ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಇರಬೇಕು, 50% ಮೀಸಲಾತಿ ತೆಗೆದು ಹಾಕಿ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

By Gowthami K  |  First Published Apr 23, 2023, 10:43 PM IST

ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ವಿಜಯಪುರದಲ್ಲಿ ಭರ್ಜರಿ ರೋಡ್ ಶೋ ನಡೆದ್ದಾರೆ. ಈ ವೇಳೆ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿಗೆ 40 ಸೀಟ್ ಬರುತ್ವೆ, 40% ಕಮಿಷನ್ ತಿಂದವರಿಗೆ 40 ಸೀಟ್ ಬರುತ್ತೆ ಎಂದು ಲೇವಡಿ ಮಾಡಿದರು.


ವಿಜಯಪುರ (ಏ.23): ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ವಿಜಯಪುರದಲ್ಲಿ ಭರ್ಜರಿ ರೋಡ್ ಶೋ ನಡೆದ್ದಾರೆ. ಈ ವೇಳೆ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 50% ಮೀಸಲಾತಿ ತೆಗೆದು ಹಾಕಿ. ಬೇರೆಯವರದ್ದು ಕಸಿದುಕೊಂಡು ಕೊಡಬೇಡಿ. ಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಸಿಗಬೇಕು. ಮೋದಿ ಓಬಿಸಿ, ಹಿಂದುಳಿದವರ ಬಗ್ಗೆ ಮಾತನಾಡುವಾಗ ಇದನ್ನ ಮಾಡಿ ತೋರಿಸಿ. ಕನ್ಯಾ ಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ಮಾಡಿದ್ದು, ದೇಶವನ್ನ ಒಗ್ಗೂಡಿಸಲು ಎಂದು ಹೇಳಿದರು.

ಭಾಷಣದ ಮಧ್ಯೆ ಅಜಾನ್ ಧ್ವನಿ ಕೇಳಿದಂತಾಗಿ, ಅಜಾನ್ ಆಗ್ತಿದೆಯಾ ಎಂದು ಕೇಳಿದರು. ಅಜಾನ್ ವೇಳೆ ಮಾತು ನಿಲ್ಲಿಸಲು ಹೇಳಿದ ರಾಹುಲ್ ಗಾಂಧಿ ಅವರು ಎಂ ಬಿ ಪಾಟೀಲ್ ಅಜಾನ್ ನಡೆಯುತ್ತಿಲ್ಲ ಎಂದ ಮೇಲೆ ಮಾತು ಮುಂದುವರೆಸಿದರು.

Tap to resize

Latest Videos

ಬಸವೇಶ್ವರರ ಜಯಂತಿಯ ಶುಭಾಶಯಕೋರಿದ ರಾಹುಲ್ ಗಾಂಧಿ,  ಬಸವೇಶ್ವರರ ವಿಚಾರಧಾರೆಗಳ, ಚಿಂತನೆಗಳ ಬಗ್ಗೆ ಮಾತನಾಡಿದರು. ಸತ್ಯ ಹೇಳಲು ಹೆದರ ಬೇಡಿ ಎಂದು ಬಸವೇಶ್ವರರು ಹೇಳಿದ್ದರು. ಏನೇ ಆದರೂ ಹೆದರಬೇಡಿ. ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಹಿಂಸೆಯ ವಾತಾವರಣ ನಿರ್ಮಾಣ ಮಾಡಿದ್ದಾರೆ.  ಬಿಜೆಪಿ ಹಾಗೂ ಪ್ರಧಾನಿಗಳ ಬಸವೇಶ್ವರರ ಬಗ್ಗೆ ಮಾತನಾಡ್ತಾರೆ ಆದ್ರೆ ನಡೆಯೋದಿಲ್ಲ. ಸಮಾಜದ ನಿರ್ಗತಿಕರಿಗೆ ಶಕ್ತಿ ತುಂಬಲು ಬಸವೇಶ್ವರರು ಹೇಳಿದ್ದರು, ಶ್ರೀಮಂತರಿಗೆ ಸಹಾಯ ಮಾಡಲು ಹೇಳಿಲ್ಲ ಎಂದಾಗ ನೆರದವರು ರಾಹುಲ್ ರಾಹುಲ್ ಎಂದು ಕೂಗಿದರು.

