ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶ್‌ಪ್ರಸಾದ್ ಪರ ಚಿತ್ರನಟ ಎಸ್.ನಾರಾಯಣ್ ಹರವೆ ಹೋಬಳಿಯ ಹಲವು ಗ್ರಾಮಗಳಲ್ಲಿ ಅಭ್ಯರ್ಥಿ ಎಚ್.ಎಂ.ಗಣೇಶ್‌ಪ್ರಸಾದ್ ಜೊತೆಗೂಡಿ ಮತಯಾಚನೆ ನಡೆಸಿದರು.
ಗುಂಡ್ಲುಪೇಟೆ (ಏ.28): ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶ್‌ಪ್ರಸಾದ್ ಪರ ಚಿತ್ರನಟ ಎಸ್.ನಾರಾಯಣ್ ಹರವೆ ಹೋಬಳಿಯ ಹಲವು ಗ್ರಾಮಗಳಲ್ಲಿ ಅಭ್ಯರ್ಥಿ ಎಚ್.ಎಂ.ಗಣೇಶ್‌ಪ್ರಸಾದ್ ಜೊತೆಗೂಡಿ ಮತಯಾಚನೆ ನಡೆಸಿದರು. ಗುಂಡ್ಲುಪೇಟೆ ಕ್ಷೇತ್ರ ವ್ಯಾಪ್ತಿಯ ಹೊಸಹಳ್ಳಿ, ಕೇತಹಳ್ಳಿ, ಸಾಗಡೆ, ಬೆಟ್ಟದಪುರ, ಕೂಟೇಗೌಡನಹುಂಡಿ, ಕೆಂಗಾಕಿ, ಕುಮಚಹಳ್ಳಿ, ಹಳೇಪುರ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದ ಬಳಿಕ ಎಸ್.ನಾರಾಯಣ್ ಮಾತನಾಡಿದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಗುಂಡ್ಲುಪೇಟೆ ಕ್ಷೇತ್ರದ ಅಭ್ಯರ್ಥಿ ಎಚ್.ಎಂ.ಗಣೇಶ್‌ಪ್ರಸಾದ್ ಮಾನವೀಯತೆ ಇರುವ ಸರಳ ನಾಯಕ. ಇಂಥವರಿಗೆ ಮತ ನೀಡಿದರೆ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸಲಿದ್ದಾರೆ ಎಂದರು.
ಗಣೇಶ್‌ಪ್ರಸಾದ್‌ರ ಬಗ್ಗೆ ಕ್ಷೇತ್ರದ ಕಾರ್ಯಕರ್ತರಿಗಿಂತಲೂ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ಇದ್ದಾರೆ. ಅಧಿಕಾರ ಇಲ್ಲದೆ ಇದ್ದರೂ ಜನರ ಕಷ್ಟ, ಸುಖಗಳಿಗೆ ಸ್ಪಂದಿಸುವ ಗುಣವುಳ್ಳಂತ ನಾಯಕ ಗುಂಡ್ಲುಪೇಟೆ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಿದೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸಿದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸದ ಜೊತೆಗೆ ನನಗೆ ಹೆಚ್ಚಿನ ಮತ ನೀಡುವ ವಾತಾವರಣ ಕಾಣುತ್ತಿದೆ ಎಂದರು. ನಾನು, ಶಾಸಕನಾದರೆ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತದ ಕನಸು ನನ್ನದಾಗಿದ್ದು, ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದರು.
undefined
ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಅರುಣ್ ಸಿಂಗ್ ವಿಶ್ವಾಸ
ದರ್ಶನ್ ಜೊತೆ ನಟ, ನಿರ್ದೇಶಕ ಎಸ್. ನಾರಾಯಣ್ ಪ್ರಚಾರ: ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರ ಜೊತೆಗೂಡಿ ಚಿತ್ರನಟ, ನಿರ್ದೇಶಕ ಎಸ್. ನಾರಾಯಣ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಮತದಾರರನ್ನು ಓಲೈಸುವ ಕೆಲಸ ಮಾಡಿದರು. ತಾಲೂಕಿನ ಹೊಸಹಳ್ಳಿ, ಗ್ರಾಮದಲ್ಲಿ ಪ್ರಚಾರ ಪ್ರಾರಂಭಿಸಿದ ಬಳಿಕ ದೇವಿರಮ್ಮನಹಳ್ಳಿ ವೃತ್ತದ ಬಳಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ದೇವಿರಮ್ಮನಹಳ್ಳಿಹುಂಡಿ, ಪಟ್ಟಣದ ರಾಮಸ್ವಾಮಿ ಬಡಾವಣೆ, ಬುದ್ದನಗರ, ಗೌತಮನಗರ, ಹೌಸಿಂಗ್‌ಬೋರ್ಡ್, ಪ್ರಗತಿನಗರ, ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ಕೈಗೊಂಡರು. ತಾಯಿ ತಂದೆ ಕಳೆದುಕೊಂಡಿರುವ ದರ್ಶನ್ ಧ್ರುವರಿಗೆ ನೀವೇ ತಂದೆ, ತಾಯಿ ಸ್ಥಾನದಲ್ಲಿ ನಿಂತು ಆಶೀರ್ವದಿಸಬೇಕು ಎಂದು ಮಹಿಳೆಯರಿಗೆ ಕೈ ಮುಗಿದು ಮತಯಾಚಿಸಿದರು.
ಮೈಸೂರು ಮಹಾರಾಜರ ಸ್ಫೂರ್ತಿಯಿಂದ ವರುಣ ಮಾದರಿ ಕ್ಷೇತ್ರ ಮಾಡುವೆ: ಸಚಿವ ವಿ.ಸೋಮಣ್ಣ
ಗ್ರಾಮಸ್ಥರು ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಮತ್ತು ಚಿತ್ರ ನಿರ್ದೇಶಕ ಎಸ್. ನಾರಾಯಣ್ ಅವರನ್ನು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಜೈಕಾರಗಳನ್ನು ಮೊಳಗಿಸಿ ಕಾಂಗ್ರೆಸ್ ಬಾವುಟಗಳನ್ನು ಪ್ರದರ್ಶಿಸಿ, ಅದ್ದೂರಿಯಾಗಿ ಸ್ವಾಗತ ನೀಡಿದರು. ಬಳಿಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ನನ್ನ ತಂದೆಯ ಕನಸನ್ನು ನನಸು ಮಾಡಲು ಮತ್ತು ಕ್ಷೇತ್ರದ ಮನೆ ಮಗನಾಗಿ ನಿಮ್ಮಗಳ ಸೇವೆ ಮಾಡಲು ಈ ಬಾರಿ ನನಗೆ ಅವಕಾಶ ಕಲ್ಪಿಸಿ, ನಿಮ್ಮ ಅಮೂಲ್ಯವಾದ ಮತಕ್ಕೆ ಗೌರವ ತಂದು ಕೊಟ್ಟು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುವ ಮೂಲಕ ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.