ಈ ಬಾರಿ ನಾನೇ ಸಿಎಂ: ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ

Published : May 07, 2023, 05:47 AM IST
ಈ ಬಾರಿ ನಾನೇ ಸಿಎಂ: ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ

ಸಾರಾಂಶ

ಪ್ರಸಕ್ತ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವುದು ಜೆಡಿಎಸ್‌ ಗುರಿ, ಕೆಲವು ಮಾಧ್ಯಮಗಳಲ್ಲಿ ಸುಳ್ಳು ಸಮೀಕ್ಷೆಗಳನ್ನು ಭಿತ್ತರಿಸುತ್ತಿದ್ದಾರೆ. .20 ಕೋಟಿ ನಾವು ಕೊಟ್ಟರೆ ಜೆಡಿಎಸ್‌ 128 ಸೀಟು ಬರುತ್ತೆ ಅಂತಾ ಹೇಳ್ತಾರೆ, ಅದನ್ನೆಲ್ಲ ನಂಬಬೇಡಿ ಎಂದು ಮತದಾನ ಪೂರ್ವ ಸಮೀಕ್ಷೆಗಳ ಬಗ್ಗೆ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

ಪೀಣ್ಯ ದಾಸರಹಳ್ಳಿ (ಮೇ.07): ಪ್ರಸಕ್ತ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವುದು ಜೆಡಿಎಸ್‌ ಗುರಿ, ಕೆಲವು ಮಾಧ್ಯಮಗಳಲ್ಲಿ ಸುಳ್ಳು ಸಮೀಕ್ಷೆಗಳನ್ನು ಭಿತ್ತರಿಸುತ್ತಿದ್ದಾರೆ. .20 ಕೋಟಿ ನಾವು ಕೊಟ್ಟರೆ ಜೆಡಿಎಸ್‌ 128 ಸೀಟು ಬರುತ್ತೆ ಅಂತಾ ಹೇಳ್ತಾರೆ, ಅದನ್ನೆಲ್ಲ ನಂಬಬೇಡಿ ಎಂದು ಮತದಾನ ಪೂರ್ವ ಸಮೀಕ್ಷೆಗಳ ಬಗ್ಗೆ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯ ಪೀಣ್ಯ 2ನೇ ಹಂತ ರಾಜಗೋಪಾಲ ನಗರ, ಸುಂಕದಕಟ್ಟೆಮೂಲಕ ರೋಡ್‌ ಶೋ ಹಾಗೂ ಬೈಕ್‌ ರ್ಯಾಲಿ ಮೂಲಕ ಮಾತಾಯಾಚನೆ ಮಾಡಿದರು. ಬಳಿಕ ಮಾತನಾಡಿದ ಕುಮಾರಸ್ವಾಮಿ, ಈ ಬಾರಿ ಕಾಂಗ್ರೆಸ್‌, ಬಿಜೆಪಿ ಏನೇ ಕುತಂತ್ರ ಮಾಡಿದರೂ ಕುಮಾರಸ್ವಾಮಿ ಸಿಎಂ ಆಗೋದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಎರಡು ದಿನದ ಹಿಂದೆ ಕಾಂಗ್ರೆಸ್‌ 116 ಸೀಟು ಗೆಲ್ಲುತ್ತೆ ಅಂತಾ ಹೇಳಿದ್ದರು, ನಿನ್ನೆ ಆಗಲೇ ಬಿಜೆಪಿ 116 ಸೀಟು ಗೆಲ್ಲುತ್ತೆ, ಜೆಡಿಎಸ್‌ 22ರಿಂದ 28 ಅಂತಾ ಭಿತ್ತರಿಸುತ್ತಿದ್ದಾರೆ. ನಾವು 20 ಕೋಟಿ ಕೊಟ್ಟರೆ ಜೆಡಿಎಸ್‌ 128 ಸೀಟು ಗೆಲ್ಲುತ್ತೆ ಅಂತಾ ಹೇಳ್ತಾರೆ. ಇದನ್ನೆಲ್ಲ ನಂಬಲು ಹೋಗಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಉತ್ತರ ಕರ್ನಾಟಕದಲ್ಲೇ ಈ ಬಾರಿ ಜೆಡಿಎಸ್‌ 30ರಿಂದ 40 ಸ್ಥಾನಗಳನ್ನು ಗೆಲ್ಲಲಿದೆ. ಇನ್ನು ಜೆಡಿಎಸ್‌ ಭದ್ರಕೋಟೆಗಳಾದ ಹಾಸನ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಭರ್ಜರಿ ಜಯ ಸಾಧಿಸುತ್ತೇವೆ. ನನಗೆ ಆರೋಗ್ಯ ತೊಂದರೆ ಇದ್ದರೂ ರಾಜ್ಯದ ಉದ್ದಗಲಕ್ಕೂ ಸುತ್ತಿದ್ದೇನೆ.

ಬೆಂಗ್ಳೂರಲ್ಲಿ 26 ಕಿಮೀ ರೋಡ್‌ ಶೋ: ರಾಜ್ಯದಲ್ಲೇ ಮೊದಲು ಮೋದಿ ದಾಖಲೆ ಶೋ!

ರಾಜ್ಯದ ಜನತೆಗೆ ನೆಮ್ಮದಿಯ ಜೀವನ ತರಬೇಕು ಎಂಬುದು ನನ್ನ ಜೀವನದ ಕೊನೆಯ ಆಸೆ. ನಮ್ಮ ಜನ ದುಡ್ಡಿಗೆ ಮರುಳಾಗುವುದಿಲ್ಲ, ನಾಡು, ನುಡಿ ರಕ್ಷಣೆ ನಿಟ್ಟಿನಲ್ಲಿ ನಾವು ಹಮ್ಮಿಕೊಂಡಿರುವ ಪಂಚರತ್ನ ಯೋಜನೆಗಳನ್ನು ಬೆಂಬಲಿಸಿ ರಾಜ್ಯದ ಜನತೆ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರು ಕಾಂಗ್ರೆಸ್‌ ವಿರುದ್ಧ ಶೇ.85 ಭ್ರಷ್ಟಾಚಾರ, ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಶೇ.40 ಭ್ರಷ್ಟಾಚಾರ ಸರ್ಕಾರ ಎಂದು ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಜೆಡಿಎಸ್‌ ವಿರುದ್ಧ ಆ ರೀತಿಯ ಆರೋಪ ಹೊರಿಸಲು ಸಾಧ್ಯವೇ ಇಲ್ಲ. ಯಾಕಂದರೆ ನಾವು ಭ್ರಷ್ಟಾಚಾರ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ

ನಂತರ ಕುಮಾರಸ್ವಾಮಿ ಅವರು ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿ, ಪೀಣ್ಯ, ಸುಂಕದಕಟ್ಟೆಇತರೆ ಪ್ರದೇಶಗಳಲ್ಲಿ ರಾರ‍ಯಲಿ ನಡೆಸುವ ಮೂಲಕ ಮಂಜುನಾಥ್‌ ಪರ ಮತಯಾಚನೆ ನಡೆಸಿದರು. ಸಾವಿರಾರು ಕಾರ್ಯಕರ್ತರು, ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