ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ವಿಚಾರದಲ್ಲಿ ಸರ್ಕಾರದ ಮೇಲೆ ಯಾವ ಒತ್ತಡವೂ ಇಲ್ಲ, ಏನೂ ಇಲ್ಲ. ನಾನು ವಿಚಾರಿಸಿದ್ದೇನೆ. ಪ್ರಕರಣದಲ್ಲಿ 13 ಆರೋಪಿಗಳು ಇದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸ್ಪಷ್ಟನೆ ನೀಡಿದರು.
ಬೆಂಗಳೂರು (ಜೂ.14): ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ವಿಚಾರದಲ್ಲಿ ಸರ್ಕಾರದ ಮೇಲೆ ಯಾವ ಒತ್ತಡವೂ ಇಲ್ಲ, ಏನೂ ಇಲ್ಲ. ನಾನು ವಿಚಾರಿಸಿದ್ದೇನೆ. ಪ್ರಕರಣದಲ್ಲಿ 13 ಆರೋಪಿಗಳು ಇದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸ್ಪಷ್ಟನೆ ನೀಡಿದರು.
ದರ್ಶನ್ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಆರೋಪ ವಿಚಾರವಾಗಿ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಳಗ್ಗೆಯಿಂದ ಟಿವಿಯವರು ಕ್ಯಾಮರಾ ಹಾಕೊಂಡು ಕುಳಿತಿರ್ತಿರಿ ಪೊಲೀಸರಿಗೆ ಫ್ರೀಯಾಗಿ ಕೆಲಸ ಮಾಡಲು ಬಿಡಿ. ನಮ್ಮ ಮಿನಿಸ್ಟರ್ ಇದರಲ್ಲಿ ಇನ್ವಾಲ್ವ್ ಆಗಿಲ್ಲ. ಯಾರೂ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ಪ್ರಕರಣದಲ್ಲಿ ನಾವ್ಯಾರೂ ರೆಸ್ಪಾನ್ಸ್ ಸಹ ಮಾಡ್ತಿಲ್ಲ ಎಂದರು.
'ದರ್ಶನ್ ಕೇಸ್ ಆಗಿ 24 ಗಂಟೆ ಆದ್ಮೇಲೆ ನನಗೆ ಗೊತ್ತಾಗಿದ್ದು, ಯಾರೂ ಸಂಪರ್ಕಿಸಿಲ್ಲ': ಡಿಕೆ ಶಿವಕುಮಾರ
ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧಿಸುವ ವಿಚಾರದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಇದರ ಬಗ್ಗೆ ನಾನು ಜಾಸ್ತಿ ತಿಳಿದುಕೊಂಡಿಲ್ಲ. ಕಾಂಗ್ರೆಸ್ ಯಾರ ಮೇಲೂ ದ್ವೇಷ ಮಾಡೊಲ್ಲ. ಇಳಿವಯಸ್ಸಿನಲ್ಲಿ ಯಡಿಯೂರಪ್ಪ ಅವರ ಪರಿಸ್ಥಿತಿ ನೋಡಿ ಅಯ್ಯೋ ಅನಿಸುತ್ತೆ. ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ. ರಾಹುಲ್ ಗಾಂಧಿ ಕಷ್ಟ ಅವರಿಗೆ. ಅವರ ಮೇಲೆ ಕೇಸ್ ಆಗಿದ್ದು ಯಾವ ರಾಜಕಾರಣ? ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿಯವರು. ರಾಹುಲ್ ಗಾಂಧಿಯವರೇನು ಎಐಸಿಸಿ ಅಧ್ಯಕ್ಷರಾ? ಅವರೇನು ಜಾಹೀರಾತು ಕೊಟ್ಟಿದ್ರ? ಜಾಹೀರಾತು ಕೊಟ್ಟಿದ್ದು ಕೆಪಿಸಿಸಿ. ನಮ್ಮ ಮೇಲೆ ಕೇಸ್ ಹಾಕಿದ್ದಕ್ಕೆ ನಾವು ಕೋರ್ಟ್‌ಗೆ ಹೋಗಲಿಲ್ಲವ? ವಿಜಯೇಂದ್ರಗೆ ಕಾಮನ್‌ಸೆನ್ಸ್ ಇರಲಿಲ್ಲವ? ಎಂಎಲ್‌ಸಿ ಹಾಗೂ ಬಿಜೆಪಿ ಅಡ್ವೊಕೇಟ್ ಅಸೋಸಿಯೇಶನ್ ಅಧ್ಯಕ್ಷರ ಕೈಯಲ್ಲಿ ಕೇಸ್ ಹಾಕಿಸಿದ್ದಿರಿ. ನಾವು ಅಂತಹ ನೀಚ ರಾಜಕಾರಣ ಮಾಡಲ್ಲ ಎಂದು ತಿರುಗೇಟು ನೀಡಿದರು.
ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್: ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು?
ಇನ್ನು ಕಾಂಗ್ರೆಸ್ ಒಕ್ಕಲಿಗ ನಾಯಕರ ಜೊತೆ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿದ ಡಿಸಿಎಂ, ಲೋಕಸಭಾ ಚುನಾವಣೆಯಲ್ಲಿ ಯಾಕೆ ಈ ರೀತಿಯ ವೋಟಿಂಗ್ ಆಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕಿತ್ತು. ಅದಕ್ಕಾಗಿ ಮೀಟಿಂಗ್ ನಡೆಸಿದ್ದೇವೆ. ಸೋತಿದ್ದೇವೆ ಅದನ್ನು ನಾವು ಒಪ್ಪಿಕೊಳ್ತಿವಿ ರಾಜಕಾರಣದಲ್ಲಿ ಇದೆಲ್ಲ ನಡೆಯುತ್ತೆ. ಹಿಂದೆ ಚಲುವರಾಯಸ್ವಾಮಿ, ಬಾಲಕೃಷ್ಣ ಇವರೆಲ್ಲರೂ ಸೋತಿದ್ದರು ಆದರೆ ಪುನಃ ವಾಪಸ್ ಗೆದ್ದಿದ್ದಾರೆ. ಸೋಲುವುದು, ಗೆಲ್ಲುವುದು ಇವೆಲ್ಲವೂ ಪರ್ಮನೆಂಟ್ ಅಲ್ಲ. ಒಮ್ಮೆ ಸೋಲುತ್ತೀವಿ, ಇನ್ನೊಮ್ಮೆ ಗೆಲ್ಲುತ್ತೇವೆ. ಆರು ತಿಂಗಳಿಗೆಲ್ಲ ಜನರ ಬದಲಾವಣೆ. ಲೋಕಸಭಾ ಚುನಾವಣೆಯಲ್ಲಿ ನಾವು ಹಿಂದೆ ಒಂದೇ ಸೀಟ್ ಗೆದ್ದಿದ್ವಿ, ಈ ಬಾರಿ 9 ಸೀಟ್ ಗೆದ್ದಿದ್ದೇವೆ. ನಾಲ್ಕೈದು ಸೀಟು ಕಡಿಮೆ ಆಗಿದೆ. ಹೀಗಾಗಿ ಕಾರ್ಯಕರ್ತರು ಯಾರೂ ಚಿಂತೆ ಮಾಡುವುದು ಬೇಡ. ನನಗೆ ನಂಬಿಕೆ ಇದೆ 2028ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ. ನಾನು ಸಿದ್ದರಾಮಯ್ಯ ಒಟ್ಟಿಗೆ ದುಡಿದು ಈ ಸರ್ಕಾರವನ್ನು ಭದ್ರಗೊಳಿಸುತ್ತೇವೆ ಎಂದು ಭರವಸೆ ನೀಡಿದರು.