
ರಾಮನಗರ (ಏ.29): ಮಂಡ್ಯ ಚುನಾವಣೆ ರೀತಿಯಲ್ಲಿಯೇ ಇಲ್ಲಿಯೂ ನನ್ನ ವಿರುದ್ಧ ಕುತಂತ್ರ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ನನ್ನನ್ನು ಸೋಲಿಸಲು ಷಡ್ಯಂತ್ರ ನಡೆಸಿವೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತಗಳನ್ನು ವಿಭಜನೆ ಮಾಡಲು ಕಾಂಗ್ರೆಸ್ - ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ ಎಂದು ದೂರಿದ ಅವರು, ಕ್ಷೇತ್ರದ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಮತ ಹಾಕಿ ಅಂದಿದ್ದಾರೆ.
ನನಗೆ ಮತ ಹಾಕದಿದ್ದರೂ ಪರವಾಗಿಲ್ಲ ಬಿಜೆಪಿಗೆ ಮತಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳುತ್ತಿದ್ದಾರೆ. ಕೆಲವೆಡೆ ಬಿಜೆಪಿಯವರು ಕೂಡ ಕಾಂಗ್ರೆಸ್‌ಗೆ ಮತ ಹಾಕುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಮತಗಳನ್ನು ವಿಭಜನೆ ಮಾಡಲು ಕಾಂಗ್ರೆಸ್-ಬಿಜೆಪಿ ಈ ರೀತಿ ಮಾಡುತ್ತಿದ್ದು, ಮಂಡ್ಯದ ಚುನಾವಣೆ ರೀತಿಯಲ್ಲಿಯೇ ಇಲ್ಲಿಯೂ ಕುತಂತ್ರ ಮಾಡುತ್ತಿದ್ದಾರೆ. ನಾನು ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲ್ಲ. ಇದಕ್ಕೆ ಕ್ಷೇತ್ರದ ಮತದಾರರೇ ಉತ್ತರ ಕೊಡುತ್ತಾರೆ. ಇದರಿಂದ ಬೇಸತ್ತಿರುವ ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿ¨ರು.
ಹಿಂದಿನ ಅಭಿವೃದ್ಧಿಗಳೇ ನಾಳೆಯ ಅಧಿಕಾರಕ್ಕೆ ದಾರಿ: ಡಾ.ಜಿ.ಪರಮೇಶ್ವರ್
ಜೆಡಿಎಸ್ ಪಕ್ಷ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಸಿದ್ಧಾಂತವನ್ನು ಒಪ್ಪಿ ಬಿಜೆಪಿಯವರು ಯುವಕನಿಗೆ ಶಕ್ತಿ ತುಂಬಲು ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿ - ಕಾಂಗ್ರೆಸ್ ಒಪ್ಪಂದ ಮಾಡಿಕೊಂಡು ಮಂಡ್ಯದಂತೆ ಇಲ್ಲಿಯೂ ಕುತಂತ್ರದ ರಾಜಕಾರಣ ನಡೆಯುತ್ತಿರುವುದನ್ನು ಜೆಡಿಎಸ್ ಸೇರಿದ ಬಿಜೆಪಿ ಕಾರ್ಯಕರ್ತರೇ ತಿಳಿಸಿದ್ದಾರೆ. ಕನಕಪುರದಲ್ಲಿ ಆರ್.ಅಶೋಕ್ ಮತ್ತು ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸುಮ್ಮನೆ ಕಾಟಾಚಾರಕ್ಕೆ ಬಂದು ಕನಕಪುರದಲ್ಲಿ ಅರ್ಜಿ ಹಾಕಿದ್ದಾರೆ. ಗೆಲ್ಲುವ ವಿಶ್ವಾಸ ಇದ್ದಿದ್ದರೆ ಕನಕಪುರದಲ್ಲಿ ಮಾತ್ರ ಸ್ಪರ್ಧೆ ಮಾಡಬೇಕಿತ್ತು ಎಂದು ಸಚಿವ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.
