ಕೊಡಗು: ಮತದಾರರು ಅರೆಸೇನಾಪಡೆ ಸಿಬ್ಬಂದಿ ನಡುವೆ ಘರ್ಷಣೆ-ಲಾಠಿ ಚಾರ್ಜ್

By Ravi Janekal  |  First Published May 10, 2023, 8:51 PM IST

ಕೊಡಗು ಮತದಾನದ ವೇಳೆ ಮತದಾರರು ಮತ್ತು ಅರೆಸೇನಾಪಡೆ ಸಿಬ್ಬಂದಿ ನಡುವೆ ಘರ್ಷಣೆಯಾಗಿದ್ದು, ಮತದಾರರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಪರಿಣಾಮ ಮತದಾರರೊಬ್ಬರ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 
ಕೊಡಗು (ಮೇ.10) : ಬೆಟ್ಟ-ಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ 12 ಮತಗಟ್ಟೆಗಳಿಗೆ ನಕ್ಸಲರ ಭೀತಿಯಿತ್ತು. ಹೀಗಾಗಿ ಅಂತಹ ಬೂತ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಅರೆಸೇನಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅರೆ ಸೇನಾಪಡೆಯ ಭದ್ರತೆಯಲ್ಲಿ ಮತದಾನ ನಡೆಯಿತು. ಮತ್ತೊಂದೆಡೆ ಮತದಾರರು ಮತ್ತು ಅರೆಸೇನಾಪಡೆ ಸಿಬ್ಬಂದಿ ನಡುವೆ ಘರ್ಷಣೆಯಾಗಿದ್ದು, ಮತದಾರರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಪರಿಣಾಮ ಮತದಾರರೊಬ್ಬರ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. 

ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಸರ್ಕಾರಿ ಶಾಲೆಯಲ್ಲಿ 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆಯಿಂದಲೂ ನಿರಂತರವಾಗಿ ಬಿರುಸಿನ ಮತದಾನ ನಡೆದಿತ್ತು. ಬುಧವಾರ ಬಿರು ಬಿಸಿಲು ಇದ್ದ ಪರಿಣಾಮ ಜನರು ಆ ಬಿಸಿಲಿನಲ್ಲಿಯೇ ನಿಂತು ಮತದಾನ ಮಾಡುತ್ತಿದ್ದರು. ಈ ವೇಳೆ ಬಾಯಾರಿಕೆ ಆದ ಮತದಾರರು ಕುಡಿಯುವುದಕ್ಕೆ ನೀರನ್ನು ಕೇಳಿದ್ದಾರೆ. ಈ ವೇಳೆ ನೀರಿಲ್ಲದಿರುವುದಕ್ಕೆ ಮತದಾರರು ಅಸಮಾಧಾನ ವ್ಯಕ್ತಪಡಿಸಿ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇದು ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಅರೆಸೇನಾಪಡೆ ಸಿಬ್ಬಂದಿ ಮತದಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. 

Tap to resize

Latest Videos

undefined

Karnataka Assembly Election Exit Poll ಈ ಭಾರಿಯ ನಿರ್ಧಾರವೂ ಅತಂತ್ರವೇ? ಯಾರಿಗೂ ಇಲ್ಲ ಬಹುಮತ!...

ಏಕಾಏಕಿ ಲಾಠಿಚಾರ್ಜ್‌ನಿಂದಾಗಿ ಮತದಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಹುತೇಕ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ವಣಚಲು ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಮತಗಟ್ಟೆಯಲ್ಲಿ ಹೆಚ್ಚಿನ ಅರೆಸೇನಾಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮತಗಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು ವಿಶೇಷ. ಅದರಲ್ಲೂ ಮಧ್ಯಾಹ್ನ 12 ಗಂಟೆಯ ಸಮಯಕ್ಕೆ ಶೇ 50 ಕ್ಕೂ ಹೆಚ್ಚು ಮತದಾನವಾಗಿತ್ತು. ಕೊಡಗಿನ ಇಬ್ಬರು ಶಾಸಕರು ಎಲ್ಲರಂತೆ ಸರದಿಯಲ್ಲಿ ನಿಂತು ಮತದಾನ ಮಾಡಿದ್ದಾರೆ. 

ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್(Madikeri MLA MP appachhu ranjan), ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ(KG Bopaiah MLA) ಇಬ್ಬರು ಸರದಿಯಲ್ಲಿ ನಿಂತು ಮತದಾನ ಮಾಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರ(Madikeri assembly constituency)ದ ಸೋಮವಾರಪೇಟೆ ತಾಲ್ಲೂಕಿನ ತಮ್ಮ ಹುಟ್ಟೂರು ಕುಂಬೂರಿನ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ತಮ್ಮ ಪತ್ನಿ ಶೈಲಾ ಜೊತೆಗೆ ಆಗಮಿಸಿ ಮತದಾನ ಮಾಡಿದರು.

 ಇನ್ನು ಜಿಲ್ಲಾ ಕೇಂದ್ರ ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಿರ್ಮಿಸಿದ್ದ ಮತಗಟ್ಟೆಯಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಮತದಾನ ಮಾಡಿದರು. ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಆಗಮಿಸಿ ಮತದಾನ ಮಾಡಿದರು. ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ನಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಜನರು ಮತ ನೀಡುತ್ತಾರೆ. ನಾನು ಮತಯಾಚನೆಗೆ ಹೋದ ಕಡೆಯಲೆಲ್ಲಾ ಹಿರಿಯರು ಹರಸಿ, ಹಾರೈಸಿದ್ದಾರೆ. ನೀವು ಗೆದ್ದು, ಎಂಎಲ್ಎ ಆಗಬೇಕು ಎಂದು ಆಶೀರ್ವದಿಸಿದ್ದಾರೆ. ಹೀಗಾಗಿ ನಾನು ಮತ್ತೊಮ್ಮೆ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು. 

Kodagu: ಅಮೆರಿಕದಲ್ಲಿರುವ ಮೂವರು ಮಕ್ಕಳಿಂದ ತಂದೆ ಅಪ್ಪಚ್ಚು ರಂಜನ್ ಪರ ನಿರಂತರ ಪ್ರಚಾರ

ಇನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ನಾನು ಹಿಂದೆಂದೂ ಈ ರೀತಿಯ ಹಣ ಬಲದ ಚುನಾವಣೆಯನ್ನು ನೋಡಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ಊಹಿಸಲು ಅಸಾಧ್ಯವಾದಷ್ಟು ಪ್ರಮಾಣದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಆದರೆ ಜಿಲ್ಲೆಯ ಜನರು ಹಣಬಲಕ್ಕೆ ಸರಿಯಾದ ತಕ್ಕ ಉತ್ತರ ನೀಡಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕುಶಾಲನಗರ ತಾಲ್ಲೂಕಿನ ಮದಲಾಪುರದಲ್ಲಿ ಒಂದು ದಿನದ ಹಸುಗೂಸಿನ ಬಾಣಂತಿ ಅನುಷ ನೇರ ಆಸ್ಪತ್ರೆಯಿಂದ ನೇರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಇನ್ನು ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರು ಪತ್ನಿ ರೂಪಶ್ರೀಯೊಂದಿಗೆ ತೆರಳಿ ಮಡಿಕೇರಿ ತಾಲ್ಲೂಕು ಕಚೇರಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

click me!