ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತ ವರನನ್ನು ಮದುವೆಯಾಗುವ ವಧಿವಿಗೆ 2 ಲಕ್ಷ ರೂ. ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು (ಏ.27): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ, ರೈತರಿಗೆ ಹಾಗೂ ಆಟೋ ಚಾಲಕರು ಸೇರಿದಂತೆ ಎಲ್ಲರಿಗೂ ಭರಪೂರ ಕೊಡುಗೆ ನೀಡುವ ಭರವಸೆ ನಿಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 123 ಸ್ಥಾನ ಪಡೆದು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳುತ್ತಿರುವ ಕುಮಾರಸ್ವಾಮಿ, ಅವರು ತಮ್ಮ ಪಂಚರತ್ನ ಯಾತ್ರೆಯಲ್ಲಿ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹಂಚಿಕೊಂಡಿರುವ ಹಾಗೂ ತಮ್ಮ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಪ್ರಣಾಳಿಕೆಯನ್ನು ಹೇಳಿದ್ದಾರೆ. ಇನ್ನು ಜೆಡಿಎಸ್ ಸರ್ಕಾರ ಅಧಿಕಾರಕಕ್ಕೆ ಬಂದರೆ ಇದರಲ್ಲಿ ವಿಶೇಷವಾಗಿ ರೈತ ಯುವಕರನ್ನು ಮದುವೆಯಾದರೆ ಯುವತಿಯರಿಗೆ 2 ಲಕ್ಷ ರೂ, ಸಹಾಯಧಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ!
ಬೊಮ್ಮಾಯಿ ಮೀಸಲಾತಿ ರದ್ದಿ ಪೇಪರ್ ಇದ್ದಂತೆ: ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಪ್ರಸ್ತುತ ರಾಜ್ಯದಲ್ಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹಲವು ಸಮುದಾಯಗಳಿಗೆ ಮೀಸಲಾತಿಯನ್ನು ನೀಡಿದೆ. ಆದರೆ, ಬೊಮ್ಮಾಯಿ ಮೀಸಲಾತಿ ವಿಚಾರ ರದ್ದಿ ಪೇಪರ್ ಆಗಿದೆ. ಮೀಸಲಾತಿ ಕೊಟ್ಟಿದ್ದಾರೆ ಅಂತ ಹೇಳಿಕೊಳ್ಳುವ ಅವರು, ಈ ಎರಡು ಸಮುದಾಯಕ್ಕೆ ಎಷ್ಟು ಗೌರವ ಕೊಟ್ಟಿದ್ದಾರೆ ಅಂತ ಗೊತ್ತಾಗುತ್ತದೆ. ಪಂಚಮಸಾಲಿ ಶ್ರೀಗಳನ್ನು ಚಿತಾವಣೆ ಮಾಡಿ ಬಿಸಿಲಿನಲ್ಲಿ ನಡೆಸಿದರು. ಪಾಪ ಅವರು ಬಿಸಿಲಿನಲ್ಲಿ ನಡೆದುಕೊಮಡು ಪಾದಯಾತ್ರೆಯನ್ನು ಮಾಡಿದರು. ಸಮಾನತೆ ಅನ್ನೋದು ಎಲ್ಲ ಸಮುದಾಯಕ್ಕೆ ದೊರಕಬೇಕು, ಇದು ನಮ್ಮ ಪಾಲಿಸಿ ಆಗಿದೆ ಎಂದು ಹೇಳಿದರು.
Karnataka Election: ಶಿವಮೊಗ್ಗ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ!
ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು ಸ್ವತಂತ್ರ ಸರ್ಕಾರ ಕೇಳ್ತಿದೀನಿ: ಈ ಹಿಂದೆ ನಾನು ಮುಖ್ಯಮಂತ್ರಿಯಾದರೆ ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದಂತೆ, ಸಾಲ ಮನ್ನಾ ಮಾಡಿದ್ದೆನು. ಜೊತೆಗೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ಅಧಿಕಾರಿಗಳನ್ನು ಇಟ್ಟುಕೊಂಡು 25 ಸಾವಿರ ಸಾಲಮನ್ನ ಮಾಡಿದೆ. ರಾಜ್ಯದಲ್ಲಿ ರೆವಿನ್ಯೂ ಇಲಾಖೆ ಒಂದೆ ಅಲ್ಲ, ಆರೋಗ್ಯ ಇಲಾಖೆ ಸೇರಿ ಹಲವಾರು ಇಲಾಖೆಯಲ್ಲಿ ಸಮಸ್ಯೆ ಇದೆ. ಮೆಡಿಕಲ್ ಕಾಲೇಜು ಅರ್ಜಿ ಹಾಕೋಕೆ ಎಷ್ಟು ಹಣ ಪಡೆದರು ಎನ್ನುವುದು ಕೂಡ ನನಗೆ ಮಾಹಿತಿ ಇದೆ. ಇದೆಲ್ಲದಕ್ಕೂ ಅಂತಿಮ ಇತಿಶ್ರಿ ಎಳೆಯಬೇಕು ಅಂತಲೇ ಸ್ವತಂತ್ರ ಸರ್ಕಾರ ಕೇಳ್ತಾ ಇರೋದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.