Kodagu: ಚುನಾವಣಾ ನೀತಿ ಸಂಹಿತೆಗೆ ಮದುವೆ ಮನೆಯಲ್ಲಿ ಇಳಿದ ಎಣ್ಣೆ ಕಿಕ್!

By Govindaraj S  |  First Published Apr 14, 2023, 11:59 PM IST

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಿಕ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ, ಅದೇ ಚುನಾವಣೆಯ ಪರಿಣಾಮವಾಗಿ ಕೊಡಗಿನ ಮದುವೆಗಳಲ್ಲಿ ಎಣ್ಣೆ ಕಿಕ್ ಇಲ್ಲದಂತೆ ಆಗಿದೆ. ಅರೆ ಇದೇನಿದು ಚುನಾವಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಣ್ಣೆ ಕಿಕ್ ಜೋರಾಗಿರಬೇಕು. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಏ.14): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಿಕ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ, ಅದೇ ಚುನಾವಣೆಯ ಪರಿಣಾಮವಾಗಿ ಕೊಡಗಿನ ಮದುವೆಗಳಲ್ಲಿ ಎಣ್ಣೆ ಕಿಕ್ ಇಲ್ಲದಂತೆ ಆಗಿದೆ. ಅರೆ ಇದೇನಿದು ಚುನಾವಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಣ್ಣೆ ಕಿಕ್ ಜೋರಾಗಿರಬೇಕು. ಆದರೆ ಕೊಡಗಿನಲ್ಲಿ ಏಕೆ ಎಣ್ಣೆ ಕಿಕ್ ಇಲ್ಲದಂತೆ ಆಗುತ್ತಿದೆ. ಎಲ್ಲಾ ಉಲ್ಟಾಪಲ್ಟಾ ಆಗುತ್ತಿದೆಯಲ್ಲಾ ಎಂದು ಯೋಚಿಸ್ತಿದ್ದೀರಾ.? ಆದರೆ ಇದು ಸತ್ಯ ಸಂಗತಿ. ಚುನಾವಣಾ ನೀತಿ ಸಂಹಿತೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಇದೀಗ ಮದುವೆಗಳಲ್ಲಿ ಎಣ್ಣೆ ಸೇವನೆಗೆ ಅವಕಾಶ ಇಲ್ಲದಂತಾಗಿದ್ದು, ಆ ಎಫೆಕ್ಟಿಗೆ ಮದುವೆಗಳನ್ನು ಮಾಡುವುದೇ ಕಷ್ಟ ಎನ್ನುವಂತೆ ಆಗಿದೆ. 

Tap to resize

Latest Videos

undefined

ಕೊಡಗಿನಲ್ಲಿ ಮದುವೆಗಳನ್ನು ನೀವು ಸಾಮಾನ್ಯವಾಗಿ ನೋಡಿಯೇ ಇರುತ್ತೀರ, ಮುಕ್ತವಾದ ಬಾರನ್ನೇ ತೆರೆದಿರಲಾಗುತ್ತದೆ. ಮದುವೆ ಸಮಾರಂಭದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ತಮಗೆ ಇಷ್ಟವಾದ ಬ್ರಾಂಡ್ಗಳನ್ನು, ತಮಗೆ ಇಷ್ಟವಾದಷ್ಟು ಪೆಗ್ಗುಗಳನ್ನು ಸವಿದು ಎಂಜಾಯ್ ಮಾಡಬಹುದು. ಮದುವೆ ಅಷ್ಟೇ ಅಲ್ಲ, ಇತರೆ ಕೆಲವು ಸಮಾರಂಭಗಳಲ್ಲೂ ಮುಕ್ತ ಬಾರ್ಗಳು ಇದ್ದೇ ಇರುತ್ತವೆ. ಆದರೆ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಈಗ ಕೊಡಗಿನಲ್ಲಿ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಲ್ಲಿ ಮುಕ್ತ ಬಾರ್ಗಳನ್ನು ತೆರೆಯುವುದಕ್ಕೆ ಅವಕಾಶ ಇಲ್ಲ. ಮುಕ್ತ ಬಾರ್ ತೆರೆಯಲು ಅವಕಾಶ ನೀಡಿದರೆ ಅದನ್ನು ದುರುಪಯೋಗ ಪಡಿಸಿಕೊಂಡು ಮತದಾರರಿಗೆ ಮದ್ಯ ಹಂಚಿಕೆ ಮಾಡುವ ಸಾಧ್ಯತೆ ಇರಬಹುದು ಎಂದು ಚುನಾವಣಾ ಆಯೋಗ ಅದಕ್ಕೆ ಕಡಿವಾಣ ಹಾಕಿದೆ. 

