ಮೋದಿ ವಿಷದ ಹಾವು, ನೆಕ್ಕಿದರೆ ಕಥೆ ಮುಗೀತು: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ವ್ಯಾಪಕ ಆಕ್ರೋಶ

By Gowthami K  |  First Published Apr 27, 2023, 5:38 PM IST

58 ಇಂಚಿನ ಛಾತಿ ಅಂತಾರೆ.. ಟೇಪ್ ತೆಗೆದುಕೊಂಡು ಅಳತೆ ಮಾಡೋದಕ್ಕೆ ಆಗುತ್ತಾ.  ಏನು ಮಾಡಿದ್ದೀರಿ? ಮೋದಿ ಅಂದ್ರೆ ವಿಷದ ಹಾವು. ನೆಕ್ಕಿದರೇ ಮುಗೀತು ಕಥೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ನೀಡಿದ್ದಾರೆ.


ಗದಗ (ಏ.27): ಗದಗ ಜಿಲ್ಲೆಯ ನೆರೇಗಲ್ ಪಟ್ಟಣದಕ್ಕೆ  ಚುನಾವಣಾ ಪ್ರಚಾರ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದ ವೇಳೆ ಮೋದಿ ಅಂದ್ರೆ ವಿಷದ ಹಾವು, ನೆಕ್ಕಿದರೇ ಮುಗೀತು ಕಥೆ ಎಂದು ಹೇಳಿಕೆ ನೀಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.  ರೋಣ ಕಾಂಗ್ರೆಸ್ ಅಭ್ಯರ್ಥಿ ಜಿಎಸ್ ಪಾಟೀಲ ಪರವಾಗಿ ನಡೆಸಿದ ಚುನಾವಣಾ ಪ್ರಚಾರ ಭಾ‍ಣದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಮಾತನಾಡುತ್ತಾ ಮೋದಿಯವರ  ಮನ್ ಕೀ ಬಾತ್.. ಘರ್ ಕಿ ಬಾತ್, ನಾ ಖಾವೂಂಗಾ. ನಾ ಖಾನೇ ದೂಂಗಾ ಅಂತೀರಾ.  ತಿಂದವರು ನಿಮ್ಮ ಪಕ್ಕದಲ್ಲೇ ಕೂರುತ್ತಿದ್ದಾರೆ. ತಿಂದವರು ವಿದೇಶಕ್ಕೆ ಹಾರುತ್ತಿದ್ದಾರೆ. ಅವರನ್ನ ಯಾಕೆ ಹಿಡಿಯುತ್ತಿಲ್ಲ. ಪ್ರಧಾನಿ, ರಾಷ್ಟ್ರಪತಿಗೆ ಗುತ್ತಿಗೆದಾರರು ದೂರು ಕೊಟ್ಟರೂ ಕ್ರಮ ಇಲ್ಲ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳ್ತಾರೆ.  70 ವರ್ಷದಲ್ಲಿ ಏನೂ ಆಗದಿದ್ದರೇ ನೀವು ಪ್ರಧಾನಿ ಆಗುತ್ತಿರಲಿಲ್ಲ. ಪ್ರಜಾ ಪ್ರಭುತ್ವದ ಭದ್ರ ಬುನಾದಿ ಹಾಕಿರುವುದರಿಂದಲೇ ಚಾಯ್ ವಲಾ ಪ್ರಧಾನಿಯಾದ. ನನ್ನಂಥ ಕೂಲಿಕಾರನ ಮಗ ವಿರೋಧ ಪಕ್ಷದ ನಾಯಕ ಆದ. ಗಾಂಧಿಯನ್ನು ಹೊಡೆದ ಗೋಡ್ಸೆಯನ್ನು ಪ್ರೀತಿ ಮಾಡುತ್ತೀರಿ. ದಲಿತರ ವೋಟ್ ಗಾಗಿ ಇತ್ತೀಚೆಗೆ ಅಂಬೇಡ್ಕರ್ ಫೋಟೋ ಇಡುತ್ತೀರಿ ಎಂದು ಹೇಳಿದ್ದಾರೆ.

