ಮೋದಿ ಸರ್ಪವಾದ್ರೆ ಡೇಂಜರ್ರೇ, ಅವರದು ಸಂತೆ ಭಾಷಣ: ಎಚ್‌.ಡಿ.ಕುಮಾರಸ್ವಾಮಿ

By Govindaraj S  |  First Published May 2, 2023, 4:00 AM IST

ಜನರ ರಕ್ಷಣೆಗಾಗಿ ನಾನು ಸರ್ಪವಾಗಲು ಸಿದ್ಧ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಮೋದಿ ಸರ್ಪ ಆಗುವುದಾದರೆ ಸರ್ಪ ಡೇಂಜರ್ರೇ! ಜನರಿಗಾದರೂ ಅಷ್ಟೇ, ಇನ್ನೊಬ್ಬರಿಗಾದರೂ ಅಷ್ಟೇ ಸರ್ಪ ಸರ್ಪಾನೇ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವ್ಯಾಖ್ಯಾನಿಸಿದರು. 


ಬಾದಾಮಿ (ಮೇ.02): ಜನರ ರಕ್ಷಣೆಗಾಗಿ ನಾನು ಸರ್ಪವಾಗಲು ಸಿದ್ಧ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಮೋದಿ ಸರ್ಪ ಆಗುವುದಾದರೆ ಸರ್ಪ ಡೇಂಜರ್ರೇ! ಜನರಿಗಾದರೂ ಅಷ್ಟೇ, ಇನ್ನೊಬ್ಬರಿಗಾದರೂ ಅಷ್ಟೇ ಸರ್ಪ ಸರ್ಪಾನೇ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವ್ಯಾಖ್ಯಾನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ರಾಜಕಾರಣದಲ್ಲಿ ಸರ್ಪ, ವಿಷ ಕನ್ಯೆ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ವಿಷ ಕನ್ಯೆ, ಸರ್ಪದ ಮಾತಿ ನಿಂದ ಇವರು ಜನರ ಬದುಕನ್ನು ಸರಿ ಮಾಡಿ ಕೊಡ್ತಾರಾ? ಎಂದು ಪ್ರಶ್ನಿಸಿದರು.

ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡಲ್ಲ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯೇ ಮುಂದಿನ ಸಿಎಂ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಂದೇಶ ರವಾನಿಸಿರುವ ಬೆನ್ನಲ್ಲೇ, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಇದು ಶುದ್ಧ ಸುಳ್ಳು. ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡೋದಿಲ್ಲ ಎಂದು ಹೇಳಿದರು.

Tap to resize

Latest Videos

ವಿಜಯಪುರ ಜಿಲ್ಲೆಯಲ್ಲಿ ಎಚ್‌ಡಿಕೆ ಪ್ರಚಾರ ಪರೇಡ್: ಜೆಡಿಎಸ್‌ ಪಕ್ಷಕ್ಕೆ ಭರವಸೆ ಮೂಡಿಸಿದ ಕ್ಷೇತ್ರಗಳು ಯಾವುವು ಗೊತ್ತಾ?

ರಾಜ್ಯ ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವುದೂ ಬ್ರಾಹ್ಮಣ ಸಿಎಂ ಆಳ್ವಿಕೆಯೇ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟರು. ಬಿಜೆಪಿ, ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸಿಎಂ ಪಟ್ಟಕಟ್ಟುತ್ತದೆ ಎಂಬುದನ್ನು ನಾನು ಈ ಮೊದಲೇ ಊಹೆ ಮಾಡಿದ್ದೆ. ಆ ಪಕ್ಷದ ಆಂತರ್ಯದಲ್ಲಿ ಅಂತೆಯೇ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.

