Ticket fight: ಮಾನ್ವಿ ಕಾಂಗ್ರೆಸ್ ಟಿಕೆಟ್‌ ಘೋಷ​ಣೆಗೂ ಮುನ್ನವೇ ಆಕ್ರೋಶ ಸ್ಪೋಟ!

Published : Apr 09, 2023, 09:12 AM IST
Ticket fight: ಮಾನ್ವಿ ಕಾಂಗ್ರೆಸ್ ಟಿಕೆಟ್‌ ಘೋಷ​ಣೆಗೂ ಮುನ್ನವೇ  ಆಕ್ರೋಶ ಸ್ಪೋಟ!

ಸಾರಾಂಶ

 ರಾಯ​ಚೂರು ಜಿಲ್ಲೆಯಲ್ಲಿ ಕಾಂಗ್ರೆ​ಸ್‌ ಪಕ್ಷದವರು ಟಿಕೆಟ್‌ ಘೋಷ​ಣೆಗೂ ಮುನ್ನವೇ ಟಿಕೆಟ್‌ ಆಕಾಂಕ್ಷಿ ನಮಗೆ ಬೇಡ ಎನ್ನುವ ಅಸ​ಮಾ​ಧಾ​ನ​ವನ್ನು ಬಹಿ​ರಂಗ​ವಾ​ಗಿಯೇ ಹೊರ ಹಾಕಿ​ದ್ದಾರೆ. ಮಾನ್ವಿ ವಿಧಾ​ನ​ಸಭಾ ಕ್ಷೇತಕ್ಕೆ ಕಾಂಗ್ರೆಸ್‌ ಟಿಕೆಟ್‌ ಘೋಷ​ಣೆಗೂ ಮುನ್ನವೇ ಆಕಾಂಕ್ಷಿ ವಿರು​ದ್ಧವೇ ಆಕ್ರೋ​ಶ​ ಸ್ಪೋಟಗೊಂಡಿದೆ.

ರಾಮ​ಕೃಷ್ಣ ದಾಸರಿ

ರಾಯ​ಚೂರು (ಏ.9) : ರಾಜ್ಯ ವಿಧಾ​ನ​ಸಭಾ ಚುನಾ​ವ​ಣೆ ಹಿನ್ನೆ​ಲೆ​ಯಲ್ಲಿ ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಎರ​ಡನೇ ಪಟ್ಟಿ​ಯನ್ನು ಬಿಡು​ಗಡೆ ಮಾಡಿದ್ದು, ಅದರ ಪರಿ​ಣಾ​ಮ​ವಾಗಿ ರಾಜ್ಯದ ವಿವಿಧ ಕ್ಷೇತ್ರ​ಗ​ಳಲ್ಲಿ ಸ್ವಪ​ಕ್ಷೀ​ಯರು ಬಂಡಾ​ಯದ ಬಿರು​ಗಾ​ಳಿ​ಯನ್ನು ಎಬ್ಬಿ​ಸಿ​ರುವ ಸಮ​ಯ​ದ​ಲ್ಲಿಯೇ ರಾಯ​ಚೂರು ಜಿಲ್ಲೆಯಲ್ಲಿ ಕಾಂಗ್ರೆ​ಸ್‌ ಪಕ್ಷದವರು ಟಿಕೆಟ್‌ ಘೋಷ​ಣೆಗೂ ಮುನ್ನವೇ ಟಿಕೆಟ್‌ ಆಕಾಂಕ್ಷಿ ನಮಗೆ ಬೇಡ ಎನ್ನುವ ಅಸ​ಮಾ​ಧಾ​ನ​ವನ್ನು ಬಹಿ​ರಂಗ​ವಾ​ಗಿಯೇ ಹೊರ ಹಾಕಿ​ದ್ದಾರೆ.