ಉದ್ಯೋಗ ಸೃಷ್ಟಿಯ ಸುಳ್ಳು ಹೇಳಿ ಯುವಕರ ದಾರಿ ತಪ್ಪಿಸಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಬಗ್ಗೆ ಹೇಳಿಕೆ ನೀಡಿದ್ದರು. ಸರ್ಕಾರಿ ಉದ್ಯೋಗ ಖಾಲಿ ಇವೆ ಭರ್ತಿ ಯಾಗುತ್ತಿಲ್ಲ. ರಾಜ್ಯ, ಕೇಂದ್ರದಲ್ಲಿ ಖಾಲಿ ಇರುವ ಉದ್ಯೋಗ ಭರ್ತಿಯಾಗುತ್ತಿಲ್ಲ. ಉದ್ಯೋಗ ಕೊಡದೇ ಇದ್ದರೇ ಯುವಕರು ನನ್ನ ಕಂಟ್ರೋಲ್ ನಲ್ಲಿರುತ್ತಾರೆ ಅನ್ನೋದು ಮೋದಿ ಯೋಜನೆ. ಸ್ವಾತಂತ್ರ್ಯ ಸಿಕ್ಕ ಮೇಲೆ 70 ಪರ್ಸೆಂಟ್ ಸಾಕ್ಷರತೆ ಮಾಡಿದೆ. ಇದರಲ್ಲಿ ಮೋದಿ, ಶಾ ಅವರೂ ಇದ್ದಾರೆ. ಅದಾನಿ ಅವರಿಗೆ ಎಲ್ಲ ರೀತಿಯಿಂದ ಸಪೋರ್ಟ್ ಮಾಡುತ್ತಾರೆ. ಅದಾನಿ ಆಸ್ತಿ ಕೋಟಿ ಕೋಟಿ ಹೆಚ್ಚಿಗೆಯಾಗಿದೆ.

Latest Videos

undefined

ಎಲ್ ಐಸಿ ದುಡ್ಡು ಸಾಲದ ರೂಪದಲ್ಲಿ ಅದಾನಿಗೆ ಕೊಟ್ಟಿದ್ದಾರೆ. ಏರ್ ಪೋರ್ಟ್ ಖರೀದಿಗೆ ಅದೇ ದುಡ್ಡನ್ನು ವ್ಯಯ ಮಾಡಿತ್ತಿದ್ದಾರೆ. ಆದ್ರೆ ನಮಗೆ ಜಿಎಸ್ ಟಿ  ಬೆಲೆ ಏರಿಕೆ ಬಿಸಿ. ಹಾಲಿನ ಮೇಲೆ ಟ್ಯಾಕ್ಸ್, ಪೆನ್ಸಿಲ್ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ಮುಂದಿನ ದಿನದಲ್ಲಿ ಗಾಳಿಯ ಮೇಲೂ ಟ್ಯಾಕ್ಸ್ ಹಾಕುತ್ತಾರೆ. ಇಂಥವರನ್ನ ದೂರ ಇಡಬೇಕು. ರೈತರ ಆದಾಯ ದ್ವಿಗುಣ ಮಾಡಿಲ್ಲ. ಎಮ್ ಎಸ್ ಪಿ ಹೆಚ್ಚಿಗೆ ಆಗಲಿಲ್ಲ. ರೈತರ ಬಗ್ಗೆ ಚಿಂತನೆ ಮಾಡುವವರು ಕಾಂಗ್ರೆಸ್ ನವರೋ, ಬಿಜೆಪಿಯವರೋ ನೀವೇ ನಿರ್ಧಾರ ಮಾಡಿ.

58 ಇಂಚಿನ ಛಾತಿ ಅಂತಾರೆ.. ಟೇಪ್ ತೆಗೆದುಕೊಂಡು ಅಳತೆ ಮಾಡೋದಕ್ಕೆ ಆಗುತ್ತಾ. ನೀವು ಮಾಡಿದ ಕೆಲಸ ಅಳತೆ ಮಾಡಬಹುದು. ಏನು ಮಾಡಿದ್ದೀರಿ? ಮೋದಿ ಅಂದ್ರೆ ವಿಷದ ಹಾವು. ನೆಕ್ಕಿದರೇ ಮುಗೀತು ಕಥೆ ಎಂದು ಬಿಜೆಪಿ ವಿರುದ್ಧ ಸಾಲು ಸಾಲು ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್‌ ಪ್ರಣಾಳಿಕೆ ಬಿಡುಗಡೆ: ರೈತನನ್ನು ಮದುವೆಯಾದರೆ 2 ಲಕ್ಷ ನೆರವು, ವರ್ಷಕ್ಕೆ 5 ಸಿಲಿಂಡರ್‌ ಉಚಿತ

