ಟ್ರಬಲ್‌ ಶೂಟರ್‌ ಡಿ.ಕೆ.​ಶಿ​ವ​ಕು​ಮಾರ್‌ ಮಣಿ​ಸಲು ಸಾಮ್ರಾಟ್‌ ಅಶೋಕಾಸ್ತ್ರ ಪ್ರಯೋ​ಗ

By Kannadaprabha NewsFirst Published May 8, 2023, 12:15 PM IST
Highlights

ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಸ್ವ ಕ್ಷೇತ್ರ​ದ​ಲ್ಲಿ​ಯೇ​ ಕಟ್ಟಿಹಾಕುವ ಉದ್ದೇ​ಶ​ದೊಂದಿಗೆ ಬಿಜೆಪಿ, ಕಂದಾಯ ಸಚಿವ ಆರ್‌.ಅ​ಶೋಕ್‌ ಅವ​ರನ್ನು ಕಣ​ಕ್ಕಿ​ಳಿಸಿದೆ. ಹೀಗಾಗಿ, ಕನ​ಕ​ಪುರ, ರಾಜ್ಯ​ದ​ಲ್ಲಿಯೇ ಪ್ರತಿ​ಷ್ಠಿತ ಕ್ಷೇತ್ರ​ವಾಗಿ ರೂಪು​ಗೊಂಡಿದೆ. 

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಮೇ.08): ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಸ್ವ ಕ್ಷೇತ್ರ​ದ​ಲ್ಲಿ​ಯೇ​ ಕಟ್ಟಿಹಾಕುವ ಉದ್ದೇ​ಶ​ದೊಂದಿಗೆ ಬಿಜೆಪಿ, ಕಂದಾಯ ಸಚಿವ ಆರ್‌.ಅ​ಶೋಕ್‌ ಅವ​ರನ್ನು ಕಣ​ಕ್ಕಿ​ಳಿಸಿದೆ. ಹೀಗಾಗಿ, ಕನ​ಕ​ಪುರ, ರಾಜ್ಯ​ದ​ಲ್ಲಿಯೇ ಪ್ರತಿ​ಷ್ಠಿತ ಕ್ಷೇತ್ರ​ವಾಗಿ ರೂಪು​ಗೊಂಡಿದೆ. ಕಾಂಗ್ರೆಸ್‌ನ ಮುಖ್ಯ​ಮಂತ್ರಿ​ ಅಭ್ಯ​ರ್ಥಿ​ಯ ಸಾಲಿ​ನ​ಲ್ಲಿ ಗುರು​ತಿ​ಸಿ​ಕೊಂಡಿ​ರುವ ಡಿಕೆ​ಶಿಯವರು ಚುನಾವಣೆಯಲ್ಲಿ ಗೆದ್ದು ಪಕ್ಷ​ದೊ​ಳಗೆ ತಮ್ಮ ಹಕ್ಕು ಪ್ರತಿಪಾದನೆ ಮಾಡುವ ಆಲೋ​ಚ​ನೆ​ಯ​ಲ್ಲಿ​ದ್ದಾರೆ. ಬಿಜೆಪಿಯ ಆರ್‌.ಅ​ಶೋಕ್‌ ಅವರು ಪದ್ಮ​ನಾ​ಭ​ನ​ಗರ ಹಾಗೂ ಕನ​ಕ​ಪುರ ಎರಡೂ ಕ್ಷೇತ್ರ​ಗ​ಳಲ್ಲಿ ಆಯ್ಕೆ​ಯಾಗಿ ಪಕ್ಷ ಅಧಿ​ಕಾ​ರಕ್ಕೆ ಬಂದರೆ ಉನ್ನತ ಹುದ್ದೆ ಪಡೆಯುವ ಲೆಕ್ಕಾ​ಚಾ​ರ​ದ​ಲ್ಲಿ​ದ್ದಾರೆ.