ಜಿಲ್ಲೆ ಮಾನ್ವಿ ವಿಧಾ​ನ​ಸಭಾ ಕ್ಷೇತ(Manvi assembly constituency)ಕ್ಕೆ ಕಾಂಗ್ರೆಸ್‌ ಟಿಕೆಟ್‌ ಘೋಷ​ಣೆಗೂ ಮುನ್ನವೇ ಆಕಾಂಕ್ಷಿ ವಿರು​ದ್ಧವೇ ಆಕ್ರೋ​ಶ​ ಸ್ಪೋಟಗೊಂಡಿದೆ. ಮಾನ್ವಿ ಪಟ್ಟಣ ಹಾಗೂ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿರ​ವಾರ ತಾಲೂ​ಕಿನ ಜಾಲಾಪೂರು ಕ್ಯಾಂಪಿನಲ್ಲಿ ಕಾಂಗ್ರೆಸ್‌ ಕಾರ್ಯ​ಕ​ರ್ತರ ಸಭೆ​ಯನ್ನು ನಡೆ​ಸ​ಲಾ​ಯಿತು. ಈ ವೇಳೆ ಕಾರ್ಯ​ಕ​ರ್ತರೇ ಡಿಸಿಸಿ ಅಧ್ಯಕ್ಷ, ಸೇವಾ​ಕಾಂಕ್ಷಿ ಬಿ.ವಿ.​ ನಾ​ಯಕ(BV Nayak) ವಿರುದ್ಧ ತಿರು​ಗಿ​ಬಿದ್ದ ಘಟ​ನೆ​ಗಳು ನಡೆ​ದಿವೆ. ಇದು ಡಿಸಿಸಿ ಅಧ್ಯಕ್ಷ ಬಿ.ವಿ. ​ನಾ​ಯಕ ಅವ​ರಿಗೆ ತೀವ್ರ ಮುಜು​ಗ​ರ​ನ್ನುಂಟು ಮಾಡಿ​ದೆ.

Viral Audio: ನಮ್ಮ ಜಿಲ್ಲೆಗೆ ನಾನೇ ಮೋದಿ, ನಾನೇ ಟ್ರಂಪ್‌..' ಪ್ರಧಾನಿಯನ್ನೇ ಟೀಕಿಸಿದ ಬಿಜೆಪಿ ಶಾಸಕ?!

ಮಾನ್ವಿ ಕ್ಷೇತ್ರದಿಂದ ಸ್ಪರ್ಧಿ​ಸು​ವು​ದ​ಕ್ಕಾಗಿ ಮಾಜಿ ಸಂಸದ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ.​ ನಾ​ಯ​ಕ ಅವರು ಅರ್ಜಿ ಸಲ್ಲಿ​ಸಿದ್ದು, ಇವರ ಜೊತೆಗೆ ಮಾಜಿ ಶಾಸಕ ಹಂಪಯ್ಯ ಸಾಹು​ಕಾರ(Hampayya sahukar), ಶರ​ಣಯ್ಯ ನಾಯಕ ಗುಡ​ದಿನ್ನಿ(Sharanayya nayak gududinni), ರಾಜಾ ವಸಂತ ನಾಯಕ(Raja Vasanta nayak), ಲಕ್ಷ್ಮೇ​ದೇವಿ ನಾಯ​ಕ ಅವರು ಸಹ ಟಿಕೆ​ಟ್‌​ಗಾಗಿ ಕಸ​ರತ್ತು ನಡೆ​ಸು​ತ್ತಿದ್ದಾ​ರೆ. ಬಿ.ವಿ. ​ನಾ​ಯಕ ಅವ​ರಿಗೆ ಟಿಕೆಟ್‌ ಖಚಿತ ಎನ್ನುವ ಮಾಹಿ​ತಿ​ ಕ್ಷೇತ್ರ​ದಾ​ದ್ಯ​ಂತ ಹರಿ​ದಾ​ಡು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ನಮಗೆ ಅನ್ಯ ತಾಲೂ​ಕಿ​ನ​ವರು ಬೇಡವೆಂದು ಆಗ್ರ​ಹಿಸಿ ಬಿ.ವಿ.​ ನಾ​ಯಕ ವಿರುದ್ಧ ನೇರ​ವಾ​ಗಿಯೇ ಕೆಂಡ ಕಾರು​ತ್ತಿ​ದ್ದಾ​ರೆ.

