ಇದು ನನ್ನ ಕೊನೆಯ ಚುನಾವಣೆ, ಗೆಲ್ಲಿಸಿ: ಸಚಿವ ಗೋವಿಂದ ಕಾರಜೋಳ

By Kannadaprabha News  |  First Published Apr 15, 2023, 12:30 AM IST

ಬಿಜೆಪಿ ವರಿಷ್ಠರ ಒತ್ತಾಯಕ್ಕೆ ಮಣಿದು 7ನೇ ಬಾರಿ ಚುನಾವಣೆ ಕಣಕ್ಕೆ ಇಳಿದಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಹೆಚ್ಚಿನ ಅಂತರದಿಂದ ಗೆಲವು ಸಾಧಿಸಲು ಮುಖಂಡರು, ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.


ಲೋಕಾಪುರ (ಏ.15): ಬಿಜೆಪಿ ವರಿಷ್ಠರ ಒತ್ತಾಯಕ್ಕೆ ಮಣಿದು 7ನೇ ಬಾರಿ ಚುನಾವಣೆ ಕಣಕ್ಕೆ ಇಳಿದಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಹೆಚ್ಚಿನ ಅಂತರದಿಂದ ಗೆಲವು ಸಾಧಿಸಲು ಮುಖಂಡರು, ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು. ಪಟ್ಟಣದಲ್ಲಿ ಮುಧೋಳ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಪ್ರಥಮ ಬಾರಿಗೆ ಗುರುವಾರ ಲೋಕಾಪುರಕ್ಕೆ ಆಗಮಿಸಿ ಲೋಕೇಶ್ವರ, ದುರ್ಗಾದೇವಿ ದೇವಸ್ಥಾನದ, ಜ್ಞಾನೇಶ್ವರ ಮಠ, ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಚುನಾವಣೆಯ ಕರ್ನಾಟದಲ್ಲಿ ಸ್ವಾತಂತ್ರ್ಯ ನಂತರ ಐತಿಹಾಸಿಕ ಚುನಾವಣೆಯಾಗಿದೆ. ಅನೇಕ ಸಮುದಾಯಗಳು ಮೀಸಲಾತಿಬೇಕೆಂದು ಮತ್ತು ಹೆಚ್ಚಿಸಬೇಕೆಂದು ಹೋರಾಟ ಮಾಡುತ್ತ ಬಂದಿದ್ದವು. ನಮ್ಮ ಎಲ್ಲ ಜನಾಂಗಕ್ಕೂ ಮೀಸಲಾತಿ ಸಿಗಬೇಕು ಎಂದು ಒತ್ತಾಯಿಸಿದ್ದವು. ಎಸ್ಸಿ, ಎಸ್ಟಿಜನಾಂಗ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಹೋರಾಟ ಮಾಡುತ್ತಿದ್ದರು. ಎಸ್ಟಿಶೇ.3 ರಿಂದ ಶೇ.7ರವರೆಗೆ ಮತ್ತು ಎಸ್ಸಿ ಶೇ.15 ರಿಂದ ಶೇ.17ರ ವರೆಗೆ ಹೆಚ್ಚಿಸಿ ಬಿಜೆಪಿ ಸರ್ಕಾರ ಒಂದು ಐತಿಹಾಸಿಕ ನಿರ್ಣಯ ಮಾಡಿದ್ದೇವೆ ಎಂದು ತಿಳಿಸಿದರು. ಎಸ್ಸಿಯಲ್ಲಿ ಬರುವಂತಹ 101 ಜಾತಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಒಳ ಮೀಸಲಾತಿ ಮರುಹಂಚಿಕೆ ಮಾಡಿದ್ದೇವೆ. 