ಕನ​ಕ​ಪುರ ಕ್ಷೇತ್ರ ಡಿ.ಕೆ.​ಶಿ​ವ​ಕು​ಮಾರ್‌ ಅವರ ಭದ್ರ​ಕೋಟೆ. ಆದರೆ, ಇದೇ ಮೊದ​ಲ ಬಾರಿಗೆ ಆಡ​ಳಿತಾರೂಢ ಬಿಜೆಪಿ, ಅವರಿಗೆ ಟಕ್ಕರ್‌ ನೀಡಲು ಅಶೋಕ್‌ ಅವ​ರನ್ನು ಕಣ​ಕ್ಕಿ​ಳಿ​ಸಿದೆ. ಕ್ಷೇತ್ರದಲ್ಲಿ ಬಲಿಷ್ಠ ನಾಯಕರಾಗಿ ಬೆಳೆದಿರುವ ಡಿ.ಕೆ.​ಶಿ​ವ​ಕು​ಮಾರ್‌ ಸತ​ತ​ವಾಗಿ 7 ಬಾರಿ ಶಾಸ​ಕ​ರಾಗಿ ಆಯ್ಕೆ​ಯಾ​ಗುತ್ತಾ ಬಂದ​ವರು. ಕನಕಪುರಕ್ಕೆ ಬರುವ ಮುನ್ನ ಸಾತನೂರು ಕ್ಷೇತ್ರದಿಂದ 4 ಬಾರಿ ಶಾಸಕರಾಗಿದ್ದರು. ನಂತರ 2008ರಿಂದ ಕನಕಪುರ ಕ್ಷೇತ್ರ ಪ್ರತಿನಿಧಿಸಿ, ಅಂದಿನಿಂದ ಈವರೆಗೆ ಕಳೆದ 15 ವರ್ಷಗಳಿಂದ ಸೋಲಿಲ್ಲದ ಸರದಾರರಾಗಿ ಒಂದೇ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಅವರ ಗೆಲುವಿನ ಅಂತರ ಏರಿಕೆ ಆಗು​ತ್ತಿ​ರು​ವುದು ಅವರಿಗಿರುವ ಜನಬೆಂಬಲಕ್ಕೆ ಸಾಕ್ಷಿಯಾಗಿದೆ.

ಲಿಂಗಾಯತ ಸಮಾಜ ಸಮುದ್ರ ಇದ್ದಂತೆ: ಕಾಂಗ್ರೆಸ್‌ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಡಿಕೆ​ಶಿಗೆ ಡಿಕೆಸು ದೊಡ್ಡ ಶಕ್ತಿ: ಶಿವ​ಕು​ಮಾರ್‌ಗೆ ಸಹೋ​ದರ, ಸಂಸದ ಡಿ.ಕೆ.​ಸು​ರೇಶ್‌ ಅವರೇ ದೊಡ್ಡಶಕ್ತಿ. ಈ ಸಹೋ​ದ​ರರು ಅಭಿ​ವೃದ್ಧಿ ವಿಚಾ​ರ​ದಲ್ಲಿ ಕ್ಷೇತ್ರದ ಚಿತ್ರ​ಣ​ವನ್ನು ಸಾಕಷ್ಟುಬದ​ಲಿ​ಸಿ​ದ್ದಾರೆ. ತಮ್ಮ ಪಕ್ಷ ಅಧಿ​ಕಾರದಲ್ಲಿ ಇರಲಿ, ಇಲ್ಲ​ದಿ​ರಲಿ ಸರ್ಕಾ​ರ​ಗಳ ಮೇಲೆ ಒತ್ತಡ ಹಾಕಿ ಸಾವಿ​ರಾರು ಕೋಟಿ ರೂ.ಗಳ ಅನು​ದಾನ ತಂದು ಅಭಿ​ವೃದ್ಧಿ ಕಾರ್ಯ​ಗ​ಳನ್ನು ಮಾಡಿ​ದ್ದಾರೆ. ಸಾತ​ನೂರು ಮತ್ತು ಕನ​ಕ​ಪುರ ಕ್ಷೇತ್ರ​ದಲ್ಲಿ ತಮ್ಮ ವಿರುದ್ಧ ಸ್ಪರ್ಧಿ​ಸಿದ್ದ ಎದು​ರಾ​ಳಿ​ಗ​ಳಿಂದ ಶಸ್ತ್ರತ್ಯಾಗ ಮಾಡಿಸಿರುವ ಡಿಕೆಶಿ, ಅವರೆಲ್ಲ​ರನ್ನು ತನ್ನ ಸೈನ್ಯದೊ​ಳಗೆ ಸೇರಿ​ಸಿ​ಕೊಂಡು ಕೋಟೆ ಕಾಯಲು ಬಲಿಷ್ಠ ಕಾವಲು ಪಡೆ​ಯನ್ನೇ ಕಟ್ಟಿ​ದ್ದಾರೆ. ಇದು ಅವ​ರಿಗೆ ವರ​ದಾ​ನ​ವಾ​ಗ​ಲಿದೆ.

