
ಗಂಗಾವತಿ (ಮೇ.9) : ಹನುಮ ಜನಿಸಿದ ನಾಡಿನಲ್ಲಿ ಬಜರಂಗದಳ ನಿಷೇಧಿಸುವ ಪ್ರಣಾಳಿಕೆ ನೀಡಿದ ಕಾಂಗ್ರೆಸ್ಸಿಗೆ ಮೇ.10ರಂದು ಜೈ ಬಜರಂಗ ಬಲಿ ಎಂಬ ಘೋಷಣೆ ಮೂಲಕ ಹನುಮ ಭಕ್ತರು ಬಿಜೆಪಿಗೆ ಮತ ಹಾಕಿಸಿ ನಿರ್ನಾಮ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ತಾಲೂಕಿನ ಅಂಜನಾದ್ರಿ ಬೆಟ್ಟದ ಕೆಳ ಭಾಗದಲ್ಲಿ ಸೋಮವಾರ ಹನುಮ ಭಕ್ತರಿಂದ ನಡೆದ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಶ್ರೀರಾಮನ ದೇಶ, ಆದರೆ ಇಂದಿನ ಕಾಂಗ್ರೆಸ್ ರಾಮ ಹುಟ್ಟಿದ್ದು ಎಲ್ಲಿ? ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಶ್ರೀರಾಮ ಸೇತುವೆ (Rama setu) ನಿರ್ಮಿಸಿಲ್ಲ. ಯಾವ ಕಾಲೇಜಿನಲ್ಲಿ ಎಂಜಿನಿಯರಿಂಗ್ ಡಿಗ್ರಿ ಸಿಕ್ಕಿದೆ ಎಂದು ಲೇವಡಿ ಮಾಡಿದೆ. ಕಾಂಗ್ರೆಸ್ ಮುಸ್ಲಿಂರನ್ನು ಓಲೈಕೆ ಮಾಡುವ ಪಕ್ಷವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಹಿಂದೂಗಳನ್ನು ತುಳಿಯುವ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ
ಹನುಮ ಅಪಾರ ಶಕ್ತಿವಂತ. ಆಂಜನೇಯ ಲಂಕೆಗೆ ಬೆಂಕಿ ಹಚ್ಚಿದಂತೆ ದೇಶದ ಹಿಂದುಗಳೆಲ್ಲ ಮೇ 10 ರಂದು ಬಿಜೆಪಿಗೆ ಮತದಾನ ಮಾಡಿ, ಕಾಂಗ್ರೆಸ್‌ಗೆ ಬೆಂಕಿ ಹಚ್ಚಿ ಮೇ.13ಕ್ಕೆ ವಾಸನೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ 10 ಕೆಜಿ ಅಕ್ಕಿ, ಉಚಿತ ಸಾರಿಗೆ, 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಿದೆ. ಹನುಮ ಭಕ್ತರಿಗೆ ಶ್ರೀರಾಮನ ಕಾರ್ಯ ಮುಖ್ಯವೇ, ಬಿಟ್ಟಿತೆಗೆದುಕೊಳ್ಳುವುದು ಮುಖ್ಯವೇ ನೀವೇ ನಿರ್ಧರಿಸಿ. ಕಾಂಗ್ರೆಸ್ಸಿನ ಆಶ್ವಾಸನೆಗೆ ಮಾರು ಹೋದರೆ ನೀವು ಹನುಮನ ಹಿಂಬಾಲಕರೇ ಅಲ್ಲ. ಕರ ಸೇವಕರ ಮೇಲೆ ಗುಂಡು ಹಾರಿಸಿದ್ದು, ಆಂಜನೇಯನ ಜನ್ಮದಿನ ಯಾವುದೆಂದವರು, ಕಪಾಲಿ ಬೆಟ್ಟವನ್ನು ಯೇಸು ಬೆಟ್ಟಮಾಡುತ್ತೇನೆ ಎಂದವರು ಯಾರು? ಎಂದು ಪ್ರಶ್ನಿಸಿದರು.
ಎಲ್ಲ ಹನುಮ ಭಕ್ತರು ಮನೆ ಮನೆಗೆ ತೆರಳಿ ಬಜರಂಗದಳ ನಿಷೇದಿಸುವ ಹೇಳಿಕೆ ನೀಡಿದ ಪಕ್ಷಕ್ಕೆ ಮತ ನೀಡದಂತೆ ಜಾಗೃತಿ ಮೂಡಿಸವಂತೆ ತಿಳಿಸಿದರು. ಇದಕ್ಕೂ ಮುನ್ನ ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿ, ಎಲ್ಲ ಭಕ್ತರು ಹನುಮಾನ್ ಚಾಲೀಸಾ ಪಠಣ ಮಾಡಿದರು.
ಮಂಗಳೂರಿನ ಶೇ.65ರಷ್ಟುಭೂಮಿ ಮುಸ್ಲಿಂ ಒಡೆತನದಲ್ಲಿದೆ: ಲ್ಯಾಂಡ್ ಜಿಹಾದ್ ಬಗ್ಗೆ ಹಿಂದುಗಳು ಚಿಂತಿಸಬೇಕಿದೆ: ಸೂಲಿಬೆಲೆ
ಆನೆಗೊಂದಿ ರಾಜವಂಶಸ್ಥ ಕೃಷ್ಣದೇವರಾಯ, ದೆಹಲಿ ಘೋಂಡಾ ಕ್ಷೇತ್ರದ ಅಜಯ್ ಮಹಾವರ, ಪ್ರಭು ಕಪಗಲ್, ಸಂತೋಷ ಕೆಲೋಜಿ, ಅಯ್ಯನಗೌಡ, ನೀಲಕಂಠಪ್ಪ ಸೇರಿ ಗಂಗಾವತಿ, ಕನಕಗಿರಿ, ಬಸಾಪುರ, ಆನೆಗೊಂದಿ ಭಾಗದ ಸುತ್ತಮುತ್ತಲಿನ 500ಕ್ಕೂ ಹೆಚ್ಚಿನ ಹನುಮ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.