ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ಎಲ್ಲರೂ ಭ್ರಷ್ಟರೇ ತುಂಬಿಕೊಂಡಿದ್ದಾರೆ. ಅದರಲ್ಲಿಯೂ ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರಿಗಳೆಂದರೆ ಭಾರೀ ಅಚ್ಚುಮೆಚ್ಚು ಎಂದು ಕೇಂದ್ರ ಸಚಿವ ಅಮಿತ್ ಶಾ ಟೀಕೆ ಮಾಡಿದರು.
ಬೆಂಗಳೂರು (ಏ.02): ಪ್ರಧಾನಿ ಮೋದಿ ಕಳೆದ 10 ವರ್ಷಗಳಿಂದ ಆಡಳಿತ ಮಾಡಿದರೂ ಒಂದೇ ಒಂದು ಭ್ರಷ್ಟಾಚಾರ ಆರೋಪವಿಲ್ಲ. ಆದರೆ. ಇಂಡಿಯಾ ಒಕ್ಕೂಟದಲ್ಲಿರುವವರೆಲ್ಲರೂ ಭ್ರಷ್ಟಾಚಾರಿಗಳು. ಅದರಲ್ಲಿಯೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರಿಗಳೆಂದರೆ ಅಚ್ಚುಮೆಚ್ಚು ಎಂದು ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ಮಾಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾವು 28ಕ್ಕೆ 28 ಸೀಟುಗಳನ್ನು ಗೆಲ್ಲಬೇಕು.ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಈ ಗುರಿ ಮುಟ್ಟೋಣ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಈವರೆಗೆ ವಿರೋಧ ಪಕ್ಷ ಮೋದಿ ವಿರುದ್ಧ ಕೇವಲ 10 ಪೈಸೆಯ ಭ್ರಷ್ಟಾಚಾರ ಆರೋಪ ಮಾಡಿರಲಿಲ್ಲ. ಆದರೆ, ಕಾಂಗ್ರೆಸ್ ಕಾಲದಲ್ಲಿ 12 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ. INDI ಕೂಟದಲ್ಲಿ ಎಲ್ಲರೂ ಭ್ರಷ್ಟಾಚಾರ ಪ್ರಿಯರೇ ಆಗಿದ್ದಾರೆ. ಅದರಲ್ಲಿಯೂ ಕರ್ನಾಟಕ ಡಿಸಿಎಂ ಡಿ.ಕೆ. ಶಿಕೆವಕುಮಾರ್‌ಗೆ ಭ್ರಷ್ಟಾಚಾರಿಗಳೆಂದರೆ ಅಚ್ಚುಮೆಚ್ಚು ಎಂದು ಟೀಕೆ ಮಾಡಿದರು.
undefined
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಕರೆ ಮಾಡಿ ದೆಹಲಿಗೆ ಬುಲಾವ್ ಮಾಡಿದ ಕೇಂದ್ರ ಸಚಿವ ಅಮಿತ್ ಶಾ
ಕಾಂಗ್ರೆಸ್‌ನವರು ಲೋಕತಂತ್ರ ಉಳಿಸಿ ಅಂತಿದ್ದಾರೆ. ಲೋಕತಂತ್ರಕ್ಕೆ ಏನಾಗಿದೆ? 2014 ರವರೆಗೆ ಭ್ರಷ್ಟಾಚಾರ ನಡೀತಿತ್ತು. ಭ್ರಷ್ಟಾಚಾರಿಗಳಿಗೆ ಜೈಲಿಗೆ ಹಾಕುವ ಕೆಲಸ ಆಗ್ತಿದೆ. ಕರ್ನಾಟಕ ಸರ್ಕಾರ ಕೆಲಸ ಮಾಡ್ತಿಲ್ಲ, ಅಭಿವೃದ್ಧಿ ಆಗ್ತಿಲ್ಲ. ಸಿಎಂಗೆ ತಮ್ಮ ಕುರ್ಚಿ ಉಳಿಸಿಕೊಳ್ಳೋದೇ ಕೆಲಸ ಆಗಿದೆ, ಇನ್ನೊಬ್ಬರು ಅವರ ಕುರ್ಚಿ ಎಳೀತಿದ್ದಾರೆ. ಒಂದು ಕುಟುಂಬದ ಕಪಿಮುಷ್ಠಿಯಲ್ಲಿರುವ INDI ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈ ಬಾರಿ ನಾವು 400ಕ್ಕೂ ಅಧಿಕ ಸೀಟು ಗೆಲ್ಲುವ ಗುರಿ ಹೊಂದಿದ್ದೇವೆ. ಕರ್ನಾಟಕದಿಂದ 2019ರಲ್ಲಿ ಶೇ.51 ಪರ್ಸೆಂಟ್ ವೋಟ್ ಕೊಟ್ಟು 27 ಸೀಟ್ ನಮಗೆ ಕೊಟ್ಟಿದ್ದೀರಿ. ಆದರೆ ಈ ಬಾರಿ ಶೇ.70% ವೋಟ್ ಕೊಟ್ಟು 28ಕ್ಕೆ 28 ಸೀಟ್ ಕೊಡಬೇಕು. ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಈ ಗುರಿ ಮುಟ್ಟೋಣ ಎಂದು ಕರೆ ನೀಡಿದರು.