ದಳ​ಪತಿ ಸೈನ್ಯ ಸೆಳೆ​ಯುವ ಯತ್ನ: ಅಶೋಕ್‌, ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರಾದರೂ ಕನ​ಕ​ಪು​ರಕ್ಕೆ ಅವರ ಕೊಡುಗೆ ಏನೂ ಇಲ್ಲ. ಆದರೆ, ಈ ಚುನಾ​ವ​ಣೆ​ಯನ್ನು ಅವರು ಪ್ರತಿ​ಷ್ಠೆ​ಯಾಗಿ ತೆಗೆ​ದು​ಕೊಂಡಿದ್ದು, ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ದಳ​ಪತಿಗಳಾದ ದೇವೇ​ಗೌಡ ಮತ್ತು ಕುಮಾ​ರ​ಸ್ವಾಮಿ, ಕನ​ಕ​ಪು​ರ​ದತ್ತ ತಲೆ ಹಾಕು​ವು​ದಿಲ್ಲ. ಅದಕ್ಕೆ ಪ್ರತಿ​ಯಾಗಿ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣದಲ್ಲಿ ಡಿಕೆಶಿ ಕಾಲಿಡುವು​ದಿಲ್ಲ. ಇವರಿಬ್ಬ​ರದು ಹೊಂದಾ​ಣಿಕೆ ರಾಜ​ಕಾ​ರಣ ಎಂಬ ಅಸ್ತ್ರ​ವನ್ನು ಹೂಡು​ತ್ತಿ​ರುವ ಅಶೋಕ್‌, ಜೆಡಿ​ಎಸ್‌ ಕಾರ್ಯ​ಕ​ರ್ತ​ರನ್ನು ತಮ್ಮತ್ತ ಸೆಳೆ​ಯುವ ಪ್ರಯತ್ನದಲ್ಲಿ​ದ್ದಾ​ರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಕೇವಲ 6,273 ಮತಗಳನ್ನು ಪಡೆದು, ಠೇವಣಿ ಕಳೆದುಕೊಂಡಿದ್ದರು. ಈ ಬಾರಿ ಕಮಲ ಅರ​ಳಿ​ಸಲೇ ಬೇಕೆಂಬ ಹಠಕ್ಕೆ ಬಿದ್ದಿ​ರುವ ಬಿಜೆಪಿ, ರಾಷ್ಟ್ರೀಯ ನಾಯ​ಕ​ರನ್ನು ಕ್ಷೇತ್ರಕ್ಕೆ ಕರೆ​ ತಂದು ಪಕ್ಷದ ಶಕ್ತಿ ವೃದ್ಧಿ​ಸುವ ಪ್ರಯ​ತ್ನ​ದ​ಲ್ಲಿ​ದೆ. ಈ ಕ್ಷೇತ್ರದಲ್ಲಿ 40 ರಿಂದ 50 ಸಾವಿರದಷ್ಟುಸಾಂಪ್ರ​ದಾ​ಯಿಕ ಮತ​ಗಳು ಜೆಡಿ​ಎಸ್‌ ಬುಟ್ಟಿ​ಯ​ಲ್ಲಿವೆ. ಈ ಮತ​ಗ​ಳನ್ನು ಕಾಪಾ​ಡಿ​ಕೊ​ಳ್ಳುವ ಉದ್ದೇ​ಶ​ದಿಂದ ಜೆಡಿಎಸ್‌, ಪಕ್ಷದ ತಾಲೂಕು ಅಧ್ಯ​ಕ್ಷ​ ನಾಗ​ರಾಜು ಅವ​ರನ್ನು ಕಣ​ಕ್ಕಿ​ಳಿಸಿದೆ. ಕನಕಪುರ ಪುರಸಭೆ ಇದ್ದಾಗ ಅಧ್ಯಕ್ಷರಾಗಿದ್ದ ಅವರು, ನಂತರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

2018ರ ಫಲಿ​ತಾಂಶ
ಡಿ.ಕೆ.​ಶಿ​ವ​ಕು​ಮಾರ್‌ (ಕಾಂಗ್ರೆಸ್‌) - 1,27,552.
ನಾರಾ​ಯ​ಣ​ಗೌಡ (ಜೆ​ಡಿ​ಎಸ್‌) - 47,643.
ನಂದಿನಿಗೌಡ (ಬಿ​ಜೆ​ಪಿ) - 6,273.

ಬಿಎಂಟಿಸಿ ಬಸ್​ನಲ್ಲಿ ರಾಹುಲ್ ಗಾಂಧಿ ಪ್ರಯಾಣ: ಆಶ್ಚರ್ಯಗೊಂಡ ಪ್ರಯಾಣಿಕರು

ಜಾತಿ ಲೆಕ್ಕಾ​ಚಾರ
ಒಟ್ಟು ಮತದಾರರು-2,24,956.
ಒಕ್ಕಲಿಗರು-98,000.
ಪ.ಜಾತಿ/ಪ.ಪಂ- 46,000.
ಲಿಂಗಾಯತರು -24,000.
ಅಲ್ಪ​ಸಂಖ್ಯಾ​ತರು-19,000.
ಇತರ ಹಿಂದುಳಿದ ಸಮುದಾಯ-37,956 .

click me!