ಅಶೋಕ್ ಅವರು ಪದ್ಮನಾಭನಗರ ಮತ್ತು ಕನಕಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದು ಹೊಂದಾಣಿಕೆ ಅಲ್ಲದೆ ಮತ್ತೇನು. ಕನಕಪುರದಲ್ಲಿ ಬಿಜೆಪಿ ನೆಲೆಯೇ ಇಲ್ಲ. ಅಲ್ಲಿನ ಕಾರ್ಯಕರ್ತರಿಗೆ ನಾವು ರಕ್ಷಣೆ ನೀಡುತ್ತಾ ಬಂದಿದ್ದೇವೆ. ಬಿಜೆಪಿಯಿಂದ ನಾವು ಕಲಿಯುವುದು ಏನೂ ಇಲ್ಲ ಎಂದು ಹೇಳಿದರು.
ಜೆಡಿಎಸ್ ಸೇರ್ಪಡೆಗೊಂಡವರು: ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ಕಾಡನಕುಪ್ಪೆ ರಾಘವೇಂದ್ರ, ಕೈಲಾಂಚ ಹೋಬಳಿ ಬಿಜೆಪಿ ಘಟಕ ಅಧ್ಯಕ್ಷ ಅವ್ವೇರಹಳ್ಳಿ ಪ್ರಶಾಂತ್, ಉಪಾಧ್ಯಕ್ಷ ಅಂಜನಾಪುರ ಕಿರಣ್, ಮರಳವಾಡಿ ಚಂದ್ರಣ್ಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ರಾಜೇಶ್, ದೇವರದೊಡ್ಡಿ ರವಿನಾಯಕ, ಬನ್ನಿಕುಪ್ಪೆ ಈಶ್ವರಯ್ಯ, ಹೊಸದೊಡ್ಡಿ ರಾಕೇಶ್, ಅವ್ವೇರಹಳ್ಳಿ ಸತೀಶ್, ಅನಿತಾ, ನೆಲಮಲೆ ಮಹಾಲಕ್ಷ್ಮೀ, ಅಗರ ಕುಮಾರ್, ಮಲ್ಲೇಶ್, ಸ್ವಾಮಿಗೌಡ ಸೇರಿದಂತೆ 30ಕ್ಕೂ ಹೆಚ್ಚು ಪದಾಧಿಕಾರಿಗಳು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಅರುಣ್ ಸಿಂಗ್ ವಿಶ್ವಾಸ
ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ. ರಾಜಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ವಕ್ತಾರ ಬಿ.ಉಮೇಶ್, ಪ್ರಚಾರ ಸಮಿತಿ ಅಧ್ಯಕ್ಷ ಪಾಂಡುರಂಗ, ಮುಖಂಡರಾದ ಪಿ. ಅಶ್ವತ್‌್ಥ, ಅವ್ವೇರಹಳ್ಳಿ ನಂದೀಶ್‌ಗೌಡ ಸ್ವಾಮಿ, ಸಬ್ಬಕೆರೆ ಶಿವಲಿಂಗಪ್ಪ, ಗುನ್ನೂರು ದೇವರಾಜು, ದೊರೆಸ್ವಾಮಿ, ಕೆ.ಶಿವಲಿಂಗಯ್ಯ, ಗುತ್ತಿಗೆದಾರ ಪ್ರಕಾಶ್, ಶಿವಲಿಂಗಯ್ಯ, ಅಂಕನಹಳ್ಳಿ ಎಸ್. ಮಹೇಶ್, ವಡ್ಡರಹಳ್ಳಿ ವೆಂಕಟೇಶ್, ಗೌಡಯ್ಯನದೊಡ್ಡಿ ವಾಸು, ತಮ್ಮಣ್ಣ, ಕಾಳಾನಾಯ್ಕ, ಮುತ್ತರಾಜನಾಯ್ಕ, ಬಸವರಾಜು, ರಮೇಶ್, ಶ್ರೀನಿವಾಸಮೂರ್ತಿ, ಲಕ್ಷ್ಮೇಕಾಂತ್, ಲಕ್ಕೋಜನಹಳ್ಳಿ ನಾಗರಾಜು, ನಂಜಾಪುರ ಚಲುವರಾಜು, ಜಿ.ಟಿ.ಕೃಷ್ಣ, ಮೂರ್ತಿನಾಯ್ಕ, ಭಾಸ್ಕರ್, ತಮ್ಮಣ್ಣ, ಚಂದ್ರಗಿರಿ, ಚಲುವರಾಜು, ನಾಗರಾಜು, ಗಿರಿಸ್ವಾಮಿ, ಬೈರಪ್ಪ, ದೇವರಾಜು ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.