ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸದ ಕುಮಾರಸ್ವಾಮಿ: ಸಿ.ಪಿ.ಯೋಗೇಶ್ವರ್‌

By Kannadaprabha NewsFirst Published Apr 19, 2023, 11:38 AM IST
Highlights

ಕಳೆದ ಬಾರಿ ಕುಮಾರಸ್ವಾಮಿಯವರ ಆಶ್ವಾಸನೆಗಳನ್ನು ನಂಬಿದ ಜನರು, ಬಾರಿ ನಿರೀಕ್ಷೆಯೊಂದಿಗೆ ಶಾಸಕರಾಗಿ ಆಯ್ಕೆ ಮಾಡಿದರು. ಆದರೆ, ಕ್ಷೇತ್ರದ ಜನರ ಸಂಕಷ್ಟಪರಿಹರಿಸಲು ಅವರು ಮುಂದಾಗಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ (ಏ.19): ಕಳೆದ ಬಾರಿ ಕುಮಾರಸ್ವಾಮಿಯವರ ಆಶ್ವಾಸನೆಗಳನ್ನು ನಂಬಿದ ಜನರು, ಬಾರಿ ನಿರೀಕ್ಷೆಯೊಂದಿಗೆ ಶಾಸಕರಾಗಿ ಆಯ್ಕೆ ಮಾಡಿದರು. ಆದರೆ, ಕ್ಷೇತ್ರದ ಜನರ ಸಂಕಷ್ಟಪರಿಹರಿಸಲು ಅವರು ಮುಂದಾಗಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು. ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಬಾರದಿದ್ದರೂ ಕುಮಾರಸ್ವಾಮಿ ಮೇಲೆ ಭರವಸೆ ಇಟ್ಟು ಜನ ಅವರನ್ನು ಗೆಲ್ಲಿಸಿದರು. ಆದರೆ ಜನರ ನಿರೀಕ್ಷೆ ಈಡೆರಿಸುವಂತೆ ಅವರು ಕೆಲಸ ಮಾಡಲಿಲ್ಲ. 

ತಮ್ಮ ಶಾಸಕತ್ವದ 5 ವರ್ಷದ ಅವಧಿಯಲ್ಲಿ ಕುಮಾರಸ್ವಾಮಿ ಏಳೆಂಟು ಬಾರಿ ಅಧಿಕೃತ ಕಾರ್ಯಕ್ರಮಗಳಿಗೆ ಆಗಮಿಸಿದ್ದು, ಸೇರಿದಂತೆ ಸುಮಾರು 12,13 ಬಾರಿ ಮಾತ್ರ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರಷ್ಟೆ. ಜನರ ನೋವು- ನಲಿವು, ಕಷ್ಟಸುಖಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಕೆಲಸ. ಆದರೆ ಕುಮಾರಸ್ವಾಮಿ ಜನಸಾಮಾನ್ಯರ ನೋವಿಗೆ ಸ್ಪಂದಿಸಲಿಲ್ಲ. ಆದರೂ ಈ ಬಾರಿಯೂ ನಾಮಪತ್ರ ಸಲ್ಲಿಸಿದ್ದಾರೆ. ಹಾಗಾಗಿ ಇದೊಂದು ವಿಶೇಷ ಚುನಾವಣೆಯಾಗಿದ್ದು, ಜನ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ನೋಡಬೇಕಿದೆ ಎಂದರು.

