ಸುಳ್ಳು ಮತ್ತು ಮೋಸ ಕಾಂಗ್ರೆಸ್‌ನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಡಿ.ಕೆ.ಶಿ ಮತ್ತು ಸಿದ್ದರಾಮಯ್ಯ ಪುಂಗಿದಾಸರು, ಕಾಂಗ್ರೆಸ್ ಪಕ್ಷಕ್ಕೇ ಗ್ಯಾರೆಂಟಿ ಇಲ್ಲ ಇನ್ನು ಅವರು ನೀಡುವ ಭರವಸೆಗಳಿಗೆ ಗ್ಯಾರೆಂಟಿ ಏನು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.
ಬಾಗೇಪಲ್ಲಿ (ಏ.28): ಸುಳ್ಳು ಮತ್ತು ಮೋಸ ಕಾಂಗ್ರೆಸ್‌ನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಡಿ.ಕೆ.ಶಿ ಮತ್ತು ಸಿದ್ದರಾಮಯ್ಯ ಪುಂಗಿದಾಸರು, ಕಾಂಗ್ರೆಸ್ ಪಕ್ಷಕ್ಕೇ ಗ್ಯಾರೆಂಟಿ ಇಲ್ಲ ಇನ್ನು ಅವರು ನೀಡುವ ಭರವಸೆಗಳಿಗೆ ಗ್ಯಾರೆಂಟಿ ಏನು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು. ಬಿಜೆಪಿ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಗುರುವಾರ ನ್ಯಾಷನಲ್ ಕಾಲೇಜ್ ಮುಂಭಾಗದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಉಚಿತ ಕರೆಂಟ್, ಗ್ಯಾಸ್ ಸಂರ್ಪಕ, ಕಿಸಾನ್ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ರೈತ, ಕಾರ್ಮಿಕರ ಪರ ಸರ್ಕಾರ: ಎಲ್ಲಾ ಜಾತಿ ವರ್ಗದವರಿಗೆ ಈ ಯೋಜನೆಗಳನ್ನು ನೀಡಿರುವ ಏಕೈಕ ಪಕ್ಷ ನಮ್ಮ ಬಿಜೆಪಿ ಡಬಲ್ ಇಂಜಿನ್ ಸರ್ಕಾರ. ರೈತರ, ಕಾರ್ಮಿಕರ, ಬಡವರ ಪರವಾಗಿರುವ ಸರ್ಕಾರವಾಗಿದೆ. ಈ ಯೋಜನೆಗಳನ್ನು ತಂದಿದ್ದು ನಮ್ಮ ಸರ್ಕಾರವೇ ಹೊರತು ಕಾಂಗ್ರೆಸ್ ಜೆಡಿಎಸ್ ಅಲ್ಲ ಪರೀಕ್ಷೆ ಮಾಡಿ ಯೋಚಿಸಿ ಮತ ಚಲಾಯಿಸಿ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಕಾಂಗ್ರೆಸ್‌ನ ಡಿಕೆಶಿ ಬ್ರದರ್ಸ್ ಬೆಂಕಿ ಹಾಕಿದರು. ಇತಂಹ ಮನೆ ಹಾಳು ಮಾಡುವ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾ. ಬೇಡ ಎಂದರೆ ನಮ್ಮಲ್ಲಿ ರೆಡಿಯಾಗಿದೆ ಡವೆಲಂಪ್‌ಮೆಂಟ್ ಮಾಡಲ್. ತಾಲಿಬಾನ್ ಮಾಡಲ್ ಬೇಕೆನ್ನುವವರು ಬಾಲ ಬಿಚ್ಚಿದರೆ ಬಾಲ ಮಾತ್ರವಲ್ಲದೆ ತಲೆ ಕತ್ತರಿಸಲು ಸಿದ್ದರಾಗಿದ್ದೇವೆ ಎಂದರು.
ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ?: ಸಿದ್ದು ವಿರುದ್ಧ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ
ಬಾಗೇಪಲ್ಲಿಯಲ್ಲಿ ಅರಳಲಿದೆ ಕಮಲ: ಒಂದು ವರ್ಷದಲ್ಲಿ ಎತ್ತಿನ ಹೊಳೆ ಯೋಜನೆ ತರುವುದಾಗಿ ಸುಳ್ಳು ಭರವಸೆ ನೀಡಿದ ಮೊಯ್ಲಿ ಮನೆ ಸೇರಿದ್ದಾರೆ. ಸುಳ್ಳು ಮತ್ತು ಮೋಸ ಕಾಂಗ್ರೆಸ್‌ನ ಒಂದೇ ನಾಣಯದ ಎರಡು ಮುಖವಿದ್ದಂತೆ . ಈ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದ ಅವರು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಸೋಲುವುದು ಕಟ್ಟಿಟ್ಟಬುತ್ತಿ. ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಅದೇ ರೀತಿಯಲ್ಲಿ ಬಾಗೇಪಲ್ಲಿಯಲ್ಲಿ ಕಮಲ ಅರಳುವುದು ಸಹ ಅಷ್ಟೇ ಖಚಿತ ಎಂದರು.
ಮೈಸೂರು ಮಹಾರಾಜರ ಸ್ಫೂರ್ತಿಯಿಂದ ವರುಣ ಮಾದರಿ ಕ್ಷೇತ್ರ ಮಾಡುವೆ: ಸಚಿವ ವಿ.ಸೋಮಣ್ಣ
ತೆಲಂಗಾಣ ರಾಜ್ಯದ ಬಿಜೆಪಿ ಅಧ್ಯಕ್ಷ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಮಾತನಾಡಿ, ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಅಧಿಕಾರ ನಡೆಸಿವೆ. ಆದರೆ ಅಭಿವೃದ್ದಿ ಮಾತ್ರ ಶೂನ್ಯ. ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ಬಿಜೆಪಿ ಪಕ್ಷದ ಅಭ್ಯರ್ಥಿಯಿಂದ ಮಾತ್ರ ಸಾಧ್ಯ ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಾಗೇಪಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮುಖಂಡ ಕೋನಪರೆಡ್ಡಿ ಮತ್ತಿತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.