
ಬೆಂಗಳೂರು, (ಜ.22): ಕರ್ನಾಟಕದ 9 ಜಿಲ್ಲೆಗಳ ಗ್ರಾಮ ಮಂಚಾಯಿತಿಗಳ ಉಪಚುನಾವಣೆಗೆ ರಾಜ್ಯ ಚುನಾವಣೆಗೆ ಆಯೋಗ ದಿನಾಂಕ ಪ್ರಕಟಿಸಿದೆ.
ಒಟ್ಟು 9 ಜಿಲ್ಲೆ 41 ಗ್ರಾ. ಪಂ. 173 ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಇಂದು (ಬುಧವಾರ) ರಾಜ್ಯ ಚುನಾವಣೆ ಆಯೋಗ ಆದೇಶ ಹೊರಡಿಸಿದೆ.
ಏಪ್ರಿಲ್ 5, 9ಕ್ಕೆ ಗ್ರಾಪಂ ಚುನಾವಣೆ: ಇದು #FakeNews
28 -01- 2020 ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದ್ದು, ಫೆಬ್ರವರಿ 9 ರಂದು ಉಪಚುನಾವಣೆ ನಡೆಯಲಿದೆ. ಇನ್ನು 11-02-2020 ರಂದು ಮತ ಏಣಿಕೆ ನಡೆಯಲಿದೆ ಎಂದು ಚುನಾವಣೆ ಆಯೋಗ ಆದೇಶದಲ್ಲಿ ತಿಳಿಸಿದೆ.
ವಿವಿಧ ಕಾರಣಗಳಿಂದ ಖಾಲಿಯಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಸಲು ಆಯೋಗ ದಿನಾಂಕ ನಿಗದಿ ಮಾಡಿದೆ. ಹಾಗಾದ್ರೆ, ಯಾವ-ಯಾವ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯಲಿದೆ ಎನ್ನುವ ಮಾಹಿತಿ ಇಂತಿದೆ.
1) ಬೆಂಗಳೂರು ನಗರ - 8 ಕ್ಷೇತ್ರ - 9 ಸ್ಥಾನ ಗಳಿಗೆ ಚುನಾವಣೆ
2) ಬೆಂಗಳೂರು ಗ್ರಾಮಾಂತರ - 5 ಕ್ಷೇತ್ರ - 6 ಸ್ಥಾನಗಳಿಗ ಚುನಾವಣೆ
3) ಚಿಕ್ಕಬಳ್ಳಾಪುರ - 9 ಕ್ಷೇತ್ರ - 9 ಸ್ಥಾನಗಳಿಗೆ ಚುನಾವಣೆ
4) ಮೈಸೂರು - 24 ಕ್ಷೇತ್ರ - 25 ಸ್ಥಾನಗಳಿಗೆ ಚುನಾವಣೆ
5) ಮಂಡ್ಯ - 8 ಕ್ಷೇತ್ರ - 8 ಸ್ಥಾನಗಳಿಗೆ ಚುನಾವಣೆ
6) ಬೆಳಗಾವಿ - 31 ಕ್ಷೇತ್ರ - 43 ,ಸ್ಥಾನ
7) ಹಾವೇರಿ - 7 ಕ್ಷೇತ್ರ - 7 ಸ್ಥಾನ
8 ) ಉತ್ತರ ಕನ್ನಡ - 33 ಕ್ಷೇತ್ರ - 43 ಸ್ಥಾನಗಳಿಗೆ ಚುನಾವಣೆ
9 ) ಬಳ್ಳಾರಿ - 16 ಕ್ಷೇತ್ರ, 23 ಸ್ಥಾನಗಳಿಗೆ ಚುನಾವಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.