Latest Videos

ಇನ್ನು ಮುಂದೆ ಕನ​ಕ​ಪು​ರ​ದಲ್ಲಿ ಬಿಜೆಪಿ ಹವಾ: ಸಚಿವ ಅ​ಶೋಕ್‌

ಕುಮಾರಸ್ವಾಮಿ ಕಳೆದ ಬಾರಿ ಗೆದ್ದಲ್ಲಿ ಸಿಎಂ ಆಗುತ್ತಾರೆ. ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂದು ನಂಬಿ ಅವರನ್ನು ಗೆಲ್ಲಿಸಿದಿರಿ. ಆದರೆ ಕ್ಷೇತ್ರದ ಶಾಸಕರಾದ ನಂತರ ಅವರು ಕ್ಷೇತ್ರವನ್ನು ನಿರ್ಲಕ್ಷಿಸಿದರು. ಚನ್ನಪಟ್ಟಣಕ್ಕೆ ಬಂದು ಇಲ್ಲಿಂದ ಗೆದ್ದ ಕುಮಾರಸ್ವಾಮಿ, ಚನ್ನಪಟ್ಟಣವನ್ನು ತಾವು ಇಟ್ಟುಕೊಂಡಿದ್ದು, ರಾಮನಗರವನ್ನು ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಇಲ್ಲಿಂದ ಅವರು, ರಾಮನಗರದಿಂದ ಮಗ, ಮಂಡ್ಯದಿಂದ ಯಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ ಸಿಪಿವೈ, ಕಳೆದ ಬಾರಿ ಕುಮಾರಸ್ವಾಮಿ ಸುಳ್ಳು ಭರವಸೆಗಳನ್ನು ನೀಡಿ ಇಲ್ಲಿಂದ ಆಯ್ಕೆಯಾದರು. ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಹೇಳಿ ಮೋಸ ಮಾಡಿದರೆಂದರು.

ಈ ಸಂದರ್ಭದಲ್ಲಿ ಬಮೂಲ್‌ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ಮುಖಂಡರಾದ ಅರಳಾಳುಸಂದ್ರ ಶಿವಪ್ಪ, ಮುದ್ದುಕೃಷ್ಣ, ಎಲೇಕೇರಿ ರವೀಶ್‌, ಜಯಕುಮಾರ್‌ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಪ್ರಚಾರಕ್ಕೆ ಪ್ರಧಾನಿ ಬರುವ ಸಾಧ್ಯತೆ: ಈ ಬಾರಿಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚನ್ನಪಟ್ಟಣ ಅಥವಾ ರಾಮನಗರಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಯೋಗೇಶ್ವರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರನ್ನು ಚನ್ನಪಟ್ಟಣದ ಪ್ರಚಾರಕ್ಕೆ ತೆರೆತರುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ರಾಜ್ಯ ಮುಖಂಡರು ಈ ಕುರಿತಂತೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಪ್ರಚಾರಕ್ಕೆ ಸೂಕ್ತ ಜಾಗ ಹುಡುಕುವ ಪ್ರಯತ್ನಗಳನ್ನು ಈಗಾಗಲೇ ನಡೆಸಲಾಗಿದೆ. ಇಲ್ಲಿ ಅಂತ ಸೂಕ್ತ ಜಾಗವಿಲ್ಲ. 

ಎಲ್ಲ ಜಾಗಗಳು ತೋಟಗಳಾಗಿ ಪರಿವರ್ತನೆಯಾಗಿದೆ. ಆದರೂ ಜಾಗದ ಹುಡುಕಾಟ ನಡೆದಿದ್ದು, ಜಾಗ ಹಾಗೂ ಪ್ರಧಾನಿಯವರ ದಿನಾಂಕ ಹೊಂದಾಣಿಕೆಯಾದರೆ ಅವರು ಕ್ಷೇತ್ರದ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ. ಅದೇ ವೇಳೆ ಅವರು ಚನ್ನಪಟ್ಟಣ ಅಥವಾ ರಾಮನಗರದಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದೆ. ಅವರು ಚನ್ನಪಟ್ಟಣಕ್ಕೆ ಬಂದರೂ ಬರಬಹುದು ಅನ್ನಿಸುತ್ತಿದೆ ಎಂದರು.

ಬಿಜೆಪಿ ಹಿರಿಯರನ್ನು ಎಂದೂ ಕಡೆಗಣಿಸಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸಿಎಂ ಬರುತ್ತಾರೆ: ಚುನಾವಣೆ ಎಂದ ಮೇಲೆ ಸಾಕಷ್ಟು ಒತ್ತಡವಿರುವುದರಿಂದ ಇಂದು ಯಾವ ರಾಜ್ಯ ನಾಯಕರು ಆಗಮಿಸಲಿಲ್ಲ. ನಿನ್ನೆ ಸಹ ನಾಮಪತ್ರ ಸಲ್ಲಿಕೆಗೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿಕೊಂಡೆ. ಗೋವಿಂದ ಕಾರಜೋಳ ಅವರ ನಾಮಪತ್ರ ಸಲ್ಲಿಕೆಗೆ ಹೋಗಬೇಕಿರುವುದರಿಂದ ಬರಲು ಆಗುವುದಿಲ್ಲ. ಪ್ರಚಾರಕ್ಕೆ ಬರುತ್ತೇನೆಂದು ಅವರು ತಿಳಿಸಿದ್ದಾರೆ ಎಂದರು.

click me!