ಹಿಂದೂ ಅಸ್ಮಿತೆಗೆ ಕಾಂಗ್ರೆಸ್‌ ಏಟು: ಸಿಎಂ ಯೋಗಿ ಆದಿತ್ಯನಾಥ್‌ ಕಿಡಿ

By Kannadaprabha News  |  First Published May 7, 2023, 7:42 AM IST

ಹನುಮಂತನ ನಾಡಾದ ಕರ್ನಾಟಕದಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳುವ ಮೂಲಕ ಹಿಂದೂ ಅಸ್ಮಿತೆ ಮೇಲೆ ಕಾಂಗ್ರೆಸ್‌ ಪ್ರಹಾರ ಮಾಡಲು ಹೊರಟಿದೆ. ಹಿಂದೂಗಳು ಇದಕ್ಕೆ ಯಾವತ್ತೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 


ಬೆಂಗಳೂರು (ಮೇ.07): ಹನುಮಂತನ ನಾಡಾದ ಕರ್ನಾಟಕದಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳುವ ಮೂಲಕ ಹಿಂದೂ ಅಸ್ಮಿತೆ ಮೇಲೆ ಕಾಂಗ್ರೆಸ್‌ ಪ್ರಹಾರ ಮಾಡಲು ಹೊರಟಿದೆ. ಹಿಂದೂಗಳು ಇದಕ್ಕೆ ಯಾವತ್ತೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 

ಚಿಕ್ಕಮಗಳೂರಿನ ಕೊಪ್ಪ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸಿ ಶನಿವಾರ ಮಾತನಾಡಿದ ಅವರು, ಬಜರಂಗದಳ ನಿಷೇಧಿಸುವುದಾಗಿ ಹೇಳುತ್ತಿರುವ ಮತ್ತು ಶ್ರೀರಾಮಚಂದ್ರನ ಅಸ್ತಿತ್ವವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ ಪಕ್ಷ ಜನರ ನಂಬಿಕೆ ಮೇಲೆ ಪ್ರಹಾರ ಮಾಡುತ್ತಿದೆ. ರಾಮ ಕಾಲ್ಪನಿಕ ವ್ಯಕ್ತಿ ಎಂದು ಕಾಂಗ್ರೆಸ್‌ ಹೇಳಿಕೊಂಡು ಬರುತ್ತಿದೆ ಎಂದು ಕಿಡಿಕಾರಿದರು.

Tap to resize

Latest Videos

ಜೆಡಿಎಸ್‌ನಿಂದ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ: ಒಟ್ಟು 16 ಅಂಶಗಳ ಪ್ರಣಾಳಿಕೆ ಬಿಡುಗಡೆ

ಹನುಮಂತನಿಗೆ ಯಾಕೆ ವಿರೋಧ?: ಕಾಂಗ್ರೆಸ್‌ ಹನುಮಾನ್‌ರನ್ನು ವಿರೋಧಿಸುತ್ತಿದೆ. ಯಾಕೆಂದರೆ ಹನುಮಾನ್‌ ಇರುವಲ್ಲಿ ಭೂತ, ಪ್ರೇತಗಳು ನಾಶವಾಗುತ್ತವೆ. ಬಜರಂಗದಳ ನಿಷೇಧ ಪಿಎಫ್‌ಐ, ಐಸಿಸ್‌ಗೆ ಮುಕ್ತ ಆಹ್ವಾನ ನೀಡಿದಂತೆ. ಬಜರಂಗದಳ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಇದನ್ನು ನಿಷೇಧಿಸುವುದಾಗಿ ಹೇಳುತ್ತಿರುವ ಕಾಂಗ್ರೆಸ್‌ ಅವಸಾನದತ್ತ ಸಾಗುತ್ತಿದೆ ಎಂದರು.