ನಾನು ಅದಾನಿ ಜೊತೆಗೆ ಸಂಬಂಧ ಏನು ಎಂದು ಪ್ರಧಾನಿಗೆ ಕೇಳಿದ್ದೆ. ಎಲ್ ಐ ಸಿ ಹಣ ಅದಾನಿ ಕೊಡಲಾಗ್ತಿದೆ ಯಾಕೆ ಎಂದು ಪ್ರಶ್ನಿಸಿದ್ದೇನೆ. ಇದರಿಂದ ಯಾವುದೇ ಕೆಲಸ ಆಗಲಿಲ್ಲ, ನಾನು ಮಾತನಾಡಿದ ಆಡಿಯೋ ಡಿಲಿಟ್ ಮಾಡಿದ್ರು, ಬಳಿಕ ಲೋಕಸಭೆಯಿಂದ ಹೊರಹಾಕಿದ್ರು. ಸತ್ಯವನ್ನ ಎಲ್ಲಿ ಬೇಕಾದರೂ ಹೇಳಬಹುದು, ಸತ್ಯವನ್ನ ಇಲ್ಲಿಯೂ ಹೇಳಬಹುದು. ಸತ್ಯ ಹೇಳಲು ಹೆದರಿಕೆ ಯಾಕೆ ಎಂದು ರಾಹುಲ್ ಗಟ್ಟಿ ಧ್ವನಿಯಲ್ಲಿ ಹೇಳಿದರು.

ದುರ್ಬಲರಿಗಾಗಿ ಕೆಲಸ ಮಾಡಲು ಬಸವಣ್ಣನವರು ಹೇಳಿದ್ರು, ರೈತನ ಮಗ ವಿಮಾನ ಹಾರಿಸಲು ಹಕ್ಕಿದೆ. ಕೂಲಿ ಕಾರ್ಮಿಕರ ಮಗ ಇಂಜಿನಿಯರ್ ಆಗಬೇಕು ಎಂದಿದ್ದರು. ಬಸವಣ್ಣನವರ ಯೋಚನೆಗಳು, ಆಶಯದಂತೆ ನಾವು ನಡೆಯುತ್ತಿದ್ದೇವೆ. ಬಸವಣ್ಣನವರು ಮಹಿಳೆಯ ರಕ್ಷಣೆ ಆಗಬೇಕು ಎಂದು ನಾವು ಭಾಗ್ಯಲಕ್ಷ್ಮೀ ಯೋಜನೆ ತಂದೆವು. 10 ಕೆ.ಜಿ ಬಡ ಕುಟುಂಬಗಳಿಗೆ ಕೊಟ್ಟಿದ್ದೇವೆ, 1500 ಡಿಪ್ಲೋಮಾ ವಿದ್ಯಾರ್ಥಿಗಳಿಗೆ, ಪದವಿರಧರರಿಗೆ 3 ಸಾವಿರ ತಿಂಗಳಿಗೆ ಕೊಡಲಿದ್ದೇವೆ.  ಬಸವಣ್ಣನವರ ಚಿಂತನೆಗಳ ಅಧ್ಯಯನ ಮಾಡಿದ್ದೇನೆ, ಪುಸ್ತಕಗಳನ್ನ ಓದಿದ್ದೇನೆ. ಬಸವಣ್ಣನವರ ಪುಸ್ತಕದಲ್ಲಿ, ಚಿಂತನೆಯಲ್ಲಿ 40% ಕಮಿಷನ್ ವಿಚಾರ ಇದೆಯಾ ಹುಡುಕಾಡಿದೆ ಅದು ಸಿಗಲಿಲ್ಲ.