ಜೆಡಿಎಸ್‌ ಕನ್ನಡಿಗರ ಟೀಂ: ಪ್ರಧಾನಿ ಮೋದಿ ಅವರು ಜೆಡಿಎಸ್‌ ಬಿ ಟೀಂ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಅವರು ಬಿ ಟೀಂ ಅಂತಾರೆ. ಸಿದ್ದರಾಮಯ್ಯ ಅವರು ಬಿ ಟೀಂ ಅಂತಾರೆ. ನಾನು ಯಾವ ಟೀಂ ಅಂತಾ ಹೇಳಲಿ? ಪ್ರತಿನಿತ್ಯವೂ ಹೇಳುತ್ತಲೇ ಇದ್ದೇನೆ. ಜೆಡಿಎಸ್‌ ನಾಡಿನ ಜನತೆಯ ಟೀಂ ಅಂತಾ. ನಾವು ಕನ್ನಡಿಗರ ಟೀಂ ಎಂದು ಹೇಳಿದರು. ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೆಂದು ನಾವು ಲು ಪ್ಲ್ಯಾನ್‌ ಹಾಕಿಕೊಂಡಿಲ್ಲ. ಆದರೆ, ನಮ್ಮ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ. ಇನ್ನೊಬ್ಬರನ್ನು ಸೋಲಿಸಬೇಕು ಎನ್ನುವುದಕ್ಕಿಂತ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೆಂದು ಚುನಾವಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಒಂದು ವಾರ ಮಾತ್ರ ಮೋದಿ ಹವಾ: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರ ಮಾತ್ರ ಚುನಾವಣಾ ಪ್ರವಾಸ, ಪ್ರಚಾರದಲ್ಲಿ ಇರುತ್ತಾರೆ. ಮೇ 9ಕ್ಕೆ ಟಾಟಾ ಹೇಳಿ ಹೋಗುತ್ತಾರೆ. ಆಮೇಲೆ ಕರ್ನಾಟಕದಲ್ಲಿ ಏನು ಆಯ್ತು? ಅಂತಾ ಕೇಳಲಿಕ್ಕೆ ಬರ್ತಾರಾ? ಮತ್ತೆ ಈ ಕಡೆಗೆ ಬರೋದು ಪಾರ್ಲಿಮೆಂಟ್‌ ಚುನಾವಣೆಗೆ. ಅಲ್ಲಿಯವರೆಗೂ ಕರ್ನಾಟಕಕ್ಕೆ ಮೋದಿ ಬರಲ್ಲ ಎಂದು ಎಚ್‌ಡಿಕೆ ಹೇಳಿದರು.

ಗ್ಯಾರಂಟಿ ಕಾರ್ಡ್‌ ನೀಡಿ ಕಾಂಗ್ರೆಸ್‌ ಮತ​ಭಿ​ಕ್ಷೆ: ಯಡಿಯೂರಪ್ಪ ಲೇವಡಿ

ಲೂಟಿ ಹೊಡೆಯೋಕೆ ಡಬಲ್‌ ಇಂಜಿನ್‌ ಸರ್ಕಾರ ಇರೋದು. ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ಮಾತ್ರ ಬಿಜೆಪಿಗೆ ಲೂಟಿ ಹೊಡೆಯೋಕೆ ಸಾಧ್ಯ. ಹಾಗಾಗಿಯೇ ಬಿಜೆಪಿಯವರು ಅಭಿವೃದ್ಧಿ ಅಂದ್ರೆ ಡಬಲ್‌ ಇಂಜಿನ್‌ ಸರ್ಕಾರದಿಂದ ಎಂಬ ವರಸೆ ತೆಗೆಯುತ್ತಾರೆ ಅಷ್ಟೇ. ರಾಜ್ಯವನ್ನು ಲೂಟಿ ಹೊಡೆದಿರುವುದೇ ಬಿಜೆಪಿಯ ಸಾಧನೆ ಎಂದು ಹರಿಹಾಯ್ದರು. ಬಾದಾಮಿ ಅಂಬೇಡ್ಕರ್‌ ವೃತ್ತದಿಂದ ರೋಡ್‌ ಶೋ ನಡೆಸಿ ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ ಪರ ಮತಯಾಚಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!