ರಾಮಭಕ್ತ ಬಜರಂಗ್‌ ಬಲಿಯು ರಾವಣನ ಲಂಕೆಯನ್ನೇ ಸುಟ್ಟು ಅಧರ್ಮವನ್ನು ಸಮಾಪ್ತಿ ಮಾಡಿದಂತೆ ಕರ್ನಾಟಕದ ರಾಷ್ಟ್ರಭಕ್ತರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅನ್ನು ಸೋಲಿಸಿ, ಪಿಎಫ್‌ಐಗೆ ಬೆಂಬಲ ನೀಡುವಂಥ ಅಧರ್ಮದ ಕೆಲಸಗಳನ್ನು ಸಮಾಪ್ತಿ ಮಾಡಬೇಕು. ಕರ್ನಾಟಕದ ಜನತೆ ಯಾವತ್ತೂ ರಾಷ್ಟ್ರವಾದವನ್ನು ಬೆಂಬಲಿಸಿದ್ದೀರಿ. ಈ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರಾಷ್ಟ್ರ ವಾದದ ಜ್ವಾಲೆ ಪ್ರತಿಮನೆಗೂ ತಲುಪುವಂತೆ ಮಾಡಬೇಕು ಎಂದು ಹೇಳಿದರು.

ಭಾರತದ ಅಭಿವೃದ್ಧಿ ಸಹಿಸದವರು ಮೋದಿ ಅವರನ್ನು ವಿರೋಧಿಸುತ್ತಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲೇ ಪ್ರಬಲ ರಾಷ್ಟ್ರವಾಗಿ ಮೂಡಿ ಬಂದಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ ಕಾಂಗ್ರೆಸ್‌, ಜೆಡಿಎಸ್‌ ಅಭಿವೃದ್ಧಿಗೆ ತಡೆ ಒಡ್ಡುತ್ತಿವೆ. ಟೀಂ ಇಂಡಿಯಾದ ಲೀಡರ್‌ ರೀತಿಯಲ್ಲಿ ಮೋದಿ ಇದ್ದು, ರಾಜ್ಯದ ಜನತೆ ಅವರ ಜೊತೆ ನಿಲ್ಲಬೇಕಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರಗಳ ಅವಧಿಯಲ್ಲಿ ಪಿಎಫ್‌ಐ ಸಂಘಟನೆಗಳನ್ನು ಪ್ರೋತ್ಸಾಹಿಸಲಾಯಿತು. ಆದರೆ, ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉತ್ತರ ಪ್ರದೇಶದಂತೆ ಇಲ್ಲೂ ಪಿಎಫ್‌ಐ ನಿಷೇಧ ಮಾಡುವ ಮೂಲಕ ಅವರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಬೆಂಗ್ಳೂರಲ್ಲಿ 26 ಕಿಮೀ ರೋಡ್‌ ಶೋ: ರಾಜ್ಯದಲ್ಲೇ ಮೊದಲು ಮೋದಿ ದಾಖಲೆ ಶೋ!

3 ರೋಡ್‌ ಶೋ: ಯೋಗಿ ಆದಿತ್ಯನಾಥ್‌ ಅವರು ಶನಿವಾರ ಪುತ್ತೂರು, ಬಂಟ್ವಾಳ ಮತ್ತು ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್‌ ಶೋ ನಡೆಸಿದರು. ಪುತ್ತೂರಿನಲ್ಲಿ ಜೈಕಾರ, ನಾಸಿಕ್‌ ಬ್ಯಾಂಡ್‌, ಚೆಂಡೆ ವಾದನ, ಕೀಲುಗೊಂಬೆಯ ಮೆರವಣಿಗೆಯ ನಡುವೆ ಭರ್ಜರಿ ರೋಡ್‌ ಶೋ ನಡೆಸಲಾಯಿತು. ಮೂರು ಕಡೆ ಯೋಗಿ ನೋಡಲು ಅಪಾರ ಜನಸ್ತೋಮ ಸೇರಿತ್ತು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!