಪಡೆದು ತನಿಖೆ ನಡೆಸುತ್ತಿದ್ದಾರೆ.