ಈ ಬಾರಿ ಬಿಜೆಪಿ 140 ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು: ಸಚಿವ ಎಸ್‌.ಟಿ.ಸೋಮಶೇಖರ್‌

ಈ ಮೊದಲು ಮದುವೆ ಸೇರಿದಂತೆ ಇತರೆ ಸಮಾರಂಭಗಳಲ್ಲಿ ಮುಕ್ತ ಬಾರ್ ತೆರೆಯುವುದಕ್ಕೆ 11.500 ರೂಪಾಯಿ ಕಟ್ಟಿಸಿಕೊಂಡು ಒಂದು ದಿನದ ಮಟ್ಟಿಗೆ ಬಾರ್ ತೆರೆಯುವುದಕ್ಕೆ ಅವಕಾಶ ನೀಡಲಾಗುತಿತ್ತು. ಆ ಶುಲ್ಕವನ್ನು ಕಟ್ಟಿ ಸಮಾರಂಭಗಳಿಗೆ ಬರುವ ತಮ್ಮ ಎಲ್ಲಾ ಸಂಬಂಧಿಕರಿಗೆ ಪ್ರೀತಿಯಿಂದ ಮದ್ಯದ ವ್ಯವಸ್ಥೆ ಮಾಡುತ್ತಿದ್ದರು. ಇದರಿಂದ ಸಂಬಂಧಿಕರು ಮದುವೆ ಮತ್ತಿತರ ಸಮಾರಂಭಗಳಲ್ಲಿ ತಮಗಿಷ್ಟದ ಮದ್ಯಗಳನ್ನು ಸೇವಿಸಿ ಎಂಜಾಯ್ ಮಾಡುತ್ತಿದ್ದರು.  ಚುನಾವಣಾ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿಯೂ ಚುನಾವಣಾಧಿಕಾರಿಗಳು ಹಿಂದಿನಂತೆ 11.500 ರೂಪಾಯಿ ಸಂದಾಯ ಮಾಡಿ ತಾತ್ಕಾಲಿಕ ಲೈಸೆನ್ಸ್ ಪಡೆದುಕೊಳ್ಳಬಹುದು ಎಂದು ಹೇಳಿದ್ದರು. 

ಆದರೆ ಇದೀಗ ಇದ್ದಕ್ಕಿದ್ದಂತೆ ಅದಕ್ಕೂ ಅವಕಾಶ ಇಲ್ಲ ಎಂದು ಆದೇಶ ಹೊರಡಿಸಿರುವುದು ಮದುವೆ ಮತ್ತಿತರ ಸಮಾರಂಭಗಳನ್ನು ಮಾಡುವುದೇ ತೀರ ಕಷ್ಟದ ಕೆಲಸವಾಗಿ ಹೋಗಿದೆ. ಮದುವೆ ಸಮಾರಂಭಗಳಲ್ಲಿ ಮದ್ಯ ಇಲ್ಲದಿದ್ದರೆ ನೆಂಟರಿಷ್ಟರೂ ಬೇಸರಪಟ್ಟುಕೊಳ್ಳುತ್ತಾರೆ. ಮದುವೆ ಸೇರಿದಂತೆ ಇತರೆ ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡುವುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ನಿಷೇಧ ಮಾಡಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆ ತಂದಂತೆ ಆಗುತ್ತಿದೆ ಎಂದು ಅಣ್ಣಪ್ಪ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಓಪನ್ ಬಾರ್ ತೆರೆಯುವುಕ್ಕೆ ಅವಕಾಶ ಕೊಡಲು 11.500 ರೂಪಾಯಿ ಕಟ್ಟಿಸಿಕೊಳ್ಳುವುದೇ ಸರಿಯಾದ ಕ್ರಮ ಅಲ್ಲ. ಹೀಗಿದ್ದರೂ ಚುನಾವಣೆ ನೆಪದಲ್ಲಿ ಅದನ್ನು ನಿಷೇಧಿಸಿರುವುದು ಇನ್ನೂ ದೊಡ್ಡ ತಪ್ಪು ಎನ್ನುತ್ತಿದ್ದಾರೆ ಮಧು. 

ಬಡವರ ವಿರೋಧಿ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಶಾಸಕ ಯತೀಂದ್ರ

ಬೇರೆ ಜಿಲ್ಲೆಗಳಂತೆ ಕೊಡಗಿನಲ್ಲಿ ಹಣ, ಮದ್ಯ ನೀಡಿ ಚುನಾವಣೆ ನಡೆಸುವುದಿಲ್ಲ. ಹೀಗಾಗಿ ಮದುವೆ ಸಮಾರಂಭಗಳಿಗೆ ನೀಡುವ ಮದ್ಯ ಮಾರಾಟದ ಲೈಸೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಮದ್ಯ ಹಂಚಿಕೆ ಮಾಡಬಹುದು ಎಂದು ಒಂದು ದಿನದ ಲೈಸೆನ್ಸ್ ನೀಡುವುದಕ್ಕೆ ನಿರಾಕರಿಸಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!