ಇದು ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಘೋಷಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಕೆರೂರು (ಏ.07): ಇದು ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಘೋಷಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಚಿವನ್ನಾಗಿ ಮಾಡಿದ ನಿಮ್ಮ ನಿರೀಕ್ಷೆಯನ್ನು ಈಡೇರಿಸಿ ಋುಣ ತೀರಿಸುವ ಕೆಲಸ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೆ ಇರಲು ತೀರ್ಮಾನಿಸಿದ್ದು, ಇದೊಂದು ಚುನಾವಣೆಯಲ್ಲಿ ಮತ್ತೆ ನನಗೆ ಆಶೀರ್ವಾದ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ನಿಮ್ಮ ಮೇಲಿನ ಭರವಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಗಡೆ ಬಂದು ಆರು ತಿಂಗಳು ಅನರ್ಹನಾದೆ. ಬಳಿಕ ನಡೆದ ಚುನಾವಣೆ ಎದುರಿಸಿ ಮತ್ತೆ ಗೆದ್ದು ಬಂದೆ. ಇದರ ಫಲವಾಗಿ ತಾಲೂಕಿನ ಆಗುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ. ಮೂರು ವರ್ಷ ಎರಡು ತಿಂಗಳಲ್ಲಿ ತಾಲೂಕಿನ ಅಭಿವೃದ್ಧಿಗೆ . 1300 ಕೋಟಿ ಅಧಿಕ ಅನುದಾನ ತಂದಿದ್ದೇನೆ ಎಂದರು. ನಟಿ ಶ್ರುತಿ ಮಾತನಾಡಿ, ನಿಮ್ಮ ವಂಶ ಬಿಟ್ಟು ಬೇರೆಯವರು ವಂಶ ಅಭಿವೃದ್ಧಿ ಆಗಬೇಕಾದರೆ ಜೆಡಿಎಸ್‌ಗೆ, ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ಸಿಗೆ ವೋಟು ಹಾಕಿ. ನಿಮ್ಮ ವಂಶದೊಂದಿಗೆ ದೇಶದ ಅಭಿವೃದ್ಧಿ ಆಗಬೇಕಾದರೆ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಬಂದಿದ್ದು ಬೊಮ್ಮಸಂದ್ರದಿಂದ: ಮಾಜಿ ಕಾರು ಚಾಲಕನ ಮೇಲೆ ಶಂಕೆ
ದೇಶದಲ್ಲಿ ನರೇಂದ್ರ ಮೋದಿ ಆಳ್ವಿಕೆಗೆ ಬಂದ ಬಳಿಕ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತ ಅನ್ನ ದೇಶಗಳನ್ನು ಅವಲಂಬಿಸಿದರೆ ಸ್ವಾವಲಂಬಿಯಾಗಲು ಹೊರಟಿದೆ. ದೇಶದ ಅಭಿವೃದ್ಧಿ ಪ್ರಗತಿ ಏರುಗತಿಯಲ್ಲಿ ಸಾಗುತ್ತಿದೆ. ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಆಗುತ್ತಿರುವ ಅಭಿವೃದ್ಧಿ ನಮ್ಮ ಕಣ್ಣು ಮುಂದೇ ಇವೆ. ಇವುಗಳನ್ನು ಗಮನಿಸಿ ಮೋದಿ ಅವರ ಕೈ ಬಲಪಡಿಸಲು ಮತ್ತೊಮ್ಮೆ ಬಿ.ಸಿ. ಪಾಟೀಲ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ನಟಿ ಪ್ರೇಮಾ ಮಾತನಾಡಿ, ಬಿ.ಸಿ. ಪಾಟೀಲ ತಾಲೂಕಿನ ತುಂಬಾ ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳಲ್ಪಟ್ಟೆ. ನಟನಾಗಿದ್ದ ಅವರು ಕಠಿಣ ಶ್ರಮದಿಂದ ರಾಜ್ಯ ಮಂತ್ರಿಯವರೆಗೆ ಬಂದಿದ್ದಾರೆ. ಇನ್ನೂ ಕ್ಷೇತ್ರವು ಅಭಿವೃದ್ಧಿ ಆಗಲು ಅವರನ್ನು ಗೆಲ್ಲಿಸಬೇಕು ಎಂದರು.
ವರುಣದಿಂದ ಸೋಮಣ್ಣ ಕಣಕ್ಕಿಳಿಸಲು ಯತ್ನ: ಸಿದ್ದು ವಿರುದ್ಧ ಸ್ಪರ್ಧಿಸುತ್ತೀರಾ ಎಂದು ಕೇಳಿದ ಬಿಜೆಪಿ
ಸಮಾವೇಶದಲ್ಲಿ ಸೃಷ್ಟಿಪಾಟೀಲ, ವನುಜಾ ಪಾಟೀಲ, ಮಂಜುಳಾ ಬಾಳಿಕಾಯಿ, ಶಿವಕುಮಾರ ತಿಪ್ಪಶೆಟ್ಟಿ, ಎಸ್.ಎಸ್.ಪಾಟೀಲ, ಎನ್.ಎಂ. ಈಟೇರ, ಬಿ.ಎನ್. ಬಣಕಾರ, ಕುಸುಮಾ ಬಣಕಾರ, ರಾಜೇಂದ್ರ ಹಾವೇರಿಯಣ್ಣನವರ, ಭಾರತಿ ಅಳವಂಡಿ, ಗೀತಾ ದಂಡಗಿಹಳ್ಳಿ, ಆನಂದಪ್ಪ ಹಾದಿಮನಿ,ದೇವರಾಜ ನಾಗಣ್ಣನವರ, ರೂಪಾ ಬಾಕಾಳೆ, ರವಿಶಂಕರ ಬಾಳಿಕಾಯಿ, ಮಹಿಳಿಯರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.