ಮೋದಿ ಮತ್ತೆ ಗೆದ್ದರೆ ಭಾರತ ಜಗತ್ತಿನ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ: ಪ್ರಧಾನಿ ಮೋದಿ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೆ ಅನುಕೂಲವಾಗಿದೆ.. 10 ವರ್ಷದ ಬಳಿಕ ಜನಾಶೀರ್ವಾದ ಪಡೆಯಲು ಬಂದಿದ್ದಾರೆ. ನಮ್ಮ ಸರ್ಕಾರ ಕಳೆದ ಪ್ರಣಾಳಿಕೆಯ ಬರವಸೆ ಈಡೇರಿಸಿ ಮತ ಕೇಳಲು ಬಂದಿದ್ದೇವೆ. ಕಾಶ್ಮೀರದಲ್ಲಿರುವ 370 ಕಾಯ್ದೆಯನ್ನು ರದ್ದುಗೊಳಿಸಿದರೆ ರಕ್ತ ಹರಿಯುತ್ತದೆ ಎಂದು ರಾಹುಲ್ ಬಾಬಾ ಹೇಳುತ್ತಿದ್ದರು. ಆದರೆ, ಇದು ಮೋದಿ ಸರ್ಕಾರ.., ಆ ರೀತಿ ಏನು ಆಗಲ್ಲ. ಮೋದಿ ಸಿಎಎ ಜಾರಿಗೆ ತಂದರೂ, ಕಾಂಗ್ರೆಸ್ ನವರು ವಿರೋಧಿಸಿದರು. ಸಿಎಂ ಸಿದ್ದರಾಮಯ್ಯ ಉತ್ತರಿಸಲಿ, 10 ವರ್ಷ ಯುಪಿಎ ಅಧಿಕಾರದಲ್ಲಿದ್ದಾಗ ಏನಾಯ್ತು? ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗುತ್ತಿದ್ದರು. ಆದರೂ, ಮನಮೋಹನ್ ಸಿಂಗ್ ಮೌನವಾಗಿರುತ್ತಿದ್ದರು. ಮೋದಿಯವರು ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದರು. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ದೇಶದ ಆರ್ಥಿಕತೆ 11 ನೇ ಸ್ಥಾನದಲ್ಲಿ ಇತ್ತು, ಈಗ 5 ನೇ ಸ್ಥಾನಕ್ಕೆ ಬಂದಿದೆ. ಈಗ ಮತ್ತೆ ಮೋದಿ ಗೆಲ್ಲಿಸಿದರೆ ದೇಶ 3ನೇ ದೊಡ್ಡ ಆರ್ಥಿಕತೆಗೆ ಏರಲಿದೆ ಎಂದು ತಿಳಿಸಿದರು.
