ಅನೇಕ ಸಚಿವರೇ ಸಿಎಂ ಸಿದ್ದರಾಮಯ್ಯ ಪತ್ನಿಯನ್ನ ನೋಡಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ 

By Kannadaprabha News  |  First Published Aug 10, 2024, 10:18 AM IST

ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿ ಅವರು ಎಂದೂ ಅಧಿಕಾರ ದುರ್ಬಳಕೆ ಮಾಡಿಕೊಂಡವರಲ್ಲ. ಮುಖ್ಯಮಂತ್ರಿ ಪತ್ನಿಯಾಗಿದ್ದರೂ ದೇವಾಲಯಕ್ಕೆ ಹೋದರೆ ಸರದಿ ಸಾಲಿನಲ್ಲಿ ನಿಂತವರು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.


ಬೆಂಗಳೂರು (ಆ.10) : ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿ ಅವರು ಎಂದೂ ಅಧಿಕಾರ ದುರ್ಬಳಕೆ ಮಾಡಿಕೊಂಡವರಲ್ಲ. ಮುಖ್ಯಮಂತ್ರಿ ಪತ್ನಿಯಾಗಿದ್ದರೂ ದೇವಾಲಯಕ್ಕೆ ಹೋದರೆ ಸರದಿ ಸಾಲಿನಲ್ಲಿ ನಿಂತವರು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನಮ್ಮಲ್ಲಿನ ಅನೇಕ ಸಚಿವರೇ ಅವರ ಮುಖ ನೋಡಿಲ್ಲ. ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದಾಗಲೂ ಅವರು ಕಾಣಿಸಿಕೊಳ್ಳಲಿಲ್ಲ. ಅಂತಹ ಹೆಣ್ಣಿನ ಬಗ್ಗೆ ಅಧಿಕಾರ ದುರುಪಯೋಗದ ಆರೋಪ ಮಾಡುತ್ತೀರಲ್ಲಾ?  ನಿಮ್ಮ ಈ ಪಾಪವನ್ನು ಮುಖ್ಯಮಂತ್ರಿಗಳು ಹಾಗೂ ಪಾರ್ವತಿ ಅವರು ಕ್ಷಮಿಸಿದರೂ ಬೆಟ್ಟದ ಮೇಲಿರುವ ತಾಯಿ ಚಾಮುಂಡೇಶ್ವರಿ ಕ್ಷಮಿಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Tap to resize

Latest Videos

ಸಿದ್ದು ವರ್ಷನ್‌-2 ಅಂದ್ರೆ ಬನಾನಾ ರಿಪಬ್ಲಿಕ್‌! - ಅರವಿಂದ್ ಬೆಲ್ಲದ್ ವಿಶೇಷ ಅಂಕಣ 

click me!