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಧಂಗೆಯಾಗುತ್ತೆ ಅಂತಾ ಅಮಿತ್ ಶಾ ಹೇಳುತ್ತಾರೆ. ಕರ್ನಾಟಕದಲ್ಲಿ ಗುಜರಾತ್ ಮಾದರಿಯಲ್ಲಿ‌ ಧಂಗೆಯಾಗಿವೆಯಾ? ನಿಮ್ಮ ಮನೆಯಲ್ಲಿ ಒಂದು ನಾಯಿಯೂ ಸತ್ತಿಲ್ಲ. ದೇಶಕ್ಕಾಗಿ ಏನು ಮಾಡಿದ್ದೀರಿ. ದೇಶದ ಬಡವರಿಗೆ ಅನ್ನ ಕೊಡುವಂತೆ ಮಾಡಿದ್ದು ಕಾಂಗ್ರೆಸ್. ಬಡವರಿಗೆ ದುಡಿಯಲು ನರೇಗಾ ಯೋಜನೆ ಜಾರಿ ಮಾಡಿದೆವು. ದೇಶದ ಪ್ರಧಾನಿಯಾಗಿ ಹಳ್ಳಿ ತಾಲೂಕು ಅಡ್ಡಾಡುತ್ತಿದ್ದೀರಿ. ಮೋದಿಗೆ ನೋಡಿ ವೋಟ್ ಹಾಕಿ ಅಂತಿದ್ದಾರೆ. ಮೋದಿಯವರು ರಾಜ್ಯದ ಮುಖ್ಯಮಂತ್ರಿ ಆಗ್ತಾರಾ..? ಗುಜರಾತ್ ಕಾರ್ಪೊರೇಷನ್ ಇಲೆಕ್ಷನ್ ಗೂ ಇವರೇ, ಇಂಥ ಲಾಲಸೆ ಇರುವವರು. ಇಲ್ಲಿ ಇರುವ ಖುರ್ಚಿ ನೋಡಿದ್ರೂ ಅವರೇ ಕೂರುತ್ತಾರೆ.‌

Voter ID Scam: ಚಿಲುಮೆ ಸಂಸ್ಥೆ ಮಾದರಿಯಲ್ಲಿ ಮತ್ತೊಂದು ಸಂಸ್ಥೆಯಿಂದ ಮತದಾರರ ಮಾಹಿ

ಈ ಚುನಾವಣೆ ಅಂತ್ಯಂದ ದೊಡ್ಡ ಚುನಾವಣೆ‌. ರಾಜ್ಯದ ಚುನಾವಣೆ ಗೆದ್ದರೇ ದೇಶವನ್ನ ಗೆದ್ದಂತೆ. ಸಂಸದ ಸ್ಥಾನದಿಂದ ಅನರ್ಹಗೊಳಿಸಿ ರಸ್ತೆ ಮೇಲೆ ನಿಲ್ಲಿಸಿದ್ದಾರೆ. ಇಂದಿರಾ ಗಾಂಧಿಯವರ ಸದಸ್ಯ ಸ್ಥಾನ ಕಿತ್ತು ಹಾಕಿದ್ರು.79 ರಲ್ಲಿ ಕರೆದುಕೊಂಡು ಬಂದು ಚುನಾವಣೆ ನಡೆಸಿದೆವು. 80 ರಲ್ಲಿ ಸಂಪೂರ್ಣ ಬಹುಮತ ಬಂತು. ಈ ಬಾರಿಯೂ ಸಂಪೂರ್ಣ ಬಹುಮತ ಬರುತ್ತೆ‌. ರಾಜ್ಯದಲ್ಲಿ ಸರ್ಕಾರ ಬಂದರೇ ದೇಶದಲ್ಲಿ ಸರ್ಕಾರ ಬದಲಾವಣೆಯಾಗುತ್ತೆ. 40 ಪರ್ಸೆಂಟ್ ಕಮಿಷನ್ ಕೊಟ್ಟರೇ ನಿಮ್ಮ ಕೆಲಸ ಆಗುತ್ತೆ. ಇದು 40 ಪರ್ಸೆಂಟ್ ಕಮಿಷನ್ ಸರ್ಕಾರ. ಇವರಿಗೆ ಪಾಠ ಕಲಿಸಬೇಕು ಎಂದರು.

click me!