ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಚಿತ್ರನಟ ಸುದೀಪ್, ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ದೊಡ್ಡಬಳ್ಳಾಪುರ (ಮೇ.07): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಚಿತ್ರನಟ ಸುದೀಪ್, ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಇಲ್ಲಿನ ಶಾಂತಿನಗರದ ಮುತ್ಯಾಲಮ್ಮ ದೇವಾಲಯ ಮುಂಭಾಗದಿಂದ ಆರಂಭವಾದ ಬೃಹತ್ ರೋಡ್‌ಶೋ ಎಚ್.ಮುಗುವಾಳಪ್ಪ ವೃತ್ತದವರೆಗೆ ರೋಡ್ ಶೋ ಬಳಿಕ ಮಾತನಾಡಿದ ಸುದೀಪ್, ದೊಡ್ಡಬಳ್ಳಾಪುರದಲ್ಲಿ ಒಬ್ಬ ವಿದ್ಯಾವಂತ ಯುವಕ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಜನತೆ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು.
ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಬಿಜೆಪಿ ಸರ್ಕಾರ ಜನರ ಆಶಯಗಳನ್ನು ಈಡೇರಿಸುವ ಪ್ರಮುಖ ಗುರಿಯನ್ನು ಹೊಂದಿದೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳು ಜನರ ಬದುಕಿನ ಸ್ಥಿತಿಯನ್ನು ಸುಧಾರಿಸಿವೆ. ವಿದ್ಯಾನಿಧಿ ಯೋಜನೆ, ನೇಕಾರ ಸಮ್ಮಾನ್, ರೈತ ಸಮ್ಮಾನ್, ಬಡ್ಡಿರಹಿತ ಸಾಲ ಹೀಗೆ ಹಲವು ಯೋಜನೆಗಳ ಮೂಲಕ ನೇಕಾರರು, ರೈತರು ಸೇರಿದಂತೆ ಎಲ್ಲ ವರ್ಗಗಳ ಹಿತ ಕಾಯಲು ಆದ್ಯತೆ ನೀಡಲಾಗಿದೆ. ಡಬಲ್ ಎಂಜಿನ್ ಬಿಜೆಪಿ ಸರ್ಕಾರ ರಾಜ್ಯದ ಭವಿಷ್ಯಕ್ಕೆ ಬಹುದೊಡ್ಡ ಆಶಾವಾದವಾಗಿದೆ ಎಂದು ಹೇಳಿದರು.
undefined
ಬೆಳಗಾವಿಯಲ್ಲಿ ಕಿಚ್ಚನ ರೋಡ್ ಶೋ: 'ಏನಾಗಲೀ ಮುಂದೆ ಸಾಗು ನೀ' ಹಾಡು ಹಾಡಿದ ಸುದೀಪ್
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪರಿಶಿಷ್ಟ ವರ್ಗಗಳ ಮೀಸಲಾತಿ ಪರಿಷ್ಕರಣೆ ಮೂಲಕ ಸಮಾನ ಅವಕಾಶಗಳನ್ನು ಎಲ್ಲ ವರ್ಗಗಳಿಗೂ ನೀಡುವ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಿಜೆಪಿ ಮುನ್ನುಡಿ ಬರೆದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಜನರ ಆಶೋತ್ತರಗಳಿಗೆ ಪೂರಕವಾದ ಪಾರದರ್ಶಕ ಆಡಳಿತ ಇರುತ್ತದೆ. ಈ ಹಿನ್ನಲೆಯಲ್ಲಿ ಡಬಲ್ ಎಂಜಿನ್ ಸರ್ಕಾರದ ಪ್ರಸ್ತುತತೆ ಹೆಚ್ಚಿದೆ ಎಂದು ತಿಳಿಸಿದರು. ಪಕ್ಷದ ಅಭ್ಯರ್ಥಿ ಧೀರಜ್ ಮುನಿರಾಜ್ ಮಾತನಾಡಿ, ನವ ದೊಡ್ಡಬಳ್ಳಾಪುರ ನಿರ್ಮಾಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸುದೀಪ್ ಅಬ್ಬರದ ಪ್ರಚಾರ: ಕಿಚ್ಚ ನೋಡಲು ನೆರೆದ ಸಾವಿರಾರು ಅಭಿಮಾನಿಗಳು
ಬೆಂಗಳೂರಿಗೆ ಸನಿಹವಿದ್ದರೂ ಅಭಿವೃದ್ಧಿಯ ಹಲವು ವಿಚಾರದಲ್ಲಿ ದೊಡ್ಡಬಳ್ಳಾಪುರ ಇಂದಿಗೂ ಸವಾಲುಗಳನ್ನು ಎದುರಿಸುತ್ತಿದೆ. ಶೈಕ್ಷಣಿಕ, ಆರೋಗ್ಯ ಸೇರಿದಂತೆ ಮೂಲಸೌಕರ‍್ಯಗಳ ಸಮರ್ಪಕ ನಿರ್ವಹಣೆ ಹಾಗೂ ಅವಕಾಶಗಳ ಹೆಚ್ಚಳಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಪಕ್ಷದ ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಬಿ.ಸಿ.ನಾರಾಯಣಸ್ವಾಮಿ, ಟಿ.ವಿ.ಲಕ್ಷ್ಮೇನಾರಾಯಣ್, ಬಿ.ಸಿ.ಆನಂದ್ ಸೇರಿದಂತೆ ಹಲವು ಮುಖಂಡರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.