ರಾಮಲಲ್ಲಾ ವಿಚಾರದಲ್ಲಿ ಕಾಂಗ್ರೆಸ್ ತುಷ್ಠೀಕರಣ ಮಾಡುತ್ತಿದೆ: ಕಳೆದ 50 ವರ್ಷಗಳಿಂದ ದೇಶದಲ್ಲಿ ಆಡಳಿತದಲ್ಲಿದ್ದರೂ ರಾಮಲಲ್ಲ ವಿಚಾರ ಬಗೆಹರಿಸಿರಲಿಲ್ಲ. ಮೋದಿಯವರು ರಾಮಮಂದಿರ ಕಟ್ಟಿದ್ದು, ರಾಮನ ಪ್ರಾಣ ಪ್ರತಿಷ್ಠಾಪನೆಯೂ ಮಾಡಿದರು. ಸೋನಿಯಾ, ರಾಹುಲ್, ಖರ್ಗೆ ಎಲ್ಲರಿಗೂ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ಇತ್ತು. ವೋಟ್ ಬ್ಯಾಂಕ್ ಹೋಗಿ ಬಿಡುತ್ತೆ ಅನ್ನೋ ಭಯದಿಂದ ಅವರು ಬರಲಿಲ್ಲ. ನಾವು ರಾಮ ಮಂದಿರ ನಿರ್ಮಿಸಿದ್ದೇವೆ. ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಮಾಡುತ್ತದೆ. ವೋಟ್ ಬ್ಯಾಂಕ್ ಹಾಳಾಗತ್ತೆ ಎಂದು ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಾ ಬರುತ್ತಿದೆ.ಈಗ ಗಗನಚುಂಬಿ ಕಟ್ಟಡದಲ್ಲಿ ರಾಮಲಲ್ಲಾ ವಿರಾಜಮಾನವಾಗಿದೆ ಎಂದರು.
ಕಳೆದ ಬಾರಿ ನನ್ನಿಂದಲೇ ಪ್ರಜ್ವಲ್ ರೇವಣ್ಣ ಗೆದ್ದಿದ್ದು, ಈ ಬಾರಿ ನಾನೇ ಹೋಗಿ ಸೋಲಿಸುತ್ತೇನೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕ ಬರ ಪರಿಹಾರ ಪ್ರಸ್ತಾವನೆಯನ್ನು 3 ತಿಂಗಳು ವಿಳಂಬವಾಗಿ ಕಳಿಸಿದೆ: ಕರ್ನಾಟಕದಲ್ಲಿ ಬರ ಇದೆ. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಬರ ಪರಿಹಾರ ಪ್ರಸ್ತಾವನೆ ಕಳಿಸುವುದು 3 ತಿಂಗಳು ವಿಳಂಬ ಮಾಡಿದೆ. ಇವತ್ತು ಬರಕ್ಕೆ ಪರಿಹಾರ ಕೊಡ್ತಿಲ್ಲ ಅಂತ ಚುನಾವಣೆ ವೇಳೆ ಆರೋಪಿಸ್ತಿದ್ದಾರೆ. ಯುಪಿಎ ಇದ್ದ ಹತ್ತು ವರ್ಷ ಇವರೆಷ್ಟು ಅನುದಾನ ಕೊಟ್ರು, ನಾವೆಷ್ಟು ಕೊಟ್ವಿ ಅಂತ ತಿಳಿದುಕೊಳ್ಳಲಿ. ಯುಪಿಎ ಅಧಿಕಾರದಲ್ಲಿದ್ದ 10 ವರ್ಷದಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ 1.52 ಲಕ್ಷ ಕೋಟಿ ರೂ. ಅನುದಾನ. ಆದರೆ, ಮೋದಿಯವರು ಕಳೆದ 10 ವರ್ಷದಲ್ಲಿ ಕೊಟ್ಟಿದ್ದು 4.91 ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಅನುದಾನ ಕೊಡಲಾಗಿದೆ. ಇದಲ್ಲದೇ ಬೇರೆಬೇರೆ ಯೋಜನೆಗಳಿಗೆ ಅನುದಾನ ಕೊಡಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಿದ್ದರೆ ಅದು ಮೋದಿ ಮಾತ್ರ ಎಂದು ಹೇಳಿದರು.