ಜೆಡಿಎಸ್‌ಗೆ ಪೂರ್ಣ ಬಹುಮತಕ್ಕೆ ಪ್ರಾರ್ಥಿಸಿ ನಿಖಿಲ್‌ ಕುಮಾರಸ್ವಾಮಿ ಟೆಂಪಲ್‌ ರನ್‌

Published : Apr 19, 2023, 08:22 AM IST
ಜೆಡಿಎಸ್‌ಗೆ ಪೂರ್ಣ ಬಹುಮತಕ್ಕೆ ಪ್ರಾರ್ಥಿಸಿ ನಿಖಿಲ್‌ ಕುಮಾರಸ್ವಾಮಿ ಟೆಂಪಲ್‌ ರನ್‌

ಸಾರಾಂಶ

ಈ ಬಾರಿ ಸಮ್ಮಿಶ್ರ ಸರ್ಕಾರ ಬೇಡ, ಜನತೆ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ನೀಡಿ ಬಹುಮತ ಬರುವಂತೆ ಮಾಡಲಿ ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಸುಬ್ರಹ್ಮಣ್ಯ (ಏ.19): ಈ ಬಾರಿ ಸಮ್ಮಿಶ್ರ ಸರ್ಕಾರ ಬೇಡ, ಜನತೆ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ನೀಡಿ ಬಹುಮತ ಬರುವಂತೆ ಮಾಡಲಿ ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಂಗಳವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರ ನಾಮಪತ್ರ ಸಲ್ಲಿಸಿದ್ದೇನೆ. ಇಂದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಪಡೆದಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮೂಲಕ ಹಳ್ಳಿ ಹಳ್ಳಿಗೂ ತೆರಳಿ ಮತದಾರರ ಮನದಾಳ ಅರಿತಿದ್ದಾರೆ. ಈ ಬಾರಿ ಸ್ಪಷ್ಟಬಹುಮತದಿಂದ ಜೆಡಿಎಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಭಗವಂತನ ಕೃಪೆ ಮತ್ತು ಜನತೆಯ ಆಶೀರ್ವಾದದಿಂದ ಈ ಬಾರಿ ಜೆಡಿಎಸ್‌ ಏಕಾಂಗಿಯಾಗಿ ಸರ್ಕಾರ ನಡೆಸುವ ವಿಶ್ವಾಸ ನಮ್ಮದಾಗಿದೆ. ಈ ಬಾರಿ 123 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಜೆಡಿಎಸ್‌ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ, ಸುಬ್ರಹ್ಮಣ್ಯ ಘಟಕದ ಅಧ್ಯಕ್ಷ ಕಿಶೋರ್‌ ಅರಂಪಾಡಿ, ಪ್ರಮುಖರಾದ ಕೇನ್ಯ ರವೀಂದ್ರನಾಥ ಶೆಟ್ಟಿ, ಡಾ.ತಿಲಕ್‌ ಎ.ಎ, ದುಗ್ಗಪ್ಪ ಎಚ್‌, ಚಂದ್ರಶೇಖರ್‌ ಚೆನ್ನಕಜೆ, ಜ್ಯೋತಿ ಪ್ರೇಮಾನಂದ, ಎಂ.ಪಿ.ದಿನೇಶ್‌ ಮಾಸ್ಟರ್‌ ಮತ್ತಿತರರಿದ್ದರು.

ಮಂಡ್ಯದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್‌ ಸಿದ್ಧತೆ: ರಮ್ಯಾ ಹೆಸರು ಪರಾಮರ್ಶೆ