ಬಿಜೆಪಿ ಸರ್ಕಾರ ದೇಶದಲ್ಲಿ ಭ್ರಷ್ಟಾ ಸರ್ಕಾರ ಎಂದು  ವಾಗ್ದಾಳಿ ನಡೆಸಿದ ರಾಹುಲ್, ಏನೇ ಕೆಲಸ ಮಾಡಿದ್ರು 40% ಕಮಿಷನ್ ಪಡೆಯುತ್ತಾರೆ. ಪಿಎಸ್ಐ ಸ್ಕ್ಯಾಮ್ ನಲ್ಲು ಲೂಟಿ ಮಾಡಿದ್ರು, ಇಂಜಿನಿಯರ್ ಗಳಿಂದ ಲೂಟಿ ಮಾಡಿದ್ದಾರೆ. ಕಾಂಟ್ರಾಕ್ಟರ್ ಗಳು ಪ್ರಧಾನಿಗೆ ಪತ್ರ ಬರೆದರು, 40% ಕಮಿಷನ್ ಬಗ್ಗೆ ಬರೆದರು, ಆದ್ರೆ ಪ್ರಧಾನಿ ಉತ್ತರಿಸಿಲ್ಲ.  ಉತ್ತರಿಸೋದು ಕೂಡ ಇಲ್ಲ. ಆದ್ರೆ ಪ್ರಧಾನಿ ನಾನು ಭ್ರಷ್ಟಾಚಾರದ ವಿರುದ್ಧ ಅಂತಾ ಹೇಳ್ತಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ‌ ಲಿಂಗಾಯತರ ಕಡೆಗಣನೆ, ಹುಬ್ಬಳ್ಳಿಯಲ್ಲಿ ರಾಹುಲ್ - ಶೆಟ್ಟರ್ ಸುದೀರ್ಘ

ನೀವು ಬಿಜೆಪಿಯನ್ನ ಅಧಿಕಾರಕ್ಕೆ ತಂದಿಲ್ಲ, ಎಂ ಎಲ್ ಎ ಗಳನ್ನ ಕಳ್ಳತನ ಮಾಡಿ ಸರ್ಕಾರ ಮಾಡಿದ್ದಾರೆ. ಬಿಜೆಪಿ ಕಳ್ಳತನದ ಸರ್ಕಾರ ಎಂದು ಟೀಕಿಸಿದ ರಾಗಾ,  ಶಾಸಕರ ಖರೀದಿಗೆ ಹಣ ಎಲ್ಲಿಂದ ಬಂತು ಅಂತಾ ಪ್ರಧಾನಿ ಹೇಳಬೇಕು. ಭ್ರಷ್ಟಾಚಾರದ ಹಣದಲ್ಲಿ ಶಾಸಕರ ಖರೀದಿ ನಡೆದಿದೆ. ಈ ಸಾರಿ ಕಾಂಗ್ರೆಸ್ ನ 150 ಸೀಟ್ ಬರಲಿವೆ. ಬಿಜೆಪಿಗೆ 40 ಸೀಟ್ ಬರುತ್ವೆ, 40% ಕಮಿಷನ್ ತಿಂದವರಿಗೆ 40 ಸೀಟ್ ಬರುತ್ತೆ ಎಂದ ರಾಹುಲ್ ಗಾಂಧಿ ಲೇವಡಿ ಮಾಡಿದರು.

ಕಾರ್ಯಕರ್ತರ ಸ್ಫೂರ್ತಿ, ದೇವರ ಅನುಗ್ರಹದಿಂದ ಕಾಂಗ್ರೆಸ್‌ ಗೆ 141ಸ್ಥಾನಗಳಲ್ಲಿ ಗೆಲುವು

ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ.  ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
 

click me!