ರಾಯಚೂರು: ಚುನಾ​ವಣೆ ಘೋಷಣೆಯಾದ್ರೂ, 7 ಕ್ಷೇತ್ರಗಳಲ್ಲಿ ಮುಗಿಯದ ಅಭ್ಯರ್ಥಿಗಳ ಆಯ್ಕೆ ಗೊಂದಲ!

ಮಾಜಿ ಸಂಸದ, ಡಿಸಿಸಿ ಜಿಲ್ಲಾ​ಧ್ಯಕ್ಷ ಬಿ.ವಿ. ​ನಾ​ಯಕ ಅವರು ಮೂಲತಃ ದೇವ​ದುರ್ಗ ತಾಲೂ​ಕಿ​ನ​ವ​ರಾ​ಗಿ​ದ್ದಾರೆ. ಮಾಜಿ ಸಂಸದ ಎ. ವೆಂಕ​ಟೇಶ ನಾಯಕ ಅವರ ಹಿರಿಯ ಸುಪು​ತ್ರ​ರಾ​ಗಿ​ರುವ ಬಿ.ವಿ. ​ನಾ​ಯಕ ಪ್ರಸಕ್ತ ಚುನಾ​ವ​ಣೆ​ಯಲ್ಲಿ ರಾಯ​ಚೂರು ಗ್ರಾಮೀಣ, ಮಾನ್ವಿ, ದೇವ​ದು​ರ್ಗ ಕ್ಷೇತ್ರ​ಗ​ಳಿಂದ ಸ್ಪರ್ಧಿ​ಸಲು ಅರ್ಜಿ​ಯನ್ನು ಸಲ್ಲಿ​ಸಿ​ದ್ದರು. ಇದೀಗ ಟಿಕೆಟ್‌ ಹಂಚಿಕೆ ಕೊನೆ​ಘಟ್ಟತಲು​ಪಿದ್ದು, ಬಿ.ವಿ. ​ನಾ​ಯಕ ಅವ​ರಿಗೆ ಮಾನ್ವಿ​ಯಿಂದ ಟಿಕೆಟ್‌ ಖಚಿತ ಎನ್ನುವ ಸುದ್ದಿ​ಗಳು ಎಲ್ಲೆಡೆ ಹರಿ​ದಾ​ಡು​ತ್ತಿ​ರು​ವು​ದ​ರಿಂದ ಪಕ್ಷದ ಕಾರ್ಯ​ಕ​ರ್ತರು ಸ್ಥಳೀ​ಯ​ರಿಗೆ ಟಿಕೆಟ್‌ ನೀಡ​ಬೇಕು ಎನ್ನುವ ಬೇಡಿ​ಕೆ​ಯನ್ನು ಮುಂದಿ​ಟ್ಟು​ಕೊಂಡು ಮಾಜಿ ಶಾಸಕ ಹಂಪಯ್ಯ ನಾಯಕ ಸಾಹು​ಕಾರ, ಶರ​ಣಪ್ಪ ನಾಯಕ ಗುಡ​ದಿನ್ನಿ, ರಾಜಾ ವಸಂತ ನಾಯಕ, ಲಕ್ಷ್ಮೇ​ದೇವಿ ನಾಯ​ಕ ಅವ​ರಲ್ಲಿ ಯಾರಿ​ಗಾ​ದರು ಒಬ್ಬರಿಗೆ ಟಿಕೆಟ್‌ ನೀಡ​ಬೇಕು ಎಂದು ಒತ್ತಾ​ಯಿ​ಸು​ತ್ತಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