ಗೌರವಾರ್ಪಣೆ: ಆರಂಭದಲ್ಲಿ ಕುಕ್ಕೆ ದೇವಳಕ್ಕೆ ಭೇಟಿ ನೀಡಿದ ನಿಖಿಲ್‌ ಕುಮಾರಸ್ವಾಮಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ನಂತರ ದೇವಳದ ಆಡಳಿತ ಕಚೇರಿಗೆ ಆಗಮಿಸಿದ ನಿಖಿಲ್‌ ಅವರಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್‌ ಮತ್ತು ಶೋಭಾ ಗಿರಿಧರ್‌ ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಎಲ್ಲ​ರನ್ನು ಒಗ್ಗೂ​ಡಿ​ಸಿ ಮುನ್ನ​ಡೆ​ಯು​ತ್ತೇನೆ: ರಾಮನಗರ ವಿಧಾನಸಭಾ ಕ್ಷೇತ್ರವೂ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಎಲ್ಲಾ ಸಮುದಾಯದವರು ಒಟ್ಟಿಗೆ ಶಾಂತಿ ಸೌಹಾ​ರ್ದ​ತೆ​ಯಿಂದ ಜೀವನ ಸಾಗಿಸುತ್ತಿದ್ದಾರೆ. ಅದನ್ನು ಕಾಪಾ​ಡಿ​ಕೊಂಡು ಮುನ್ನ​ಡೆ​ಯು​ತ್ತೇನೆ ಎಂದು ರಾಮನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರ ಸ್ವಾಮಿ ತಿಳಿಸಿದರು. ಜೆಡಿಎಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಬಳಿಕ ಸುದ್ದಿ​ಗಾ​ರ​ರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತ ಎಂಬ ಭಾವನೆ ಇಲ್ಲದೆ ಶಾಂತಿಯುವಾಗಿ ಬದುಕು ಕಟ್ಟಿಕೊಂಡಿದ್ದಾರೆ. 

ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕಾಲಘಟ್ಟದಲ್ಲಿ ಯಾವುದೇ ಸಣ್ಣ ಸಂಘರ್ಷಕ್ಕೂ ಎಡೇ ಮಾಡಿಕೊಡದೆ ಸಮಾಜದಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಎಲ್ಲರನ್ನು ಒಗ್ಗೂಡಿಸಿ ಪ್ರೀತಿ ಹಾಗೂ ವಿಶ್ವಾಸದಿಂದ ತೆಗದುಕೊಂಡು ಮುನ್ನಡೆಯುತ್ತೇನೆ ಎಂದರು. ಕುಮಾರಸ್ವಾಮಿ ಅವರಂತೆ ನಾನು ಕೂಡ ಭಾವನಾತ್ಮಕ ಮನುಷ್ಯನಾಗಿದ್ದಾನೆ. ದೇವೇಗೌಡರು ಈ ದೇಶದ ಹಾಗೂ ರಾಜ್ಯದ ಆಸ್ತಿಯಾಗಿದ್ದಾರೆ. ಅವರಿಂದ ಪಕ್ಷದ ಬಿ ಫಾರಂ ಪಡೆಯುವ ವೇಳೆ ಭಾವುಕನಾದೆ ಎಂದು ಹೇಳಿದರು. ರಾಮನಗರ ಕ್ಷೇತ್ರವೂ ಐತಿಹಾಸಿಕ ಹಿನ್ನೆ​ಲೆ​ಯನ್ನು ಹೊಂದಿದೆ. 1952ರಲ್ಲಿ ಪ್ರಥಮ ಬಾರಿಗೆ ಕೆಂಗಲ್‌ ಹನುಮಂತಯ್ಯ ಅವರು ಪ್ರತಿನಿಧಿಸಿ, ರಾಜ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 

ಕಾಂಗ್ರೆಸ್‌ ಭ್ರಷ್ಟಚಾರ ಜನರ ಮುಂದೆ ಪ್ರಸ್ತಾಪ: ಸಿ.ಟಿ.ರವಿ

1994 ರಾಮನಗರ ಕ್ಷೇತ್ರದಿಂದಲೇ ದೇವೇಗೌಡ ಅವರು ಶಾಸಕರಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಇನ್ನು 2004ರಲ್ಲಿ ಕುಮಾರಸ್ವಾಮಿ ಪ್ರಥಮ ಬಾರಿಗೆ ರಾಮನಗರದಲ್ಲಿ ಸ್ಪರ್ಧಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂದು ನಿಖಿಲ್‌ ಕುಮಾ​ರ​ಸ್ವಾ​ಮಿ ಹೇಳಿದರು. ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ದೇವಾಲಯದಲ್ಲಿ ಪೂಜೆ ಹಾಗೂ ದೇವೇಗೌಡ ಅವರ ಅರ್ಶೀವಾದ ಪಡೆದು ನಿಖಿಲ್‌ ಕುಮಾರಸ್ವಾಮಿ ಬಿ ಫಾರಂ ಪಡೆದು, ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ನನ್ನ ಕಾಲದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಈ ಬಾರಿ ಜನತೆ ಮತ್ತೆ ಜೆಡಿಎಸ್ಗೆ ಮತ ಹಾಕಲಿದ್ಧಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