ಚುನಾವಣೆ ಎಷ್ಟು ಇಂಪಾರ್ಟೆಂಟ್ ಅನ್ನೋದಕ್ಕೆ ಇದೇ ಉದಾಹರಣೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಸಲುವಾಗಿ ಶಿರಸಿಯ ಮಹಿಳೆಯೊಬ್ಬರು ದೂರದ ಅಮೆರಿಕಾದಿಂದ ಊರಿಗೆ ಆಗಮಿಸಿದ್ದಾರೆ.
ಕಾರವಾರ (ಮೇ.10): ಚುನಾವಣೆಯಲ್ಲಿ ಪ್ರತಿ ಮತ ಕೂಡ ಬಹಳ ಇಂಪಾರ್ಟೆಂಟ್. ಆದರೆ, ಒಮ್ಮೊಮ್ಮೆ ನಮ್ಮ ಅಕ್ಕಪಕ್ಕದಲ್ಲಿ ಇರುವವರೇ ಮತದಾನ ಮಾಡೋದಿಲ್ಲ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಉತ್ತರ ಕನ್ನಡದ ಶಿರಸಿಯಲ್ಲಿ ಮಹಿಳೆಯೊಬ್ಬರು ದೂರದ ಅಮೆರಿಕಾದಿಂದ ಬಂದು ತಮ್ಮ ಮತ ಚಲಾವಣೆ ಮಾಡಿದ್ದಾರೆ. ಶಿರಸಿ ಬೆಟ್ಟದಕೊಪ್ಪದ ನಿವಾಸಿ ಅಶ್ವಿನಿ ರಾಜಶೇಖರ ಭಟ್ ಬುಧವಾರ ತಮ್ಮ ಮತಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನ ನಡೆಸುವ ಸಲುವಾಗಿಯೇ ಅಶ್ವಿನಿ ರಾಜಶೇಖರ ಭಟ್ ದೂರದ ಅಮೇರಿಕಾದಿಂದ ಆಗಮಿಸಿದ. ಕಾನಗೋಡ್ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿ ಸಂಭ್ರಮಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಮತದಾನ: ಭಟ್ಕಳದಲ್ಲಿ 10.56% ಮತದಾನ, ಕುಮಟಾದಲ್ಲಿ 10% ಮತದಾನ, ಯಲ್ಲಾಪುರದಲ್ಲಿ 8.38% ಮತದಾನ, ಶಿರಸಿಯಲ್ಲಿ 12.01%. ಮತದಾನ, ಹಳಿಯಾಳದಲ್ಲಿ 5.42% ಮತದಾನ, ಕಾರವಾರದಲ್ಲಿ 12% ಮತದಾನ ಆಗಿದೆ.
Karnataka Elections 2023 LIVE: ಪೂಜೆ ಸಲ್ಲಿಸಿ, ಕುಟುಂಬ ಸಮೇತ ಮತದಾನ ಮಾಡಿದ ಬೊಮ್ಮಾಯಿ ...
ಗಿಡ ನೀಡಿ ಅಭಿನಂದಿಸಿದ ಜಿಲ್ಲಾಧಿಕಾರಿ: ಮೊದಲ ಬಾರಿಗೆ ಮತದಾನ ನಡೆಸಿದವರಿಗೆ ಹೂವು- ಹಣ್ಣುಗಳ ಗಿಡಗಳನ್ನು ನೀಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಅಭಿನಂದಿಸಿದ್ದಾರೆ. ಜಿಲ್ಲಾಧಿಕಾರಿ ಜತೆ ಸಿಎಂಸಿ ಕಮಿಷನರ್ ಜುಬಿನ್ ಮಹಾಪಾತ್ರರಿಂದಲೂ ಅಭಿನಂದನೆ. ಮೊದಲ ಬಾರಿಗೆ ಮತ ಹಾಕುವ 50 ಯುವಕ, ಯುವತಿಯರಿಗೆ ಗಿಡಗಳನ್ನು ನೀಡಿ ಅಭಿನಂದನೆ ಮಾಡಿದ್ದಾರೆ. ಕಾರವಾರದ ಸೈಂಟ್ ಮೈಕಲ್ ಮತದಾನ ಕೇಂದ್ರದಲ್ಲಿ ಮೊದಲ ಬಾರಿಗೆ ಮತ ಹಾಕಿದವರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ ಹಾಗೂ ಸಿಎಂಸಿ ಕಮಿಷನರ್ ಅಭಿನಂದಿಸಿದ್ದಾರೆ.