Tap to resize

Latest Videos

undefined

ಕರ್ನಾಟಕದ ಮುಂದಿನ ಸಿಎಂ ಎಚ್‌.ಡಿ.ಕುಮಾರಸ್ವಾಮಿ: ಆರ್‌.ಉಗ್ರೇಶ್‌

ಇದರಿಂದ ಭಾರತೀಯ ಜನತಾ ಪಕ್ಷದ ಕಡೆಗೆ ಹೆಚ್ಚಿನ ಮತದಾರ ಒಲವು ಹೊಂದುತ್ತಿದ್ದಾರೆ. ಮೇ.15 ನಂತರ ಕರ್ನಾಟಕದಲ್ಲಿ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಡಬಲ್‌ ಎಂಜಿನ್‌ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ರಾಜಕೀಯದಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಮುಧೋಳ ತಾಲೂಕಿನ ಮತದಾರರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರೇ ಕಾರಣ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋುಣಿಯಾಗಿದ್ದೇನೆ. ಮುಧೋಳ ಮತಕ್ಷೇತ್ರದ ಜನತೆಯ ಋುಣತೀರಿಸಲು ನನ್ನಿಂದ ಸಾಧ್ಯವಿಲ್ಲ ಎಂದರು.

ಮೋದಿ ಕಾರ್ಯವೈಖರಿ ಮೆಚ್ಚಿದ ಯುವಜನತೆ: ಅನೇಕ ಯುವಜನಪರ ಯೋಜನೆಗಳನ್ನು ತರುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸುವ ಕೆಲಸವನ್ನು ಮೋದಿ ಅವರು ಮಾಡಿದ್ದಾರೆ. ಯುವಜನತೆ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಮನಸಾರೆ ಮೆಚ್ಚಿದ್ದಾರೆ ಎಂದು ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು. ಅವರು ನಗರದ ಶಿವಾನಂದ ಜಿನ್‌ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ನಗರಮಂಡಲ ವತಿಯಿಂದ ನಡೆದ ಯುವಮಿತ್ರ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ದೇಶದ ಬಗ್ಗೆ ಅಗಾಧ ಕನಸುಗಳನ್ನು ಕಂಡಿದ್ದಾರೆ. 

ಯುವಜನತೆಯನ್ನು ಸದಾ ಹುರುದುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲ ವರ್ಗದ ಯುವಜನೆತಗೂ ಸಹಾಯವಾಗುವಂತಹ ಹತ್ತು ಹಲವಾರು ಯೋಜನೆಗಳನ್ನು ಮೋದಿ ಸರಕಾರ ರೂಪಿಸಿ ಜಾರಿಗೆ ತರುವ ಮೂಲಕ ಯುವಕರ ಮನಸ್ಸನ್ನು ಗೆದ್ದಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರಕಾರ ಯುವ ಜನತೆಗಾಗಿ ಅನೇಕ ಯೋಜನೆಗಳನ್ನು ತರುವ ಮೂಲಕ ಅವರಿಗೆ ಆಶಾಕಿರಣವಾಗಿದ್ದಾರೆ ಎಂದರು.

ನಾನು ನೆಪಮಾತ್ರ, ಪಕ್ಷದ ಕಾರ್ಯಕರ್ತರೆ ದೊಡ್ಡ ಶಕ್ತಿ: ಸಚಿವ ಸೋಮಣ್ಣ

ಸಭೆಯಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ,ಎನ್‌, ಪಾಟೀಲ ಮಾತನಾಡಿದರು. ನಗರಮಂಡಲ ಅಧ್ಯಕ್ಷ ಸದಾನಂದ ನಾರಾ,ಬಿಜೆಪಿ ಉಪಾಧ್ಯಕ್ಷ ರಾಜು ರೇವಣಕರ,ಬಿಟಿಡಿಎ ಸದಸ್ಯ ಶಿವಾನಂದ ಟವಳಿ,ಪ್ರಭು ಹಡಗಲಿ,ಡಾ.ನವೀನ ಚರಂತಿಮಠ,ಮಹಾಂತೇಶ ಶೆಟ್ಟರ,ಉಮೇಶ ಹಂಚಿನಾಳ.ಬಸವರಾಜ ಹುನಗುಂದ ಸೇರಿದಂತೆ ಸಭೆಯಲ್ಲಿ ನವನಗರ ವಿದ್ಯಾಗಿರಿ,ಬಾಗಲಕೋಟೆಯ 35 ವಾರ್ಡಿನ ಎಲ್ಲ ಯುವಕರು ಬಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!