ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮುಂದೆ ನಾನು ಸ್ಪರ್ಧಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಹೊಸನಗರ ತಾಲೂಕಿನ ಕೋಡೂರಿನಲ್ಲಿ ಮಾತನಾಡುತ್ತಿದ್ದ ಅವರು, 10 ಬಾರಿ ಒಂದೇ ಪಕ್ಷ, ಒಂದೇ ಚಿಹ್ನೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.
ಶಿವಮೊಗ್ಗ (ಏ.15): ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮುಂದೆ ನಾನು ಸ್ಪರ್ಧಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಹೊಸನಗರ ತಾಲೂಕಿನ ಕೋಡೂರಿನಲ್ಲಿ ಮಾತನಾಡುತ್ತಿದ್ದ ಅವರು, 10 ಬಾರಿ ಒಂದೇ ಪಕ್ಷ, ಒಂದೇ ಚಿಹ್ನೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 4 ಬಾರಿ ಶಾಸಕನಾಗಿದ್ದೇನೆ. ಪಕ್ಷ, ತತ್ವ ಮತ್ತು ಸಿದ್ಧಾಂತಕ್ಕಾಗಿ ರಾಜಕಾರಣ ಮಾಡುವವನು ನಾನು. ಇದು ಕೂಡ ಸಾಧ್ಯವಾಗಿದ್ದು ನನ್ನ ಕಾರ್ಯಕರ್ತರು ಮತ್ತು ಜನರಿಂದ ಎಂದರು. ಟಿಕೆಟ್‌ಗಾಗಿ ಅಥವಾ ಮಂತ್ರಿ ಸ್ಥಾನಕ್ಕಾಗಿ ಎಂದೂ ದೆಹಲಿಗೆ ಹೋದವನು ನಾನಲ್ಲ.
ಇಂಥ ಸಂದರ್ಭ ಕೂಡ ಬರುವುದಿಲ್ಲ ಎಂದುಕೊಂಡಿದ್ದೇನೆ. ಆ ಸಂದರ್ಭ ಬಂದರೆ ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಹೇಳಿದರು. ಒಂದೂ ರಸ್ತೆಯನ್ನು ಮಾಡದವರು ಮತ್ತೆ ಚುನಾವಣೆಗೆ ನಿಂತಿದ್ದಾರೆ. ನಾವಿಬ್ಬರು ಒಟ್ಟಾಗಿದ್ದೇವೆ, ಈ ಬಾರಿ ಗೆಲುವು ನಮ್ಮದೇ ಎನ್ನುತ್ತಿದ್ದಾರೆ. ಒಟ್ಟಾದ್ರೆ ಏನು ಭೂಕಂಪವಾಗುತ್ತಾ? 10 ವರ್ಷಗಳ ಕಾಲ ಬರೀ ಭಾಷಣ, ಧರಣಿ-ಸತ್ಯಾಗ್ರಹ, ಪಾದಯಾತ್ರೆ ಮಾಡಿದ್ದು ಬಿಟ್ಟರೆ ಇನ್ನೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್ ಜಾರಕಿಹೊಳಿ
ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾಪಂ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ. ಮಂಜುನಾಥ್, ಆರ್.ಟಿ. ಗೋಪಾಲ, ತಾಲೂಕು ಬಿಜೆಪಿ ಅಧ್ಯಕ್ಷ ಬಿಳಗೋಡು ಗಣಪತಿ, ಕೋಡೂರು ಗ್ರಾಪಂ ಸದಸ್ಯರು, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಪುಟ್ಟಪ್ಪ, ಅರುಣ್‌ಕುಮಾರ್, ಬಿಜೆಪಿ ಕಾರ್ಯಕರ್ತರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಅಭಿವೃದ್ಧಿ ಕಾರ್ಯದಲ್ಲಿ ಬಿಜೆಪಿ ದಾಖಲೆ: ಕ್ಷೇತ್ರದ ಮತದಾರರ ಕೃಪಾಶೀರ್ವಾದದಿಂದ ದಾಖಲೆ ಮತಗಳ ಅಂತರದಲ್ಲಿ ನಾಲ್ಕನೇ ಬಾರಿಗೆ ದೊರೆತ ಅವಕಾಶದಲ್ಲಿ ಅಭಿವೃದ್ಧಿ ಕಾರ್ಯದಲ್ಲೂ ದಾಖಲೆ ನಿರ್ಮಿಸಿದ್ದೇನೆ. ಈ ಕ್ಷೇತ್ರದ ಜನತೆಯ ಋುಣ ತೀರಿಸಲು ಮುಂದೆಯೂ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಗೃಹ ಸಚಿವ ಜ್ಞಾನೇಂದ್ರ ಹೇಳಿದರು. ಹುಂಚದಕಟ್ಟೆ, ಹಾದಿಗಲ್ಲು ಮತ್ತು ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿ, ಪೇಜ್ ಪ್ರಮುಖರ ಸಭೆಗಳಲ್ಲಿ ಮಾತನಾಡಿ, ಪೊ›ಟೋಕಾಲ್ ಪ್ರಕಾರ ಗೃಹ ಸಚಿವರಿಗೆ ವಿಶೇಷ ಭದ್ರತೆ ಇರುತ್ತದೆ.
ಈ ಬಾರಿ ಬಿಜೆಪಿ 140 ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು: ಸಚಿವ ಎಸ್.ಟಿ.ಸೋಮಶೇಖರ್
ಅಧಿಕಾರದ ಅಹಂಭಾವ ಇರಬಾರದೆನ್ನುವ ಕಾರಣಕ್ಕೆ ಜನರ ಜೊತೆ ಬೆರೆಯುವ ಸಲುವಾಗಿ ಝೀರೋ ಟ್ರಾಫಿಕ್ ಮುಂತಾದ ಸವಲತ್ತುಗಳನ್ನು ನಿರಾಕರಿಸಿದ್ದು, ಮುಂದೆಯೂ ಎಲ್ಲರೊಂದಿಗೆ ಬೆರೆತು ಜನಸೇವೆ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು. ಇದೇ ವೇಳೆ ದೇಮ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಕಿರಣ್, ಸೋಮಶೇಖರ್, ಕಿಶೋರ್, ಶರತ್, ರಾಘು,ದರ್ಶನ್, ಅಭಿಲಾಷ್ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಗೊಂಡರು. ಜಿಪಂ ಮಾಜಿ ಸದಸ್ಯೆ ಅಪೂರ್ವ ಶರಧಿ ಪೂರ್ಣೇಶ್, ತಾಪಂ ಮಾಜಿ ಸದಸ್ಯರಾದ ಟಿ.ಮಂಜುನಾಥ್ ಹಾಗೂ ಹಾದಿಗಲ್ಲು ವೆಂಕಟೇಶ್ ಮುಂತಾದವರು ಇದ್ದರು.