ಸುಧಾಕರ್, ನಾವೆಲ್ಲ ಒಂದೇ: ನಮಗೋಸ್ಕರ ನೀವ್ಯಾಕೆ ಬಟ್ಟೆ ಹರಿದುಕೊಳ್ತೀರಿ?, ಪ್ರದೀಪ್ ಈಶ್ವರ್

By Girish Goudar  |  First Published Jun 14, 2024, 11:39 AM IST

ರಾಜಕೀಯದಲ್ಲಿ ನಾವೆಲ್ಲ ಒಂದೇ ಎಂದು ಹೇಳುವ ಮೂಲಕ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿದ ಶಾಸಕ ಪ್ರದೀಪ್ ಈಶ್ವರ್, ನಮಗೋಸ್ಕರ ನೀವು ಯಾಕೆ ಬಟ್ಟೆ ಹರಿದುಕೊಳ್ಳುತ್ತೀರಾ?. ಸುಧಾಕರ್ ದೆಹಲಿಯಲ್ಲಿ ಇರ್ತಾರೆ ನಾನು ಬೆಂಗಳೂರಿನಲ್ಲಿ ಇರ್ತೀನಿ, ನಾವೆಲ್ಲ ಒಂದೇ. ನೀವ್ಯಾಕೆ ಗಲಾಟೆ ಮಾಡಿಕೊಂಡು ಸಮಸ್ಯೆ ಮಾಡಿಕೊಳ್ಳುತ್ತೀರಾ? ಎಂದು ಹೇಳಿದ್ದಾರೆ. 


ಚಿಕ್ಕಬಳ್ಳಾಪುರ(ಜೂ.14):  ಡಾ.ಕೆ.ಸುಧಾಕರ್ ಅವರಿಗೆ ಜನಾಭಿಪ್ರಾಯ ಸಿಕ್ಕಿದೆ. ಸಂಸದರಾಗಿರುವುದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಸುಧಾಕರ್ ಅವರು ಒಳ್ಳೆಯ ಕೆಲಸ ಮಾಡಿಕೊಂಡು ಹೋಗಲಿ. ನನ್ನ ರಾಜೀನಾಮೆ ಸವಾಲನ್ನು ಸ್ವೀಕರಿಸಿಲ್ಲ. ಹೀಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟಪಡಿಸಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್ ಅವರು, ರಾಜಕೀಯದಲ್ಲಿ ನಾವೆಲ್ಲ ಒಂದೇ ಎಂದು ಹೇಳುವ ಮೂಲಕ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿದ್ದಾರೆ. 

Tap to resize

Latest Videos

ಪ್ರದೀಪ್‌ ಈಶ್ವರ್ ಕೆಲವೇ ಕ್ಷಣಗಳಲ್ಲಿ ರಾಜೀನಾಮೆ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್!

ನಮಗೋಸ್ಕರ ನೀವು ಯಾಕೆ ಬಟ್ಟೆ ಹರಿದುಕೊಳ್ಳುತ್ತೀರಾ?. ಸುಧಾಕರ್ ದೆಹಲಿಯಲ್ಲಿ ಇರ್ತಾರೆ ನಾನು ಬೆಂಗಳೂರಿನಲ್ಲಿ ಇರ್ತೀನಿ, ನಾವೆಲ್ಲ ಒಂದೇ. ನೀವ್ಯಾಕೆ ಗಲಾಟೆ ಮಾಡಿಕೊಂಡು ಸಮಸ್ಯೆ ಮಾಡಿಕೊಳ್ಳುತ್ತೀರಾ? ಎಂದು ಹೇಳಿದ್ದಾರೆ. 
ಶಾಸಕ ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರದಲ್ಲಿ ಇಂದು ಮತ್ತೆ ನಮಸ್ತೆ ಚಿಕ್ಕಬಳ್ಳಾಪುರ ಶುರು ಮಾಡಿದ್ದಾರೆ. 

click me!